ಸ್ಮಾರ್ಟ್ ಲೋಕಸಭಾ ಕ್ಷೇತ್ರಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ

0
3

ದಾವಣಗೆರೆ :

         ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ಪರಿಶ್ರಮದಿಂದ ದಾವಣಗೆರೆ ಸ್ಮಾರ್ಟ್‍ಸಿಟಿಯನ್ನಾಗಿ ಮಾಡುತ್ತಿದ್ದೇವೆ. ಸ್ಮಾರ್ಟ್‍ಸಿಟಿ ಮಾದರಿಯಲ್ಲಿ ಇಡೀ ದಾವಣಗೆರೆ ಲೋಕಸಭಾ ಕ್ಷೇತ್ರ ಹಾಗೂ ಜಿಲ್ಲೆ ಸ್ಮಾರ್ಟ್ ಆಗಿ ನಿರ್ಮಿಸಲು ಕಾಂಗ್ರೆಸ್– ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಂ ಹೆಚ್.ಬಿ.ಮಂಜಪ್ಪ ಅವರಿಗೆ ಮತ ನೀಡಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಮನವಿ ಮಾಡಿದರು.

        ಮಂಗಳವಾರ ಬೆಳಗ್ಗೆ ದಾವಣಗೆರೆ ಜಿಲ್ಲಾ ಕ್ರೀಡಾಂಗಣ, ವಿಶ್ವೇಶರಯ್ಯ ಉದ್ಯಾನವನ, ಶಾಮನೂರು ರಸ್ತೆ , ಬಾಪೂಜಿ ಆಸ್ಪತ್ರೆ ರಸ್ತೆ ಸೇರಿದಂಥೆ ಹಲವಡೆ ಬಿರುಸಿನ ಪ್ರಚಾರ ನಡೆಸಿದರು.

       ಕ್ರೀಡಾಂಗಣ , ಉದ್ಯಾನವನಗಳಲ್ಲಿ ವಾಯುವಿಹಾರಕ್ಕೆ ಬಂದವರು, ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಡಿ.ಬಸವರಾಜ್ ದಾವಣಗೆರೆ ನಗರಕ್ಕೆ ಜಿಲ್ಲಾ ಕ್ರೀಡಾಂಗಣ, ಸುಸಜ್ಜಿತ ಈಜುಕೊಳ, ನೇತಾಜೀ ಸುಭಾಷಚಂದ್ರಬೋಷ್ ಒಳಾಂಗಣ ಕ್ರೀಡಾಂಗಣ , ಜೆ.ಎಚ್.ಪಟೇಲ್ ಬಡಾವಣೆಯಲ್ಲಿ 8 ಎಕರೆ ಪ್ರದೇಶದಲ್ಲಿ ಕ್ರೀಕೆಟ್ ಕ್ರೀಡಾಂಗಣ , ನಗರದ ಹಲವು ಉದ್ಯಾನವನಗಳಲ್ಲಿ ಕ್ರೀಡಾಪಟುಗಳಿಗೆ ಕ್ರೀಡಾ ಪರಿಕರಗಳನ್ನು ಅಳವಡಿಸಲಾಗಿದೆ. ಯುವಜನರಿಗಾಗಿ ಹಲವು ಸೌಲಭ್ಯಗಳನ್ನು ಎಸ್.ಎಸ್. ಮಲ್ಲಿಕಾರ್ಜುನ್ ಅವಧಿಯಲ್ಲಿ ಒದಗಿಸಲಾಗಿದೆ ಎಂದು ಕ್ರೀಡಾಪಟುಗಳಿಗೆ ಮನವರಿಕೆ ಮಾಡಿ ಮತಯಾಚಿಸಿದರು.

        ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಎಸ್.ಎಂ.ಜಯಪ್ರಕಾಶ್, ಎಂ.ಸಂದೀಪ, ಎನ್.ಆರ್.ಹೆಚ್. ಸುರೇಶ್ , ಪ್ರಭುಸ್ವಾಮಿ, ಶಶಿಧರ, ಡಿ.ಎಂ.ಸಂದೀಪ, ಗಿರಿಧರ್, ಸೂರಜ್, ಸಂಜು, ಪ್ರವೀಣ್, ಹೆಚ್.ಹರೀಶ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here