ಸಿಎಂ ಸಾಲಮನ್ನಾ ಕುರಿತು ಸ್ಪಷ್ಟವಾದ ಆದೇಶ ಹೊರಡಿಸಿದರೆ ಪರಿಹಾರ ಸಿಗಲು ಸಾಧ್ಯ

0
25

  ಹೊನ್ನಾಳಿ:

      ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಾಲಮನ್ನಾ ಯೋಜನೆಯ ಬಗ್ಗೆ ಸ್ಪಷ್ಟವಾದ ಸರ್ಕಾರಿ ಆದೇಶವನ್ನು ಹೊರಡಿಸಿದರೆ ಮಾತ್ರ ರೈತರ ಅನೇಕ ಸಮಸ್ಯೆಗಳ ಪ್ರಶ್ನೆಗೆ ಪರಿಹಾರ ದೊರೆಯಲು ಸಾಧ್ಯ ಎಂಬುದಾಗಿ ಹೊನ್ನಾಳಿ ಕಸಬಾ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷ ಕೆ ಹಳದಪ್ಪ ಹೇಳಿದರು.

      ಮಂಗಳವಾರ ಹೊನ್ನಾಳಿ ಕಸಬಾ ಸಹಕಾರ ಸಂಘದಲ್ಲಿ ನಡೆದ ಸಭೆಯನ್ನುದ್ದೆಶಿಸಿ ಅವರು ಮಾತನಾಡಿದರು.
ಹೊನ್ನಾಳಿ ಕಸಬಾ ಸೊಸೈಟಿಯು ರೈತರ ಸಂಖ್ಯೆ ಹಾಗೂ ವಿಸ್ತ್ರೀರ್ಣದಲ್ಲಿ ಜಿಲ್ಲೆಯಲ್ಲೇ ದೊಡ್ಡದಾಗಿರುವ ಕಾರಣ 3 ವಲಯಗಳನ್ನಾಗಿ ವಿಂಗಡಿಸಿರುವ ಕಾರ್ಯ ಪ್ರಗತಿಯಲ್ಲಿದೆ ಬೆಳೆ ಸಾಲದ ವಿಚಾರವಾಗಿ ಸಂಘವು ಅನೇಕ ಹೋರಟ ನಡೆಸುವ ಮೂಲಕ ಹೊನ್ನಾಳಿ ಹಾಗೂ ಜಿಲ್ಲಾ ಡಿಸಿಸಿ ಬ್ಯಾಂಕಿಗೆ ಹೆಚ್ಚು ಪರಿಚಿತವಾಗಿದೆ . ಕಳೆದ ವರ್ಷ 3ಕೋಟಿ 50 ಲಕ್ಷ ಬೆಳೆ ಸಾಲ ನೀಡಿದ್ದು, ಪ್ರಸಕ್ತ ವರ್ಷ 5ರಿಂದ 6 ಲಕ್ಷದ ವರೆಗೆ ಲಾಭಾಂಶವನ್ನು ಹೊಂದಿದೆ ಎಂದರು .

      ಸಂಘದ ಪ್ರಭಾರಮುಖ್ಯ ಕಾರ್ಯನಿರ್ವಹಕರಾಗಿ ಸುಮಾರು 42 ವರ್ಷಗಳಿಂದ ಸೇವೆ ಸಲ್ಲಿಸಿ ನಿವ್ಲತ್ತಿಯಾದ ಎಸ್ ಆರ್ ನರಸಿಂಹಯ್ಯನವರನ್ನು ಸನ್ಮಾನಿಸಿ ಗೌರವಿಸಲಾಯಿತು.

      ಸಂಘದ ಮಾಜಿ ಅಧ್ಯಕ್ಷ ಹೆಚ್ ಬಿ ಮೋಹನ ಮಾತನಾಡಿ , 5 ಸಾವಿರ ಸದಸ್ಯರನ್ನು ಹೊಂದಿರುವ ಸಂಘದ ಅನೇಕ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ನರಸಿಂಹಯ್ಯನವರು ಸಂಘದ ಉನ್ನತಿಗೆ ಶ್ರಮಿಸಿದವರಾಗಿದ್ದು. 1978ರಿಂದ ಪಿಗ್ಮಿ ಕಾರ್ಯದೊಂದಿಗೆ ಹಂತ ಹಂತವಾಗಿ ಬೆಳೆದ ನರಸಿಂ ಹಯ್ಯನವರು ಕಾರ್ಯನಿರ್ವಾಹಕ ಹುದ್ದೆಯನ್ನು ಸಮರ್ಪಕವಾಗಿ ನಿರ್ವಹಿಸಿದ ಅವರ ಸೇವೆ ಹಾಗೂ ಕರ್ತವ್ಯವನ್ನು ಸ್ಮರಿಸಿದರು.

      ಸಮಾರಂಭದಲ್ಲಿ ಮಾಜಿ ಅಧ್ಯಕ್ಷರುಗಳಾದ ಜಿ. ಹೆಚ್. ತಮ್ಮಣ್ಣ ದಿಡಗೂರು, ಬಿ. ಹೆಚ್. ಗೊಪಾಲಪ್ಪನವರು ನಿವೃತ್ತ ನರಸಿಂಹಪ್ಪನವರ ಕುರಿತು ಹಾಗೂ ಸಂಘದ ವಿಚಾರವಾಗಿ ಮಾತನಾಡಿದರು.

      ಸಂಘದ ಉಪಾಧ್ಯಕ್ಷೆ ಪೇಟೆ ಸಾಮಿತ್ರಮ್ಮ, ಸದಸ್ಯೆ ರಾಣಿ ಸುರೇಶ, ನಿರ್ದೇಶಕರುಗಳಾದ ಬಾಬುಯಾನೆರಾಯಪ್ಪ, ಹೆಚ್ ಎ ನರಸಿಂಹಪ್ಪ, ಬಿದರುಗಡ್ಡೆ ನೀಲಕಂಠಪ್ಪ, ಹೊಲೆಹರಳಹಳ್ಳಿ ರಾಮಚಂದ್ರಪ್ಪ, ಡಿಸಿಸಿ ಬ್ಯಾಂಕ ಕ್ಷೇತ್ರಾಧಿಕಾರಿ ವಿಜಯಕುಮಾರ ರೈತ ಮುಖಂಡರಾದ ಬಿದರುಗಡ್ಡೆ ರಾಜಣ್ಣ, ಸುಂಕದಕಟ್ಟೆ ಕರಿಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here