ಸೊಳ್ಳೆ ನೊಣಗಳ ಆವಾಸ ಸ್ಥಾನವಾಗಿರುವ ಐ.ಡಿ.ಹಳ್ಳಿ ಕಾಲೋನಿಯ ಚರಂಡಿ..!

0
19

ಐ.ಡಿ.ಹಳ್ಳಿ:

ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಗ್ರಾಮದ ನಾಲ್ಕನೇ ಬ್ಲಾಕಿನ ಕಾಲನಿಯ ಚರಂಡಿಯಲ್ಲಿ ಸುಮಾರು ಏಳೆಂಟು ವರ್ಷಗಳಿಂದ ಕಸ, ಕಡ್ಡಿ, ಪ್ಲಾಸ್ಟಿಕ್ ತುಂಬಿರುವುದಲ್ಲದೆ ಗಿಡಗಳೂ ಬೆಳೆದು ಗಬ್ಬು ನಾರುತ್ತಿದೆ. ಇಲ್ಲಿನ ನಿವಾಸಿಗಳ ಬದುಕು ನರಕ ಸದೃಶವಾಗಿದೆ. ಇಷ್ಟಾದರೂ ಐ.ಡಿ.ಹಳ್ಳಿಯ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ ಎಂದು ವಿಶೇಷ ಚೇತನರಾದ ಬಾಬು ಪ್ರಸಾದ್ ಪತ್ರಿಕೆಯೊಂದಿಗೆ ನೋವು ತೋಡಿಕೊಂಡಿದ್ದಾರೆ.

      ಸುಮಾರು ಏಳೆಂಟು ವರ್ಷದಿಂದ ಚರಂಡಿ ಕಟ್ಟಿಕೊಂಡಿದ್ದು ಗಬ್ಬು ನಾರುತ್ತಿದೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಲ್ಲಿಗೆ ಯಾರೂ ಬಂದು ನೋಡುತ್ತಿಲ್ಲ. ಈ ಕಾಲನಿಯ ನಾಲ್ಕನೇ ಬ್ಲಾಕಿನಲ್ಲಿ ಹಲವಾರು ಸಮಸ್ಯೆಗಳು ಕಾಡುತ್ತಿವೆ. ಬಾಬುಪ್ರಸಾದ್‍ರವರ ಮನೆಯ ಮುಂದೆ ಚರಂಡಿಗಳಲ್ಲಿ ಕಸ, ಕಡ್ಡಿ, ಪ್ಲಾಸ್ಟಿಕ್ ತುಂಬಿರುವುದಲ್ಲದೆ, ಗಿಡಗಳೂ ಬೆಳೆದಿವೆ. ಹಾಗಾಗಿ ಈ ಚರಂಡಿ ಸಂಪೂರ್ಣವಾಗಿ ಗಬ್ಬು ನಾರುತ್ತಿದೆ. ಈ ಭಾಗದ ಮನೆಗಳಿಗೆ ಸೊಳ್ಳೆ, ನೊಣಗಳು ದಾಳಿಯಿಟ್ಟು ಜನರ ರಕ್ತವನ್ನು ಹೀರುತ್ತಿವೆ. ಇಲ್ಲಿನ ಜನರಿಗೆ ಡೆಂಗ್ಯೂ ಮತ್ತು ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಮುತ್ತಿ, ನರಕ ಯಾತನೆ ಅನುಭವಿಸುತ್ತಿದ್ದಾರೂ ಕೇಳುವವರೆ ಇಲ್ಲದಂತಾಗಿದೆ. ಚರಂಡಿಯಲ್ಲಿ ತುಂಬಿದ ದುರ್ವಾಸನೆಯಿಂದ ಇಲ್ಲಿನ ಜನರು ನೆಮ್ಮದಿಯಾಗಿ ಊಟ ಮಾಡಲಾಗುತ್ತಿಲ್ಲ, ನೆಮ್ಮದಿಯಾಗಿ ನಿದ್ರೆ ಮಾಡಲಾಗುತ್ತಿಲ್ಲ.

      ಆದರೂ ಸಹ ಈ ಚರಂಡಿಯನ್ನು ವೀಕ್ಷಿಸಿ ಹೋದ ಅಧಿಕಾರಿಗಳು ಮತ್ತೆ ಇತ್ತ ಕಡೆ ಸುಳಿದಿಲ್ಲ. ಆದ್ದರಿಂದ ಸಂಬಂಧಪಟ್ಟ ಮೇ¯ಧಿಕಾರಿಗಳು ಅತಿ ಶೀಘ್ರದಲ್ಲಿ ಚರಂಡಿಯನ್ನು ಸ್ವಚ್ಛಗೊಳಿಸುವ ಏರ್ಪಾಡು ಮಾಡಿ ಇಲ್ಲಿನ ನಿವಾಸಿಗಳ ಆರೋಗ್ಯ ಕಾಪಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಇಲ್ಲದಿದ್ದರೆ ಈ ಕಾಲನಿಯ ಎಲ್ಲಾ ಬಡ ಜನರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ, ಉಗ್ರ ಹೋರಾಟ ಮಾಡದೆ ಅನ್ಯ ಮಾರ್ಗವಿಲ್ಲ ಎಂದು ಬಾಬುಪ್ರಸಾದ್ ಪತ್ರಿಕೆಯೊಂದಿಗೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here