ಸೆ.10 ರ ಬಂದ್ ಗೆ ಜೆಡಿಎಸ್ ನಿಂದ ಸಂಪೂರ್ಣ ಬೆಂಬಲ : ಹೆಚ್. ವಿಶ್ವನಾಥ್

0
122

ಬೆಂಗಳೂರು:

      ಪೆಟ್ರೋಲ್​ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 10ರಂದು ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಭಾರತ್ ಬಂದ್ ಗೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು  ಜೆಡಿಎಸ್​ ರಾಜ್ಯಾಧ್ಯಕ್ಷ ಎ.ಎಚ್.ವಿಶ್ವನಾಥ್​ ತಿಳಿಸಿದ್ದಾರೆ. 

ಸೆ.10 ಭಾರತ್‍ ಬಂದ್ ಕರೆ

      ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತಿಹಾಸದಲ್ಲೇ ಗರಿಷ್ಠ ದರ ತಲುಪಿರುವ ಪಟ್ರೋಲ್ ಮತ್ತು ಡೀಸೆಲ್ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಅಡುಗೆ ಅನಿಲ ಇಂಧನದ ದರ ಒಂದು ತಿಂಗಳಿಗೆ ಸಾವಿರ ರೂ.ವನ್ನು ತಲುಪುತ್ತಿದೆ. ಇಂತಹ ಪರಿಸ್ಥಿಯಲ್ಲಿ ಜನಸಾಮಾನ್ಯರು ಬದುಕಲು ಸಾಧ್ಯವೇ ಎಂದು ಕಳವಳ ವ್ಯಕ್ತಪಡಿಸಿದರು.

      ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಉಳ್ಳವರ ಪರ ಆಡಳಿತ ನಡೆಸುತ್ತಿದೆ. ನೋಟ್ ಬ್ಯಾನ್‌ ಮೂಲಕ ಜನರ ಹೊರೆ ಇಳಿಸುವುದಾಗಿ ಕೇಂದ್ರ ಭರವಸೆ ನೀಡಿತ್ತು. ಆದರೆ, ಪೆಟ್ರೋಲ್, ಡಿಸೇಲ್ ದರವನ್ನು ಪದೇ ಪದೇ ಹೆಚ್ಚಿಸುವ ಮೂಲಕ ಬೆಲೆ ಏರಿಕೆಗೆ ಕೇಂದ್ರ ಸರಕಾರವೇ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದರು.

      ಕಾಂಗ್ರೆಸ್ ಕರೆ ನೀಡಿರುವ ಬಂದ್‌ಗೆ ಜನಪರ ಕಾಳಜಿ ಇರುವುದರಿಂದ ನಮ್ಮ ಪಕ್ಷ ಕೂಡ ಬೆಂಬಲಿಸಲಿದೆ. ಜೆಡಿಎಸ್ ನಿಂದ ಟೌನ್‌ಹಾಲ್‌ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here