ಸೋಮನಹಳ್ಳಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

0
40

ಹುಳಿಯಾರು

    ಹುಳಿಯಾರು ಹೋಬಳಿ ಗಾಣಧಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೋಮನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಗ್ರಾಮದ ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು ಹುಳಿಯಾರು ಪೊಲೀಸರಿಗೆ ಮನವಿ ಮಾಡಿದರು.

    ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು ಮಕ್ಕಳು, ಯುವಕರೆನ್ನದೆ ಎಲ್ಲರೂ ಮದ್ಯ ವ್ಯಸನಿಗಳಾಗುತ್ತಿದ್ದಾರೆ. ತಮ್ಮ ಭವಿಷ್ಯ ಹಾಗೂ ಸಂಸಾರದ ಸ್ವಾಸ್ಥ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಅಶಾಂತಿ ಮೂಡಿದ್ದು ಎಷ್ಟೋ ಸಂಸಾರಗಳು ಬೀದಿಗೆ ಬಂದಿವೆ ಎಂದು ದೂರಿದರು.

    ಈಗಾಗಲೇ ಹಲವು ಬಾರಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಆದರೆ ಹಲವಾರು ಗ್ರಾಮಸ್ಥರ ಮನವಿಯನ್ನು ತಿರಸ್ಕರಿಸಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆಗಳ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

    ತಾಪಂ ಮಾಜಿ ಸದಸ್ಯ ಆರ್.ಪಿ.ವಸಂತಯ್ಯ, ನೀಲಮ್ಮ, ಮಹೇಶ್, ಧನಂಜಯ, ಸ್ತ್ರೀಶಕ್ತಿ ಸಂಘದ ತೀರ್ಥಲಕ್ಷ್ಮೀ, ಕಮಲಮ್ಮ, ವಿಜಯಲಕ್ಷ್ಮೀ, ಲಕ್ಷ್ಮೀದೇವಮ್ಮ, ಮೀನಾಕ್ಷಮ್ಮ ಇದ್ದರು.

LEAVE A REPLY

Please enter your comment!
Please enter your name here