ಸಿಇಒ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತಿಲ್ಲ

0
17

ಹುಳಿಯಾರು

        ಕೆಂಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವಂತೆ ಜಿಪಂ ಸಿಇಒ ಅನೀಸ್ ಜಾಯ್ ಕಣ್ಮಣಿ ಅವರು ಪಿಡಿಒಗೆ ಸೂಚನೆ ನೀಡಿದರೂ ಚರಂಡಿ ಸ್ವಚ್ಛವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೆಂಕೆರೆ ಗ್ರಾಮದ ಒಂದೇ ಒಂದು ಶುದ್ಧ ನೀರಿನ ಕುಡಿಯುವ ಘಟಕ ಇದ್ದು, ಇಲ್ಲಿಂದ ಹುಳಿಯಾರು, ಬರದಲೇಪಾಳ್ಯ, ಹೊನ್ನಯ್ಯನಪಾಳ್ಯ, ಬಸವನಗುಡಿ ಮುಂತಾದ ಗ್ರಾಮಗಳಿಂದ ಜನರು ಬಂದು ಕುಡಿಯುವ ನೀರನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ಘಟಕದ ಸುತ್ತ ಚರಂಡಿಗಳಿದ್ದು ಈ ಚರಂಡಿಗಳು ಸ್ವಚ್ಛತೆಕಾಣದೆ ಕೊಳಚೆ ತುಂಬಿ ಸೊಳ್ಳೆಗಳ ಆಶ್ರಯತಾಣವಾಗಿದೆ. ಅಲ್ಲದೆ ದುರ್ನಾತ ಬೀರುತ್ತಿದೆ. ಇದರಿಂದ ನೀರಿಗೆ ಬರುವವರಿಗೆ ಬಹಳ ತೊಂದರೆಯಾಗಿದೆ ಎಂದು ದೂರಿದರು.

        ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಕೆಂಕೆರೆಗೆ ಬಂದಾಗ ಖುದ್ದು ಗ್ರಾಮಸ್ಥರು ಚರಂಡಿ ತೋರಿಸಿ ಸ್ವಚ್ಛ ಮಾಡಲು ಮನವಿ ಮಾಡಿದ ಮೇರೆಗೆ ಸಿಇಒ ಅವರು ತಕ್ಷಣ ಚರಂಡಿ ಸ್ವಚ್ಛ ಮಾಡುವಂತೆ ಸೂಚನೆ ನೀಡಿದರು. ಆದರೆ ಸಿಇಒ ಸೂಚನೆ ನೀಡಿ ಐದಾರು ದಿನನಗಳೇ ಕಳೆದಿದ್ದರೂ ಗ್ರಾಪಂ ಮಾತ್ರ ಇನ್ನೂ ಸ್ವಚ್ಛತೆಗೆ ಮುಂದಾಗಿಲ್ಲ ಎಂದು ಆರೋಪಿಸಿದರು.

     ಹೀಗೆ ಸಿಇಒ ಸೂಚನೆಗೂ ಕವಡೆ ಕಾಸಿನ ಕಿಮತ್ತು ನೀಡದ ಅಧಿಕಾರಿಗಳು ಸಾಮಾನ್ಯ ನಾಗರೀಕರ ಮನವಿ ಮನವಿ ಎಷ್ಟರಮಟ್ಟಿಗೆ ಸ್ಪಂದಿಸುವರು ಎನ್ನುವ ಪ್ರಶ್ನೆ ಇಲ್ಲಿನ ನಾಗರೀಕರಿಗೆ ಕಾಡುತ್ತಿದೆ. ಇನ್ನಾದರೂ ತಕ್ಷಣ ಮೇಲಧಿಕಾರಿಗಳು ಇವರ ಮೇಲೆ ಕಠಿಣ ಕ್ರಮ ಕೈಗೊಂಡು ತಕ್ಷಣ ಗ್ರಾಮ ನೈರ್ಮಲ್ಯಕ್ಕೆ ಮುಂದಾಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

LEAVE A REPLY

Please enter your comment!
Please enter your name here