ಸ್ಕೇಟಿಂಗ್‍ನಲ್ಲಿ ಚಿನ್ನದ ಪದಕ ಪಡೆದ ವಿನಯ

0
33

 

   ಹರಪನಹಳ್ಳಿ:

  ಥೈಲಾಂಡ್‍ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದಲ್ಲಿ 14ವರ್ಷದೊಳಗಿನ ಮಕ್ಕಳ ಸ್ಕೇಟಿಂಗ್‍ನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನ ಪಡೆದು ಚಿನ್ನದಂತಹ ಸಾಧನೆ ಮಾಡಿದ್ದಾನೆ.
ಪಟ್ಟಣದ ವಕೀಲಿ ವೃತ್ತಿಯಲ್ಲಿರುವ ಬಿ.ರೇವಣಗೌಡ ಹಾಗೂ ರೇಣುಕಮ್ಮ ದಂಪತಿಯ ಪುತ್ರ ಬಿ.ವಿನಯ್ ಹರಿಹರದ ವಿದ್ಯಾದಾಯಿನಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಅಭ್ಯಾಸ ಮಾಡುತ್ತಿದ್ದಾನೆ.

   ದೈಲಾಂಡ್‍ನಲ್ಲಿ ಜುಲೈ 27 ರಿಂದ 31ರವರೆಗೆ ನಡೆದ ಅಂತರಾಷ್ಟ್ರೀಯ ಕ್ರೀಡಾಕೂಟದ 14 ವರ್ಷ ವಯೋಮಾನದ 100ಮೀ ಸ್ಪರ್ಧೆಯಲ್ಲಿ 15 ರಾಷ್ಟ್ರಗಳ ಕ್ರಿಡಾಪಟುಗಳನ್ನು ಹಿಂದಿಕ್ಕಿ ಚಿನ್ನವನ್ನು ಗಿಟ್ಟಿಸಿಕೊಂಡಿದ್ದಾನೆ.
ಈ ಮೊದಲು 7ನೇ ತರಗತಿಯಲ್ಲಿ ಓದುತ್ತಿರುವ ಸಂದರ್ಭದಲ್ಲೂ ಸಹ ಮಲೇಶಿಯಾದಲ್ಲಿ ಅಂತರಾಷ್ಟ್ರೀಯ ಕ್ರೀಡಾ ಸ್ಪರ್ದೆಯಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದು ಸತತ ಎರಡನೇ ಬಾರಿಗೆ ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಎರಡು ಚಿನ್ನದ ಪದಕ ಪಡೆದ ಕೀರ್ತಿ ಈತನಿಗೆ ಸಲ್ಲುತ್ತದೆ.

   ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಶ್ರೀಲಂಕ, ಪಾಕಿಸ್ತಾನ, ಮಲೇಶಿಯಾ, ಥೈಲಾಂಡ, ಬರ್ಮಾದೇಶಗಳು ಭಾಗವಹಿಸಿದ್ದು  ಇದರಲ್ಲಿ   ಭಾರತದಿಂದ ಪ್ರತಿನಿಧಿಸಿ ಸ್ಪರ್ಧೇಯಲ್ಲಿ ಚಿನ್ನ ಪಡೆದಿದ್ದಾನೆ. ಅಲ್ಲದೇ ರಾಜ್ಯದ ಬಳ್ಳಾರಿಯಲ್ಲಿ ಪ್ರಥಮವಾಗಿ ಭಾಗವಹಿಸಿ ಜಿಲ್ಲಾ ಮಟ್ಟದ ಸ್ಪರ್ದೆಗಳಲ್ಲಿ ಯಶಸ್ವಿಗಳಿಸಿ ರಾಜ್ಯದ ಮಟ್ಟದಲ್ಲೂ ಚಿನ್ನ ಪಡೆದು ನಂತರ ಮಹಾರಾಷ್ಟ್ರ, ಮದ್ಯಪ್ರದೇಶ, ಹರ್ಯಾಣ, ಮಲೇಶಿಯಾ, ಥೈಲಾಂಡ ದೇಶ ಸೇರಿದಂತೆ 11 ಕಡೆಗಳಲ್ಲಿ ಭಾಗವಹಿಸಿ ಉನ್ನತ ಸಾಧನೆ ಮಾಡಿದ್ದು, ಓದಿನಲ್ಲೂ ಪ್ರತಿಭಾವಂತನಿದ್ದಾನೆ. ಸ್ಕೇಟಿಂಗ್ ಜತೆ ಕೇರಂ, ಅಥ್ಲೆಟಿಕ್ಸ್‍ಗಳಲ್ಲು ಮುಂಚೂಣಿ.

  ಸತತ ಕ್ರೀಡೆಯಲ್ಲಿ ಆಸಕ್ತಿಯನ್ನು ಹೊಂದಿದ್ದು ಓದಿನ ಜತೆಯಲ್ಲಿ ಪ್ರತಿನಿತ್ಯ ಸಂಜೆ 5ರಿಂದ 6.30ರವರೆಗೆ ಸ್ಕೇಟಿಂಗ್ ತರಬೇತಿ ಪಡೆದುಕೊಳ್ಳುತ್ತಿರುವ ಇವರು ದೇಶ ಪ್ರತಿನಿಧಿಸಿ ಓಲಂಪಿಕ್ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಆಸೆಯನ್ನು ಇಂಗಿತ ವ್ಯಕ್ತಪಡಿಸಿದ್ದು, ಈತನಿಗೆ ತರಬೇತುದಾರ ಮಹ್ಮದ್ ಅಲಿ, ಶಾಲಾ ಸಿಬ್ಬಂದಿ ಹಾಗೂ ಪೋಷಕರು ಪ್ರೋತ್ಸಾಹ ನೀಡುತ್ತಿದ್ದಾರೆ.
ವಿನಯ್‍ನ ಪೋಷಕರಾದ ಬಿ.ರೇವಣಗೌಡ ಮತ್ತು ರೇಣುಕಮ್ಮ ಮಾತನಾಡಿ, ಚಿಕ್ಕವನಿದ್ದಾಗಿನಿಂದ ನಮ್ಮ ಮಗ ಸ್ಕೇಟಿಂಗ್‍ನಲ್ಲಿ ಆಸಕ್ತಿ ತೋರಿಸಿದ, ಅದನ್ನು ಪ್ರೋತ್ಸಾಹಿಸಲು ಹರಿಹರದ ಒಲಿಂಪಿಕ್ಸ್ ಅಸೋಸಿಯೇಷನ್‍ಗೆ ಸೇರಿಸಿದ್ದೇವೆ. ಸ್ಪರ್ಧೆಗಳು ಯಾವ ಪ್ರದೇಶದಲ್ಲೂ ಆಯೋಜನೆಗೊಂಡರೂ ಮಗನ ಆಸೆ ಈಡೇರಿಸಲು ಎಲ್ಲ ರೀತಿಯ ಸಹಕಾರ ಕೊಡುತ್ತಿದ್ದೇವೆ ಎಂದು ಹೇಳಿದರು.

LEAVE A REPLY

Please enter your comment!
Please enter your name here