ಸ್ವಉದ್ಯೋಗಕ್ಕೆ ಐಟಿಐ ಶಿಕ್ಷಣ ಸೂಕ್ತ : ಸೈಯದ್ ಸೈಫುಲ್ಲಾ

0
40

    ಸ್ವಉದ್ಯೋಗ ಮಾಡಲು ಹಾಗೂ ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸಲು ಐ.ಟಿ.ಐ ಸೂಕ್ತ ಎಂದು ಮಿಲ್ಲತ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ಸೈಯದ್ ಸೈಫುಲ್ಲಾ ರವರು ಹೇಳಿದರು.

      ಕೆ.ಎಸ್.ಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಮಿಲ್ಲತ್ ಐ.ಟಿ.ಐ ನ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ತರಬೇತಿದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದುವರೆದು ಮಾತನಾಡಿ ನಮ್ಮ ಐ.ಟಿ.ಐ ನ ಫಿಟ್ಟರ್ ಹಾಗೂ ಎಲೆಕ್ಟ್ರಿಷಿಯನ್ ವಿಭಾಗದಲ್ಲಿ ತರಬೇತಿ ಪಡೆದು ದೇಶ ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಮತ್ತು ಒಳ್ಳೆಯ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.

   ಕೈಗಾರಿಕ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ಬಿ.ಎಲ್. ಚಂದ್ರಶೇಖರ್ ಮಾತನಾಡಿ, ಐ.ಟಿ.ಐ ತರಬೇತಿ ಮುಗಿಸಿದವರಿಗೆ ಹಲವಾರು ಅವಕಾಶಗಳನ್ನು ಒದಗಿಸಿದ್ದು ಐ.ಟ.ಐ ವ್ಯಾಸಂಗವು ಪಿ.ಯು.ಸಿಗೆ ಸಮಾನವಾಗಿದ್ದು ನೇರವಾಗಿ ಬಿ.ಎ, ಬಿ.ಕಾಂ. ಮತ್ತು ಡಿಪ್ಲೋಮಾ ಎರಡನೇ ವರ್ಷಕ್ಕೆ ಪ್ರವೇಶ ತೆಗೆದುಕೊಂಡು ವ್ಯಾಸಂಗ ಮುಂದುವರಿಸಬಹುದಾಗಿದೆ ಎಂದು ಹೇಳಿದರು.

      ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಾನಗರಪಾಲಿಕೆಯ ಉಪಮಹಾಪೌರ ಚಮನ್ ಸಾಬ್ ರವರು ಸಭೆಯನ್ನು ಉದ್ದೇಶಿಸಿ ಮಾತಾನಾಡುತ್ತ ವಿದ್ಯಾರ್ಥಿ ದೆಸೆಯಲ್ಲಿ ವ್ಯಾಸಂಗ ಮಾಡುವಾಗ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಉತ್ತಮವಾದ ತರಬೇತಿ ಪಡೆದು ಗುರು ಹಿರಿಯರಿಗೆ ವಿಧೇಯರಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಹಾರೈಸಿದರು.

   ಈ ಸಮಾರಂಭದಲ್ಲಿ ಅತಿಹೆಚ್ಚು ಅಂಕ ಪಡೆದ ಫಿಟ್ಟರ್ ಹಾಗೂ ಎಲೆಕ್ಟ್ರಿಷಿಯನ್ ವಿಭಾಗದ ತರಬೇತಿದಾರರಿಗೆ ಸನ್ಮಾನಿಸಲಾಯಿತು, ಈ ಸಮಾರಂಭದಲ್ಲಿ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಾದ ಮಂಜುನಾಥ, ಉಮೇಶ ಮತ್ತು ವಿಜೇತ್ ಎಂ.ಡಿ ರವರಿಗೆ ಸರ್ಕಾರದಿಂದ ನೀಡಲಾದ ಲೇಖನ ಸಾಮಗ್ರಿಗಳು, ಸಮವಸ್ತ್ರ, ಹಾಗೂ ಇನ್ನು ಇತರೆ ಉಪಕರಣಗಳನ್ನು ವಿತರಿಸಲಾಯಿತು.

    ಇದೆ ಸಂದರ್ಭದಲ್ಲಿ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ತರಬೇತುದಾರರಿಗೆ ಬಹುಮಾನಗಳನ್ನು ಹಾಗೂ ತರಬೇತಿ ಪಡೆದು ಉನ್ನತಹುದ್ದೆಗಳಲ್ಲಿರುವ ವಿವಿಧ ತರಬೇತುದಾರರು ಹಾಗೂ ಅವರ ಪೋಷಕರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ನಿಸಾರಅಹ್ಮದ್‍ಮುಲ್ಲಾ,(ಕಿ.ತ.ಅ), ಸ್ವಾಗತವನ್ನು ಕುಮಾರಿ ಮೇಘನಾ ಹೆಚ್.ಎಸ್‍ರವರು ನಿರ್ವಹಿಸಿದರು, ಪ್ರಾಸ್ತವಿಕ ನುಡಿಗಳನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀಯುತ ಮೊಹ್ಮದ್ ಜಬೀವುಲ್ಲಾ ರವರು ಮಾತನಾಡಿದರು,

    ಈ ಸಂದರ್ಭದಲ್ಲಿ ಶ್ರೀ ಬಸವರಾಜ್ (ತ.ಅ) ಹೂವಿನಹಡಗಲಿ, ಶ್ರೀ ಹನುಮಂತನಾಯ್ಕ, ಜಿಲ್ಲಾಪಂಚಾಯಿತಿ, ಜನಾಬ್ ಸೈಯದ್ ಅಲಿ ಆಡಳಿತಾಧಿಕಾರಿಗಳು, ಶ್ರೀ ಬಾಟಲಿ ಶೇಖ್‍ಅಹ್ಮದ್ , ಡಾ. ದಾವುದ್‍ಮೋಹಸಿನ್, ಜಾಕೀರ್‍ಹುಸೇನ್, ಯುಸೂಫ್‍ಪಾಷಾ, ಕಲ್ಲಪ್ಪ, ಕುಷ್ತರಿಬೇಗಂ, ಉಪಸ್ಥಿತರಿದ್ದರು. ಕಾರ್ಯಕ್ರಮದ ಉಸ್ತುವಾರಿಯನ್ನು ಫಜ್ಲೂರ್ ರಹಮಾನ್ ಮತ್ತು ಮಲ್ಲಿಕ್ ರಿಹಾನ್ ವಹಿಸಿದರು, ಕಿರಿಯ ತರಬೇತಿ ಅಧಿಕಾರಿಗಳಾದ ಹಿದಾಯತ್‍ವುಲ್ಲಾ ವೇದಿಕೆ ಉಸ್ತುವಾರಿವಹಿಸಿದರು, ವಿಡೀಯೋ ಪ್ರದರ್ಶನ ಮತ್ತು ವಂದನಾರ್ಪಣೆಯನ್ನು,ಕಚೇರಿ ಅಧೀಕ್ಷಕರಾದ ಸೈಯದ್ ಆಲಮ್ ನಿರ್ವಹಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಫರಹನಾಜ್ ನಿರ್ವಹಿಸಿದರು.

LEAVE A REPLY

Please enter your comment!
Please enter your name here