ಸಿರಿಗೇರಿ ನೂತನ ಬಸ್ ನಿಲ್ದಾಣ ಕಾಮಗಾರಿಗೆ ಶಾಸಕ ಸೋಮಲಿಂಗಪ್ಪ ಚಾಲನೆ

0
37

ಸಿರಿಗೇರಿ:

       ಇಲ್ಲಿನ ನೂತನ ಬಸ್ ನಿಲ್ದಾಣ ಕಾಮಗಾರಿ ಹಾಗೂ ಶುಧ್ಧ ಕುಡಿಯುವ ನೀರಿನ ಘಟಕಕ್ಕೆ ಸೋಮವಾರ ಸಿರುಗುಪ್ಪ ಕ್ಷೇತ್ರದ ಶಾಸಕ ಎಂ.ಎಸ್.ಸೋಮಲಿಂಗಪ್ಪ ಚಾಲನೆ ನೀಡಿದರು.

      ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕರು ಯಾವುದೇ ರೀತಿಯ ಸರಕಾರಿ ಯೋಜನೆಗಳನ್ನು ಪ್ರತಿಯೊಬ್ಬ ವ್ಯಕ್ತಿ ಶ್ರಧ್ಧೆಯಿಂದ ಕಾಪಾಡಿಕೊಳ್ಳಬೇಕು. ಅದು ಪ್ರತಿಯೊಬ್ಬರ ಹೊಣೆಗಾರಿಕೆ. ಬಸ್ ನಿಲ್ದಾಣಕ್ಕೆ ಮಂಜೂರಾಗಿರುವ 60ಲಕ್ಷ ರೂ.ಅನುದಾನ ಯಾವುದಕ್ಕೂ ಸಾಲದು. ಇದಕ್ಕಾಗಿ ಹೆಚ್ಚಿನ ಅನುದಾನವನ್ನು ಸರಕಾರದಿಂದ ಒದಗಿಸುತ್ತೇನೆಂಬ ಭರವಸೆ ನೀಡಿದರು. ಇದೇ ವೇಳೆ ಬಸ್ ನಿಲ್ದಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವಾಗ ಕೆಲವರು ಜಾಗದ ಬಗ್ಗೆ ತಕರಾರು ಒಡ್ಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಕೆಲವರ ಹಿತಕ್ಕಾಗಿ ಬಹುಜನರ ಬೇಡಿಕೆಯನ್ನು ಕಡೆಗಣಿಸಲಾಗುವುದಿಲ್ಲವೆಂದು ಸಾರಾಸಗಟಾಗಿ ತಿರಸ್ಕರಿಸಿದರು.

      ನಂತರ ಶಾಸಕರಿಗೆ ಮತ್ತು ವಿಬಾಗಿಯ ಸಂಚಾರಿ ಆಧಿಕಾರಿ ಸೈಯದ ಹುಸೇನ್ ರವರಿಗೆ ಗ್ರಾಮದ ಹಿರಿಯ ಯುವ ನಾಗರಿಕರ ವೇದಿಕೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಿರುಗುಪ್ಪ ಯಿಂದ ಕುರುಗೋಡು ಯರ್ರಿಂಗಿಳಿ ಮಾರ್ಗವಾಗಿ ಬಸ್ ಸಂಚಾರಿಸುವ ವ್ಯವಸ್ಥೆ ಮಾಡಿಕೊqಬೇಕೆಂದು ಶಾಸಕರನ್ನು ಮತ್ತು ಅಧಿಕಾರಿಗಳನ್ನು ಗ್ರಾಮದ ಮುಖಂಡರು ವತ್ತಹಿಸಿದರು. ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಕೊಳ್ಳಿದ್ಯಾವಮ್ಮ ಪಾವಡಿನಾಯ್ಕ ಜಿಪಂ ಸದಸ್ಯೆ ರತ್ನಮ್ಮ ಅಡಿವೆಯ್ಯಸ್ವಾಮಿ, ಕರೂರ್ ಜಿಪಂ ಸದಸ್ಯ ಕೋಟೇಶ್‍ರೆಡ್ಡಿ, ತಾಪಂ ಅಧ್ಯಕ್ಷೆ ನಾಗೇಶಪ್ಪ, ತಾಪಂ ಸದಸ್ಯ ವಿ.ರೇಣುಕಪ್ಪ, ಮಾಜಿ ಗ್ರಾಪಂ ಉಪಾಧ್ಯಕ್ಷ ಅಡಿವೆಯ್ಯಸ್ವಾಮಿ, ಬಕ್ಕಾಟೆ ಈರಯ್ಯ, ಕೊಳ್ಳಿ ಪವಾಡಿನಾಯ್ಕ, ಬಿಜೆಪಿ ಪ್ರಮುಖರಾದ ಅಂಬರೇಶ್‍ಗೌಡ, ಕೊಂಚಿಗೇರಿ ನಾಗರಾಜ್‍ಗೌಡ, ಎಪಿಎಂಸಿ ಸದಸ್ಯ ಹಾಗಲೂರ್ ಮಲ್ಲನಗೌಡ ಸೇರಿದಂತೆ ಗ್ರಾಮಸ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here