ಸಿಲಿಂಡರ್ ಸ್ಫೋಟಗೊಂಡು 6 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ

0
12

ಬೆಂಗಳೂರು,

    ನಗರದ ಹೊರವಲಯದ ಬೊಮ್ಮಸಂದ್ರದಲ್ಲಿ ಸೋಮವಾರ ಬೆಳಿಗ್ಗೆ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು 6 ಮಂದಿ ಗಾಯಗೊಂಡು ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಗಾಯಗೊಂಡಿರುವ ವಿಜಯ್ ಕುಮಾರ್, ಬಲಭೀಮ, ಕಾಶಿನಾಥ್, ರಾಜಶೇಖರ್, ಗಣೇಶ್ ಮತ್ತು ಫಾತಿಮಾರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಗಾಯಗೊಂಡಿರುವ ಎಲ್ಲರೂ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರಾಗಿದ್ದಾರೆ.ಒಂದೇ ಕಡೆ ವಾಸಿಸುತ್ತಿದ್ದರು.ಬೆಳಿಗ್ಗೆ ಅಡುಗೆ ಮಾಡಲು ಮನೆಯವರು ಸ್ಟವ್ ಹಚ್ಚಿದಾಗ ರಾತ್ರಿ ಸೋರಿಕೆಯಾದ ಅನಿಲದಿಂದ ಈ ಸ್ಫೋಟವಾಗಿದೆ.

    ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಮನೆಯ ಮುಂಬಾಗಿಲು ಛಿದ್ರವಾಗಿದೆ.ಘಟನೆ ನಡೆದ ಸ್ಥಳಕ್ಕೆ ಹೆಬ್ಬಗೋಡಿ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೀರೆಕದ್ದ ದಂಪತಿ
ವಿದ್ಯಾರಣ್ಯಪುರದ ಸೀರೆ ಅಂಗಡಿಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದ ಐನಾತಿ ಪತಿ-ಪತ್ನಿ ಖರೀದಿ ನೆಪ ಮಾಡುತ್ತಾ 3ಲಕ್ಷ ಮೌಲ್ಯದ 20 ದುಬಾರಿ ಸೀರೆಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ

    ನಂಜಪ್ಪ ಸರ್ಕಲ್ ಬಳಿಯ ಶ್ರೀ ಸಾಯಿ ಸ್ಯಾರಿ ಪ್ಯಾಲೇಸ್‍ನಲ್ಲಿ ಭಾನುವಾರ ಮಧ್ಯಾಹ್ನ 2ರ ವೇಳೆ ಗ್ರಾಹಕರ ಸೋಗಿನಲ್ಲಿ ಸೀರೆ ಖರೀದಿಸಲು ಬಂದಿದ್ದ ದಂಪತಿ ಸಿಬ್ಬಂದಿಯ ಗಮನವನ್ನು ಬೇರೆಡೆ ಸೆಳೆದು 20 ದುಬಾರಿ ಸೀರೆಗಳನ್ನು ಕಳವು ಮಾಡಿದ್ದಾರೆ.
3 ಲಕ್ಷ ಮೌಲ್ಯದ 20 ಸೀರೆಗಳನ್ನು ಕದ್ದು ದಂಪತಿ ಪರಾರಿಯಾಗಿದ್ದಾರೆ.ಆರೋಪಿಗಳು ಆಂಧ್ರಪ್ರದೇಶ ನೋಂದಣಿಯ ಬೈಕ್‍ನಲ್ಲಿ ಬಂದಿದ್ದರು.ದಂಪತಿಯ ಕೈಚಳಕ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು. ವಿದ್ಯಾರಣ್ಯಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here