ಸೆ.17 ರಂದು ವಿಶ್ವಕರ್ಮಜಯಂತೋತ್ಸವ

0
80

ಬ್ಯಾಡಗಿ:

                 ಸೆ.17 ರಂದು ವಿಶ್ವಕರ್ಮಜಯಂತೋತ್ಸವ ಕಾರ್ಯಕ್ರಮವನ್ನುಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಹಶೀಲ್ದಾರ ಜಯಣ್ಣ ತಳವಾರ ಹೇಳಿದರು..
                  ಪಟ್ಟಣದ ತಹಶೀಲ್ದಾರ ಕಛೇರಿ ಸಭಾ ಭವನದಲ್ಲಿಆಯೋಜಿಸಲಾಗಿದ್ದ ವಿಶ್ವಕರ್ಮಜಯಂತಿ ಪೂರ್ವಬಾವಿ ಸಭೆಯಲ್ಲಿ ವರು ಮಾತನಾಡಿದರು.ಪ್ರತಿ ವರ್ಷದಂತೆ ಈ ವರ್ಷವುವಿಶ್ವಕರ್ಮಜಯಂತಿಕಾರ್ಯಕ್ರಮವನ್ನು ತಾಲೂಕಾಡಳಿತ ಮತ್ತು ಸ ಮಾಜ ಬಾಂಧವರೊಂದಿಗೆ ಸೇರಿಆಚರಿಸಲಾಗುವುದುಎಂದರು.
                 ವಿಶ್ವಕರ್ಮ ಸಮಾಜದತಾಲೂಕಾಧ್ಯಕ್ಷಜಕಣಾಚಾರಿ ಬಡಿಗೇರ ಮಾತನಾಡಿ, ಸೃಷ್ಟಿಕರ್ತ ವಿಶ್ವಕರ್ಮನಜಯಂತಿ ಅಂಗ ವಾಗಿ ಸೆ.17 ರಂದು ಬ್ಯಾಡಗಿ ಪ್ರಮುಖ ರಸ್ತೆಗಳಲ್ಲಿ ಬೃಹತ್‍ವಿಶ್ವಕರ್ಮ ಮೂರ್ತಿಮೆರವಣಿಗೆ ಹಾಗೂ ಕುಂಭಮೇಳವನ್ನು ಏರ್ಪಡಿಸಲಾಗಿದ್ದು, ಸಭಾಕಾರ್ಯಕ್ರಮವನ್ನು ಪಟ್ಟಣಧ ವೀರಭಧ್ರೇಶ್ವರದೇವಸ್ಥಾನದಲ್ಲಿಆಯೋಜಿಸಲಾಗಿದೆಎಂದರು.
             ಗೌರವಾಧ್ಯಕ್ಷ ಮಂಜುನಾಥ ಬಡಿಗೇರ ಮಾತನಾಡಿ, ಪಟ್ಟಣದ ಶ್ರೀ ಕಾಳಿಕಾಂಬ ದೇವಸ್ಥಾನದಿಂದ ವಿಶ್ವಕರ್ಮ ಮೆರವಣಿಗೆ ಪ್ರಾರಂಭವಾಗಲಿದ್ದು ಸುಮಾರು ಸಾವಿರಕ್ಕೂ ಹೆಚ್ಚು ಮಹಿಳೆಯರು ಕುಂಭ ಮೇಳದಲ್ಲಿ ಭಾಗವಹಿಸಲಿದ್ದಾರೆ.ಮೆರವಣಿಗೆಅಲ್ಲಿಂದ ಸಾಗಿ ಬನಶಂಕರಿರ ಸ್ತೆ, ಹಳೆ ಪುರಸಭೆ ಸುಭಾಷ್ ಸರ್ಕಲ್, ಮುಖ್ಯರಸ್ತೆ, ಚಾವಡಿರಸ್ತೆ, ಮೂಲಕ ಸಂಚರಿಸಿ ವೀರಭದ್ರೇಶ್ವರದೇವಸ್ಥಾನತಲುಪಲಿದೆಎಂದರು.
           ಈ ಸಂದರ್ಬದಲ್ಲಿ ಮಾಲತೇಶ ಬಡಿಗೇರ, ಅರುಣ ಬಡಿಗೇರ, ಮೌನೇಶ ಬಡಿಗೇರ, ಯಶೋಧರಅರ್ಕಾಚಾರಿ, ವಿಜಯ ಲಕ್ಷ್ಮಿ ಬಡಿಗೇರ, ಮೌನೇಶಕಮ್ಮಾರ, ಪಾಂಡುರಂಗ ಸುತಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದ ರು..

LEAVE A REPLY

Please enter your comment!
Please enter your name here