ಸೇವೆ ಮಾಡೋ ಅವಕಾಶದ ಸದುಪಯೋಗ ಪಡೆದುಕೊಳ್ಳಿ

0
24

ದಾವಣಗೆರೆ :

   ಶಿಕ್ಷಕವೃತಿಯವರಿಗೆ ಸೇವೆ ಮಾಡುವುದೆ ಒಂದು ಸವಾಲಿನ ಪ್ರಶ್ನೆಯಾಗಿರುತ್ತದೆ ಅಂತಹ ಸೇವೆ ಮಾಡುವ ಅದೃಷ್ಟ ಸಿಕ್ಕರೆ ಅದನ್ನು ಶಿಕ್ಷಕ ವೃತ್ತಿಗೆ ಹೋಗುವವರು ಸದೂಪಯೋಗ ಮಾಡಿಕೊಳ್ಳಿ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಶಂಕರ್.ಆರ್. ಶಿಲಿ ಹೇಳಿದರು.

    ಅವರಿಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಹೇಳೆ ವಿದ್ಯಾರ್ಥಿಗಳ ಸಂಘ  ಹಾಗೂ ಅಜಿó ಪ್ರೇಮ್ ಜಿ ಫೌಂಡೆಶನ್‍ನಿಂದ ಕಾಲೇಜಿನಲ್ಲಿ ಆಯ್ದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಭೋದನ ಅನುಭವವಿರುವವರಿಗೆ ಹಮ್ಮಿಕೊಂಡಿದ್ದ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಕಾಲೇಜಿನ ಹಳೇ ವಿದ್ಯಾರ್ಥಿಗಳ ಹಾಗೂ ಭೋದನ ವೃತ್ತಿಯಲ್ಲಿ ಅನುಭವವಿರುವ ಶಿಕ್ಷಕರ ಅನುಕೂಲಕ್ಕಾಗಿ ಅಜಿó ಪ್ರೇಮ್ ಜಿ ಫೌಂಡೆಶನ್‍ನಿನವರು ನಮ್ಮ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ ಹಮ್ಮಿಕೊಂಡಿದ್ದು ಸಂತಸದ ಸಂಗತಿಯಾಗಿದೆ ಎಂದ ಅವರು, ವಿಪ್ರೋ ಕಂಪನಿಯ ಮಾಲಿಕರ ಫೌಂಡೆಶನ್ ಇದಾಗಿದ್ದು ಅವರು ಸುಮಾರು ಎಂಟು ನೂರು ಕೋಟಿ ರೂಪಾಯಿ ಫೌಂಡೆಶನ್‍ಗೆ ಮೀಸಲಿಟ್ಟಿದ್ದಾರೆ. ಸರ್ಕಾರಿ ಶಾಲಾ ಕಾಲೇಜಿನ ಶಿಕ್ಷಕರ ಜೊತೆಗೂಡಿ ಕೆಲಸ ಮಾಡುವುದು ಕ್ಯಾಂಪಸ್‍ನಲ್ಲಿ ಆಯ್ಕೆಯಾದವರ ಸೇವೆಯಾಗಿದೆ. ಈಗಾಗಲೇ ರಾಜ್ಯದ ನಾನಾ ಭಾಗದಲ್ಲಿ ಇವರ ಸಂಸ್ಥೆಯಲ್ಲಿ ಅನೇಕರು ಆಯ್ಕೆಗೊಂಡು ಸೇವೆ ಮಾಡುತ್ತಿದ್ದಾರೆ. ಸರ್ಕಾರಿ ಸೇವಾ ಭದ್ರತೆ ಹೇಗೆ ಪ್ರತಿಯೊಬ್ಬ ಶಿಕ್ಷಕರಿಗೂ ನೀಡಿತ್ತದೆಯೋ ಅದೇ ರೀತಿ ಇಲ್ಲಿನ ಅಜಿó ಪ್ರೇಮ್ ಜಿ ಫೌಂಡೆಶನ್‍ನಿನ ಕ್ಯಾಂಪಸ್‍ನಲ್ಲಿ ಆಯ್ಕೆಯಾಗಿ ಶಿಕ್ಷಕರಾಗುವವಿಗೂ ಸೇವಾ ಭದ್ರತೆ ಇರುತ್ತದೆ. ಕ್ಯಾಂಪಸ್ ಸಂದರ್ಶನಕ್ಕೆ ರಾಜ್ಯದ ನಾನಾ ಭಾಗದವರು ಆಗಮಿಸಿದ್ದು ಇದು ನಮ್ಮ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದವರ ಶ್ರಮಕ್ಕೆ ಸಲ್ಲುತ್ತದೆ ಎಂದರು.

   ಅಜಿóಂ ಪ್ರೇಮ್ ಜಿ ಫೌಂಡೆಶನ್‍ನಿನ ಸಂಪನ್ಮೂಲ ವ್ಯಕ್ತಿಗಳಾದ ಗೋಪಾಲ ಕೃಷ್ಣ ಅವರು ಮಾತನಾಡಿ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ರಾಜ್ಯದ್ಯಾಂತ ಈಗಾಗಲೇ ವಿವಿಧ ಭಾಗದಲ್ಲಿ ಸಂಸ್ಥೆಯಿಂದ ಕ್ಯಾಂಪಸ್ ಸಂದರ್ಶನ ನಡೆಸಲಾಗಿದೆ. ಅನೇಕರು ತಮ್ಮ ಉಜ್ವಲ ಭವಿಷ್ಯವನ್ನು ನಮ್ಮ ಸಂಸ್ಥೆಯಿಂದ ರೂಪಿಸಿಕೊಂಡಿದ್ದಾರೆ. ಸರ್ಕಾರಿ ಶಾಲಾ ಕಾಲೇಜುಗಳನ್ನು ಕನಿಷ್ಠ ಮಟ್ಟದಲ್ಲಿ ನೋಡುವವರು ಈಗಲು ಇದ್ದಾರೆ. ಈ ಹಿನ್ನಲೆಯಲ್ಲಿ ಅಂತಹ ಕಡೆಗಳಲ್ಲಿ ಕ್ಯಾಂಪಸ್‍ನಲ್ಲಿ ಆಯ್ಕೆಯಾದವರಿಗೆ ಹುದ್ದೆಗಳನ್ನು ನೀಡಲಾಗುವುದು. ಯಾವುದೇ ಭಾಗದಲ್ಲಾದ್ದರು ಸೇವೆ ಮಾಡುವ ಸೇವಾ ಮನೋಭಾವನೆಯನ್ನು ಆಯ್ಕೆಯಾದವರು ಹೊಂದಿರಬೇಕು ಎಂದ ಅವರು ನಮ್ಮ ಫೌಂಡೆಶನ್‍ನಿಂದ ಕಾಲೇಜಿನಲ್ಲಿ ಕ್ಯಾಂಪಸ್ ಮಾಡಲು ಅವಕಾಶಕೊಟ್ಟ ಪ್ರಾಂಶುಪಾಲರಿಗೂ ಹಾಗೂ ಆಡಳಿತ ಮಂಡಳಿಯವರಿಗೂ ಧನ್ಯವಾದ ಹೇಳಿದರು.

   ಕ್ಯಾಂಪಸ್ ಸಂದರ್ಶನದಲ್ಲಿ ಬಿಜಾಪುರ, ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಬೆಳಗಾಂ ಸೇರಿದಂತೆ ರಾಜ್ಯದ ವಿವಿಧ ಭಾಗದದಿಂದ ಸುಮಾರು 200 ರಕ್ಕು ಹೆಚ್ಚು ಉದ್ಯೋಗಕಾಂಶಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಪಕರಾದ ಭೀಮಣ್ಣ ಬಿ. ಸುಣಗಾರ್, ಕ್ಯಾಂಪಸ್ ಪ್ಲೇಸ್‍ಮೆಂಟ್ ವಿಭಾಗದ ರಾಜಮೋಹನ್, ವಿರೇಶ್, ಹಳೇವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಮ್‍ಪ್ರಸಾದ್, ಸಂಘಟಕ ಕಾರ್ಯದರ್ಶಿ ವೈ. ಹನುಮಂತಪ್ಪ, ರಾಜ್ಯಶಾಸ್ತ್ರ ವಿಭಾಗದ ರಂಗಸ್ವಾಮಿ, ಕನ್ನಡ ವಿಭಾಗದ ತು.ಕ. ಶಂಕರಯ್ಯ, ಪತ್ರಾಂಕಿತ ವ್ಯವಸ್ಥಾಪಕ ಎಸ್.ಆರ್. ಭಜಂತ್ರಿ, ಹಿರಿಯ ಗ್ರಂಥಪಾಲಕ ಗುರುಮೂರ್ತಿ ಸೇರಿದಂತೆ ಇತರರಿದ್ದರು.

LEAVE A REPLY

Please enter your comment!
Please enter your name here