ಸುಸಜ್ಜಿತ ಮತ್ತು ಗುಣಮಟ್ಟದ ಮನೆನಿರ್ಮಾಣ ಮಾಡುವಂತೆ ಶಾಸಕರ ಎಚ್ಚರಿಕೆ

0
27

ತುರುವೇಕೆರೆ:

                 ಸುಸಜ್ಜಿತ ಮತ್ತು ಗುಣಮಟ್ಟದ ಮನೆನಿರ್ಮಾಣ ಮಾಡುವಂತೆ ಶಾಸಕ ಮಸಾಲ ಜಯರಾಮ್ ಅಧಿಕಾರಿಗಳು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.ಪಟ್ಟಣದ ದೇವೇಗೌಡ ಬಡಾವಣೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ ಮನೆಗಳಿಗೆ ಶನಿವಾರಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಪಟ್ಟಣದ ಕೊಳಚೆ ಪ್ರದೇಶಕ್ಕೆ 200 ಮನೆಗಳುಮಂಜೂರಾಗಿದ್ದು, ಈ ಮನೆಗಳಿಗೆ ದೇವೇಗೌಡಸ ಬಡಾವಣೆಗೆ 120 ಮನೆ ,ವಿನೋಭನಗರಕ್ಕೆ 60 ಮನೆ,ಮೀನಾಕ್ಷಿ ಬಡಾವಣೆ ಗೆ 20 ಮನೆಗಳು ಮಂಜೂರಾಗಿದ್ದು,ಕೊಳಚೆ ನಿರ್ಮೂಲನ ಮಂಡಳಿ ಇವುಗಳಉಸ್ತುವಾರಿಕೈಗೊಂಡಿದ್ದು, ತಲಾ ಒಂದು ಮನೆಗೆ 4.62ಲಕ್ಷ ಮನೆಗೆ ಸರ್ಕಾರ ಹಣ ನಿಗದಿ ಮಾಡಿದ್ದು,ಫಲಾನುಭವಿಗಳು 40 ಸಾವಿರ ರೂಗಳನ್ನು ಹಣವನ್ನುಕಟ್ಟಿದರೆ ಉಳಿದ ಹಣವನ್ನು ಕೊಳಚೆ ನಿರ್ಮೂಲನೆಮಂಡಳಿ ಮತ್ತು ಸರ್ಕಾರ ನೀಡಲಿದ್ದು, ಇದರಫಲಾನುಭವಿಯನ್ನು ನಿರ್ಗತಿಕರು ಇದರಪ್ರಯೋಜನ ಪಡೆದು ಕೊಳ್ಳಬೇಕು ಎಂದರು.

                   ಈ ಹಿಂದೆ ಕಳಪೆ ಗುಣಮಟ್ಟದ ಮನೆಗಳನ್ನುನಿರ್ಮಿಸಿದ್ದರಿಂದ ಈ ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲಎಂಬ ದೂರುಗಳು ಬಂದಿದ್ದು , ನಾವು ಸೂಕ್ಷ್ಮವಾಗಿ ಕಾಮಗಾರಿಗಳನ್ನು ಪರಿಶೀಲಿಸುವುದಾಗಿ ಮತ್ತುಫಲಾನುಭವಿಗಳು ಯಾವುದಕ್ಕೂ ರಾಜಿ ಆಗದೇ ತಾವೇಮುಂದೆ ನಿಂತು ಗುಣಮಟ್ಟದ ಕಾಮಗಾರಿ ಮಾಡಿಸುವಂತೆಮನವಿ ಮಾಡಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನರಸಿಂಹ, ಪ.ಪಂ. ಸದಸ್ಯರಾದ ಸುಮಲತಾಶಿವರಾಜ್, ನೇತ್ರಾವತಿ ರಂಗಸ್ವಾಮಿ, ಮಾನಸ ಪ್ರಸನ್ನಕುಮಾರ್, ಕೊಳಚೆ ನಿರ್ಮೂಲನಾ ಮಂಡಳಿಯ ಎ.ಇ.ಇ. ಹನುಮಂತರೆಡ್ಡಿ , ಸೆಕ್ಷನ್‍ಆಫೀಸರ್

               ಶ್ರೀನಿವಾಸ್, ಮುಖಂಡರುಗಳಾದ ಚೆಂಡೂರು ರಾಮೇಗೌಡ, ವಿ.ಬಿ.ಸುರೇಶ್, ಅಂಜನ್‍ಕುಮಾರ್,ಕಾಳಂಜೀಹಳ್ಳಿ ಸೋಮಣ್ಣ, ಉಮೇಶ್, ನಾಗಲಾಪುರ ಮಂಜಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here