ಸಾವಿನ ಜೊತೆಗೆ ಶಾಲಾ ಮಕ್ಕಳ ಹೋರಾಟ

0
14

ಶಿರಾ:

  ಶಾಲೆ ಅಂದ ಮೇಲೆ ಮಕ್ಕಳ ರಕ್ಷಣೆಗೆಂದು ಶಾಲೆಗೊಂದು ಕಾಂಪೌಂಡ್ ಸೇರಿದಂತೆ ಮಕ್ಕಳ ದಿನ ನಿತ್ಯದ ರಕ್ಷಣೆಗೆ ಸರ್ಕಾರ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲೇಬೇಕಾಗುತ್ತದೆ ನಿಜ. ಆದರೆ ಇಲ್ಲೊಂದು ಶಾಲೆಗೆ ಕಾಂಪೌಂಡ್ ಅಷ್ಟೇ ಅಲ್ಲ ಆಟೋಟಗಳನ್ನಾಡುವ ಮಕ್ಕಳಿಗೆ, ಶಾಲೆಗೆ ಸಾಗಿ ಬರುವ ಮಕ್ಕಳಿಗೆ ನಿಜಕ್ಕೂ ರಕ್ಷಣೆಯೇ ಇಲ್ಲದಂತಾಗಿದ್ದು ಜೀವವನ್ನು ಪಣಕ್ಕಿಟ್ಟು ಮಕ್ಕಳು ದಿನ ನಿತ್ಯ ಶಾಲೆಗೆ ಬರಬೇಕಿದೆ.

ಶಿರಾ ನಗರದಲ್ಲಿರುವ ಸಂತೇಪೇಟೆಯ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳ ಇಂತಹ ಶೋಚನೀಯ ಸ್ಥಿತಿಯನ್ನು ಕಂಡರೆ ನಿಜಕ್ಕೂ ಪೋಷಕರು ಕೂಡಾ ಮಕ್ಕಳ ಜೀವ ರಕ್ಷಣೆಗೆ ಹಾತೊರೆಯುವಂತಾಗಿದೆ.
ಕಾರಣ ಇಷ್ಟೇ ನಗರದ ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣದಿಂದ ಮಧುಗಿರಿ ಮತ್ತು ತುಮಕೂರು ಕಡೆಗೆ ಹೋಗಿ ಬರುವ ಪ್ರತಿಯೊಂದು ಬಸ್ ಹಾಗೂ ವಾಹನಗಳು ಈ ಶಾಲೆಯ ಮುಂಭಾಗದಿಂದಲೇ ಹೋಗಬೇಕಿದೆ.

      ಸದರಿ ಶಾಲೆಗೆ ಕಾಂಪೌಂಡ್ ಇಲ್ಲದ ಪರಿಣಾಮ ಶಾಲಾ ಮಕ್ಕಳು ರಸ್ತೆಯನ್ನು ದಾಟಿ ಮನೆಗಳಿಗೆ ತೆರಳಬೇಕಿದ್ದು ಇದು ರಾಷ್ಟ್ರೀಯ ಹೆದ್ದಾರಿಯೂ ಆದ ಪರಿಣಾಮ ದಿನ ನಿತ್ಯ ಪೋಷಕರಿಗೆ ಶಾಲೆಗೆ ಹೋಗಿ ಬರುವ ಮಕ್ಕಳದ್ದೇ ಚಿಂತೆಯಾಗಿದೆ.

      ಚಿಕ್ಕ ಚಿಕ್ಕ ಮಕ್ಕಳಷ್ಟೇ ಅಲ್ಲದೆ ವಿವಿಧ ಮಕ್ಕಳು ಕೂಡಾ ರಸ್ತೆಯನ್ನು ದಾಟುವಾಗ ಅಪಘಾತಕ್ಕೀಡಾದ ನಿದರ್ಶನಗಳೂ ಇದ್ದು ಈ ಕೂಡಲೇ ಮಕ್ಕಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಶಾಲಾ ಪೋಷಕರು ಹಾಗೂ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here