ಸಿ.ಎಂ.ಗೆ ಕಾಗಿನೆಲೆ ಶ್ರೀಗಳ ಎಚ್ಚರಿಕೆ

0
26

 ಕಾಗಿನೆಲೆ:

 ಕುರುಬ ಸಮುದಾಯದ ಅಧಿಕಾರಿಗಳನ್ನು ಮನಬಂದಂತೆ ವರ್ಗಾವಣೆ ಮಾಡುತ್ತಿರುವ ಮುಖ್ಯಮಂತ್ರಿಗಳ ವಿರುದ್ದ ಕಾಗಿನೆಲೆ ಶ್ರೀನಿರಂಜನಾನಂದಪುರಿ ಸ್ವಾಮಿಗಳು ಕಿಡಿಕಾರಿದ್ದಾರೆ.

      ದಾವಣಗೆರೆ ಜಿಲ್ಲೆ ಹರಿಹರದ ಬೆಳ್ಳೋಡಿ ಕನಕಮಠದಲ್ಲಿ ಮಾತನಾಡುತ್ತಿದ್ದ ಅವರು, ಮೈತ್ರಿ ಸರ್ಕಾರ ಬಂದ ಬಳಿಕ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತಮ್ಮ ಮನಸ್ಸಿಗೆ ಬಂದಂತೆ ವರ್ಗಾವಣೆ ಮಾಡುತ್ತಿರುವುದನ್ನು ಗಮನಿಸಿದರೆ, ಕುರುಬ ಸಮುದಾಯವನ್ನು ಹತ್ತಿಕ್ಕುವ ಕೆಲಸ ಮಾಡುವಂತಿದೆ.

      ಇದನ್ನೆಲ್ಲಾ ನೋಡಿಒಕ್ಕಲಿಗರ ಮುಖ್ಯಮಂತ್ರಿಗಳು ಎಂದು ತಿಳಿದುಕೊಂಡಿದ್ದೇವೆ. ಸಾಮರಸ್ಯದಿಂದ ಆಡಳಿತ ನಡೆಸಿದರೆ, ಸರ್ಕಾರಕ್ಕೆ ಒಳ್ಳೆಯದು ಇದೇ ರೀತಿ ಮುಂದುವರೆದರೆ, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಹೋರಾಟ ಮಾಡುವುದಾಗಿ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here