ಸಾಲ ಭಾದೆ ತಾಳಲಾರದೆ ರೈತ ಆತ್ಮಹತ್ಯೆ

0
28

ಸಿರಿಗೇರಿ

               ದಾಸಾಪುರ ಗ್ರಾಮದಲ್ಲಿ ಕಾಗೆ ಅಂಬರೇಶ (28) ಎನ್ನುವ ರೈತ ಶನಿವಾರ ರಾತ್ರಿ ಸಮಯದಲ್ಲಿ ಸಾಲಭಾದೆ ತಾಳಲಾರದೆ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿದ್ದರಿಂದ ಕುಟುಂಬದವರು ಬಳ್ಳಾರಿ ವಿಮ್ಸಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಫ¯ಕಾರಿಯಾಗದೆ ಬಾನುವಾರ ಬೆಳಿಗ್ಗೆ 8 ಘಂಟೆಗೆ ಸಾವನಪ್ಪಿದಾನೆ, ಸ್ವಂತ ಜಮೀನ್ ಒಂದು ಎಕ್ಕರೆ 15 ಸೆಂಟ್ಸ್ ನಲ್ಲಿ ಭತ್ತ ಬೆಳೆ ಇದ್ದು ಜೊತೆಗೆ ಬೇರೆಯವರ 8 ಎಕ್ಕರೆ ಜಮೀನು ಗುತ್ತಿಗೆ ಪಡೆದು ಮಣೆಸಿನ ಬೆಳೆ ಬಿತ್ತನೆ ಮಾಡಿದ್ದಾನೆ ಪರಿಣಾಮ ಮೂರ ವರ್ಷದಿಂದ ಮಳೆಯಿಲ್ಲದೆ ಬೆಳೆಗಳು ಒಣಗಿ ನಷ್ಟವಾಗಿದ್ದರಿಂದ 8ಲಕ್ಷ ಖಾಸಗಿ ಸಾಲದ ಬಾಧೆ ತಾಳದೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಈ ಕುರಿತು ಶಿರಿಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

                ನೊಂದ ಕುಟುಂಬಕ್ಕೆ ಶಾಸಕ ಎಮ್.ಎಸ್.ಸೋಮಲಿಂಗಪ್ಪ ಬೇಟಿ ನೀಡಿ ಸಾಂತ್ವಾನ ಹೇಳಿ ವಯಕ್ತಿಕವಾಗಿ 10 ಸಾವಿರ ರೂ ಸಹಾಯದಾನ ನೀಡಿ ಮಾತನಾಡಿದ ಶಾಸಕ ಸೋಮಲಿಂಗಪ್ಪ ಮೃತ ಕುಟುಂಬಕ್ಕೆ ಅತಿ ಬೇಗನೆ ಸರಕಾರಿ ಸೌಲಭ್ಯಗಳನ್ನು ವದಗಿಸುವುದಕ್ಕೆ ಸಂಭಂದ ಪಟ್ಟ ಅಧಿಕಾರಿಗಳ ಬಳಿ ಮಾತನಾಡುತ್ತನೆ.ಅದರೆ ಸಾಲಬಾದೆಗೆ ಮತ್ತು ಇನ್ನಿತರ ಕಷ್ಟಗಳಿಗೆ ರೈತರು ಆತ್ಮ ಹತ್ಯ ಪರಿಹಾರವಲ್ಲಾ. ಕುಟುಂಬವನ್ನು ಬೀದಿಗೆ ತರುವ ಕೆಲಸ ವಾಗುತ್ತೆ ಅದ್ದರಿಂದ ಯಾರೆ ರೈತರಾಗಿರಲಿ ಆತ್ಮ ಹತ್ಯ ಮಾಡಿಕೊಳ್ಳಬೇಡಿ ಎಂದರು 

                ಸ್ಥಳಕ್ಕೆ ತೆಕ್ಕಲಕೋಟೆ ಕೃಷಿ ಅಧಿಕಾರಿ ಶಿವಪ್ಪ ಬಾರಿಗಿಡದ ಹಾಗೂ ವಿ ಎ ಗುಡುದೇಶ್ ಬೇಟಿ ನೀಡಿದರು. ಮೃತನಿಗೆ ಒಂದು ಗಂಡು ಮಗು,ಒಂದು ಹೆಣ್ಣು ಮಗು ಇದ್ದು. ಪತ್ನಿ ಗರ್ಬಿಣಿ ಇದ್ದಾರೆ.

LEAVE A REPLY

Please enter your comment!
Please enter your name here