ಸಾಲಮನ್ನಾ ಯೋಜನೆಯಿಂದ 164 ರೈತರಿಗೆ ಅನ್ಯಾಯ: ಪ್ರತಿಭಟನೆ

0
19

ತುರುವೇಕೆರೆ

   ಸರ್ಕಾರದ ಸಾಲಮನ್ನಾ ಯೋಜನೆಯಿಂದ ಸುಮಾರು 164 ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ತಾಲ್ಲೂಕಿನ ಕೋಳಘಟ್ಟ ಸಹಕಾರ ಸಂಘದ ಸದಸ್ಯರುಗಳು ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರುಗಳನ್ನು ಕಚೇರಿಯಲ್ಲಿ ಕೂಡಿ ಹಾಕಿ ಪ್ರತಿಭಟಿಸಿದ ಘಟನೆ ಶನಿವಾರ ನಡೆದಿದೆ.

   ತಾಲ್ಲೂಕಿನ ಕೋಳಘಟ್ಟ ಸಹಕಾರ ಸಂಘದ ಸದಸ್ಯರುಗಳು ಸಾಲ ಪಡೆದಿದ್ದು ಅದರಲ್ಲಿ 164 ರೈತರು ಜೂನ್ 17 ಕ್ಕೆ ಬಡ್ಡಿ ಪಾವತಿಸಿ ದಾಖಲೆಗಳನ್ನು ನೀಡಿ ಸಾಲ ಮರುಪಾವತಿ ಮಾಡಿಕೊಡುವಂತೆ ಸಹಕಾರ ಸಂಘಕ್ಕೆ ದಾಖಲೆಗಳನ್ನು ನೀಡಿದ್ದಾರೆ. ಆದರೆ ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿಗಳು 164 ರೈತರ ದಾಖಲಾತಿಗಳನ್ನು ಮೇಲಿನ ಅಧಿಕಾರಿಗಳಿಗೆ ನೀಡುವಲ್ಲಿ ವಿಫಲವಾಗಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಜೂನ್ 10 ರವರೆವಿಗೂ ಸಾಲ ಮನ್ನಾ ಮಾಡಿದ್ದಾರೆ. ಆದರೆ ಕಾರ್ಯದರ್ಶಿ ಹಾಗೂ ಅಧ್ಯಕ್ಷರು ಸೇರಿ ಸರಿಯಾಗಿ ದಾಖಲೆಗಳನ್ನು ನೀಡದೆ ರೈತರಿಗೆ ಸಾಲಮನ್ನಾ ಲಾಭ ಸಿಗುವಲ್ಲಿ ಅನ್ಯಾಯವಾಗಿದೆ.

   ಆದ್ದರಿಂದ ನಮಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಸಹಕಾರ ಸಂಘಕ್ಕೆ ಬೀಗ ಜಡಿದು ಸಂಘದ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಬಸಪ್ಪ, ನಿರ್ದೇಶಕರಾದ ಶಿವಾನಂದ್, ಕಾಂತರಾಜು, ಕುಮಾರ್, ಎ.ಮಹಾಲಿಂಗಯ್ಯ, ವೀರೇಂದ್ರಪಾಟೀಲ್, ನಾಗರಾಜು, ಯೋಗನಂದ್‍ರವರನ್ನು ಬೆಳಿಗ್ಗೆಯಿಂದ ಸಂಜೆವರೆವಿಗೂ ಕೂಡಿ ಹಾಕಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ರೇಣುಕಪ್ಪ, ಪ್ರಗತಿ, ರಾಜಣ್ಣ ಸೇರಿದಂತೆ ನೂರಾರು ರೈತರು ಇದ್ದರು.

LEAVE A REPLY

Please enter your comment!
Please enter your name here