ಸೋಲಾರ್: ಶೇ. 5 ಲಾಭಾಂಶ ತಿರುಮಣಿ ಅಭಿವೃದ್ಧಿಗೆ ಆಗ್ರಹ

0
37

ಪಾವಗಡ:

      ಸುಮ್ಮನೆ ಕುಳಿತರೆ ಕೆಲಸಗಳು ಅಗುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿ ಕರ್ತವ್ಯ ನಿರ್ವಹಿಸಿ ಎಂದು ತಾ.ಪಂ. ಅಧ್ಯಕ್ಷ ಸೊಗಡುವೆಂಕಟೇಶ್ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ತಾಕೀತು ಮಾಡಿದರು.

      ಅವರು ಗುರುವಾರ ಪಟ್ಟಣದ ತಾ.ಪಂ. ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ತಾ.ಪಂ. ನ ಲಿಂಕ್ ಡಾಕ್ಯೂ ಮೆಂಟ್ ನಿಧಿಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕ್ರಿಯಾ ಯೋಜನೆ ತಯಾರಿಸಿ ತಾ.ಪಂ.ಗೆ ಕೊಡಬೇಕು ಎಂದು ಸೂಚಿಸಿದರು.

      ಕಳೆದ ಸಾಲಿನಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಲಿಂಖ್ ಡಾಕ್ಯೂ ಮೆಂಟ್ ಸ್ಕೀಂ ನಲ್ಲಿ ಅವ್ಯವಹಾರ ಎಸಗಿದ್ದು ಈ ಸಾಲಿನಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಎಂದು ತಿಳಿಸಿದರು.

      ಸೋಲಾರ್ ಪಾರ್ಕ್ ನಿಂದ ಬಂದ ಲಾಭಾಂಶದಲ್ಲಿ ಶೇ. 5 ರಷ್ಟು ಹಣವನ್ನು ತಿರುಮಣಿ ಸುತ್ತಮುತ್ತ್ತ ಇರುವ ಗ್ರಾಮಗಳ ಅಭಿವೃದ್ದಿಗೆ ಮೀಸಲಿಡಬೇಕು ಎಂದು ಸೋಲಾರ್ ಪಾರ್ಕ್‍ನ ಎಂಜಿನಿಯರ್ ಪ್ರಕಾಶ್‍ಗೆ ಅಧ್ಯಕ್ಷರು ಸೂಚಿಸಿದಾಗ, 2018 ರ ಡಿಸೆಂಬರ್ ನಂತರ ಲಾಭಾಂಶದ ಹಣವನ್ನು ಗ್ರಾಮಗಳ ಅಭಿವೃದ್ದಿಗೆ ವಿನಿಯೋಗಿಸಲಾಗುವುದು ಮತ್ತು 240 ಸ್ಥಳಿಯ ಕಾರ್ಮಿಕರಿಗೆ ಸೋಲಾರ್ ಪಾರ್ಕ್‍ನಲ್ಲಿ ಉದ್ಯೋಗ ನೀಡಲಾಗಿದೆ ಎಂದು ಸೋಲಾರ್ ಪಾರ್ಕ್‍ನ ಮುಖ್ಯ ಎಂಜಿನಿಯರ್ ಪ್ರಕಾಶ್ ಉತ್ತರಿಸಿದರು.

      ತಿರುಮಣಿ ಆಸ್ಪತ್ರೆಯಲ್ಲಿ ಕಸಕಡ್ಡಿಯಿಂದ ಗಲೀಜಾಗಿದ್ದು, ಸೋಲಾರ್ ಪಾರ್ಕ್‍ನ ಕಾರ್ಮಿಕರು ಸ್ವಚ್ಚತೆ ಇಲ್ಲದೆ ಮಲೇರಿಯಾ ರೋಗಕ್ಕೆ ತುತ್ತಾಗುತ್ತಿದ್ದಾರೆ ಹಾಗೂ ಕಳೆದ ಸಾಲಿನಲ್ಲಿ 32 ಡೆಂಗ್ಯೂ ಜ್ವರದಿಂದ ರೋಗಿಗಳು ಸಾವನ್ನಪ್ಪಿದ್ದು, ಆರೋಗ್ಯ ಇಲಾಖೆ ಎಚ್ಚರದಿಂದ ಕಾರ್ಯನಿರ್ವಹಿಸಬೇಕು ಎಂದು ತಾ. ವೈದ್ಯಾಧಿಕಾರಿ ಡಾ. ವೆಂಕಟೇಶ್ ಮೂರ್ತಿಗೆ ಅಧ್ಯಕ್ಷರು ಸೂಚಿಸಿದರು.
ಡಾ. ವೆಂಕಟೇಶ್ ಮೂರ್ತಿ ಮಾತನಾಡಿ, ಸೋಲಾರ್ ಪಾರ್ಕ ಗೆ ಬೇರೆ ರಾಜ್ಯದಿಂದ ಬಂದ ಕಾರ್ಮಿಕರಿಗೆ ಮಾತ್ರ ಮಲೇರಿಯಾ ರೋಗ ಉಲ್ಬಣ ವಾಗಿದ್ದು ಸದ್ಯ ಈ ರೋಗವನ್ನು ಹತೋಟಿಗೆ ತರಲಾಗಿದೆ ಎಂದು ತಿಳಿಸಿದರು.

      ಪಟ್ಟಣದಲ್ಲಿ ಐ. ಎಸ್.ಐ. ಮಾರ್ಕ್ ಇಲ್ಲದ ಖಾಸಗಿ ಕುಡಿಯುವ ನೀರಿನ ಘಟಕಗಳ ಮೇಲೆ ಕ್ರಿಮಿನಲ್ ಕೇಸು ದಾಖಲಿಸಲು ವೈದ್ಯಾಧಿಕಾರಿ, ಪುರಸಭಾ ಮುಖ್ಯಾಧಿಕಾರಿ ಹಾಗೂ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಎಂಜಿನಿಯರ್‍ಗಳಿಗೆ ಅಧ್ಯಕ್ಷರು ಸೂಚಿಸಿದರು.
ಪಾವಗಡದಲ್ಲಿ 10, ವೈ.ಎನ್.ಹೊಸಕೋಟೆಯಲ್ಲಿ 4 ಮತ್ತು ತಿರುಮಣಿಯಲ್ಲಿ 1 ಕುಡಿಯುವ ನೀರಿನ ಘಟಕಗಳಿದ್ದು, ಐ.ಎಸ್.ಐ. ಮಾರ್ಕ್ ಹೊಂದಿರುವುದಿಲ್ಲ. ಈ ಘಟಕಗಳ ಮಾಲೀಕರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನೀರು ವಿಭಾಗದ ಎಂಜಿನಿಯರ್ ಬಿ.ಪಿ. ನಾಗರಾಜ್ ತಿಳಿಸಿದರು.

      ಪ್ರಧಾನಮಂತ್ರಿ ಉಜ್ವಲ ಉಚಿತ ಗ್ಯಾಸ್ ವಿತರಣಾ ಯೋಜನೆಯಲ್ಲಿ ಪಾವಗಡ ಮತ್ತು ವೈ.ಎನ್.ಹೊಸಕೋಟೆ ಗ್ಯಾಸ್ ಏಜೆನ್ಸಿಯವರು ಫಲಾನುಭವಿಗಳಿಂದ ಹಣ ಪಡೆಯುತ್ತಿದ್ದಾರೆಂದು ಅಧ್ಯಕ್ಷರು ಆಹಾರ ಇಲಾಖೆಯ ಇನ್‍ಸ್ಪೆಕ್ಟರ್ ಬಸವರಾಜು ಮೇಲೆ ರೇಗಿದರು. ಆಗ ಬಸವರಾಜು ಈ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

      ಜಿ.ಪಂ. ಎಇಇ ಈಶ್ವರಯ್ಯ, ತೋಟಗಾರಿಕಾ ಸಹಾಯಕ ನಿರ್ದೇಶಕ ಸುಧಾಕರ್, ಬಿ.ಸಿ.ಎಂ. ವಿಸರಣಾಧಿಕಾರಿ ಸುಬ್ಬರಾಯ, ಸಮಾಜಕಲ್ಯಾಣ ಇಲಾಖಾಧಿಕಾರಿ ಶಿವಪ್ಪ, ಎಸ್.ಟಿ. ಇಲಾಖಾಧಿಕಾರಿ ದಿವಾಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶಿವಕುಮಾರಯ್ಯ, ಕಾರ್ಮಿಕ ಇಲಾಖೆಯ ಮಹದೇವಪ್ಪ, ಬಿ.ಇ.ಒ. ಕುಮಾರಸ್ವಾಮಿ ಮತಿತ್ತರ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಯನ್ನು ಸಭೆಯಲ್ಲಿ ವಿವರಿಸಿದರು.

      ಉಪಾಧ್ಯಕ್ಷೆ ಕೃಷ್ಣವೇಣಿ ಆದಿನಾರಾಯಣ, ತಾ.ಪಂ. ಇ.ಒ. ಆನಂದ್ ಕುಮಾರ್, ತಾ.ಪಂ. ಸದಸ್ಯ ಪುಟ್ಟಣ್ಣ, ತಾ.ಪಂ. ನ ಗುಜ್ಜಾರಪ್ಪ, ಬಾಷಾ ಮತ್ತಿತರರು ಹಾಜರಿದ್ದರು.
 

LEAVE A REPLY

Please enter your comment!
Please enter your name here