ಸಿರಾ ಪ್ರೆಸಿಡೆನ್ಸಿಗೆ ಅಥ್ಲೆಟಿಕ್ಸ್‍ನಲ್ಲಿ ಬಂಗಾರದ ಪದಕ

0
22

ಸಿರಾ

          ಐ.ಸಿ.ಎಸ್.ಇ. ನವದೆಹಲಿ ಶಿಕ್ಷಣ ಮಂಡಳಿಯು ಕರ್ನಾಟಕದ ಐ.ಸಿ.ಎಸ್.ಇ. ಶಾಲೆಗಳ ವಿದ್ಯಾರ್ಥಿಗಳಿಗಾಗಿ ದಿನಾಂಕ 11/09/2018 ಮತ್ತು 12/09/2018 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ `ದಿ ಪ್ರೆಸಿಡೆನ್ಸಿ ಪಬ್ಲಿಕ್ ಶಾಲೆ’ ಯ 10ನೇ ತರಗತಿಯ ಲಿಖಿತ್ ವೇಣುಗೋಪಾಲ್ ಎತ್ತರ ಜಿಗಿತದಲ್ಲಿ ಮೊದಲನೇ ಸ್ಥಾನವನ್ನು ಗಳಿಸಿ ಬಂಗಾರದ ಪದಕ ಪಡೆಯುವುದರೊಂದಿಗೆ ಮುಂದಿನ ತಿಂಗಳು ಪುಣೆಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಗೆ ಆಯ್ಕೆಯಾಗುವುದರ ಮೂಲಕ ಶಾಲೆಯ ಕೀರ್ತಿ ತಂದಿರುತ್ತಾರೆ.
           ವಿದ್ಯಾರ್ಥಿಯ ಈ ಸಾಧನೆಯನ್ನು ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಚಿದಾನಂದ್ ಎಂ ,ಶಾಲೆಯ ಪ್ರಾಂಶುಪಾಲರಾದ ಶ್ರೀ. ಜಾರ್ಜ್ ಮ್ಯಾಥ್ಯೂ ಮತ್ತು ಶಿಕ್ಷಕ ವೃಂದವು ಶ್ಲಾಘಿಸಿ ಮುಂದಿನ ಕ್ರೀಡಾಕೂಟದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಆಶಿಸಿದರು.

LEAVE A REPLY

Please enter your comment!
Please enter your name here