ಸ್ವಚ್ಚತೆ ಕಾಪಾಡುವುದು ಎಲ್ಲರ ಕರ್ತವ್ಯ;ದೀಪಕ್

0
28

ಚಿತ್ರದುರ್ಗ;
            ನಗರದ ಸುತ್ತಮುತ್ತ ವಾಸಿಸುವ ಜನರು ಕಸ ವಿಂಗಡಣೆ, ಕಸ ವಿಲೇವಾರಿ, ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು, ನಗರಸಭೆಯವರ ಜೊತೆ ಕೈ ಜೋಡಿಸಿ, ಸುಂದರ ನಗರವನ್ನಾಗಿಸಲು ಕೈಜೋಡಿಸಬೇಕು, ಎಂದು 31 ನೇ ವಾರ್ಡನ ಸದಸ್ಯರಾದ ಜಿ.ಎಸ್. ದೀಪಕ್ ತಿಳಿಸಿದರು.

              ಅವರು ಪ್ರಜಾಪೀತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಸ್ವಚ್ಛತಾ ಆಂದೋಲನದ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಾತನಾಡಿದರು.

                ಕಸ ವಿಂಗಡಣೆ, ಕಸ ವಿಲೇವಾರಿಯ, ಬಗ್ಗೆ ಇನ್ನು ನಾವು ಜನರಲ್ಲಿ ಸರಿಯಾದ ಜಾಗ್ರತಿ ಮೂಡಿಸಬೇಕು. ಜನರು ಕಸ ವಿಂಗಡಣೆಯನ್ನು ಸಮರ್ಪಕವಾಗಿ ನಿರ್ವಹಿಸಿ, ನಗರದ ಸೌಂದರ್ಯವನ್ನು ಹೆಚ್ಚಿಸಬೇಕು ಹಾಗೂ ಆರೋಗ್ಯಕ್ಕೋಸ್ಕರ ವಾದರೂ ನಾವು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.

               ಪರಿಸರವಾದಿ ಡಾ. ಎಚ್. ಕೆ. ಎಸ್. ಸ್ವಾಮಿ ಮಾತನಾಡುತ್ತಾ ಕಚೇರಿಗಳಲ್ಲಿ ವ್ಯರ್ಥವಾಗಿ ಬಿಸಾಡುವ ಕಾಗದವನ್ನು ಮರುಬಳಕೆ ಮಾಡಬೇಕು, ಕಸ ಎಸೆದವರನ್ನು ಗುರುತಿಸಿ ಅವರ ಮನ ಪರಿವರ್ತಿಸಬೇಕು, ಎಲ್ಲೆಂದರಲ್ಲಿ ಕಸ ಬಿಸಾಡುತ್ತಿರುವ ಜನರ ಮನ ಪರಿವರ್ತಿಸಬೇಕಾಗಿದೆ, ಶೌಚಾಲಯವನ್ನು ಬಳಸಿ ಸ್ವಚ್ಛತೆಯ ಬಗ್ಗೆ ಅರಿವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.

                 ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರಾದ ಶಿವರಶ್ಮಿ ಅಕ್ಕನವರು ಮಾತನಾಡುತ್ತಾ, ಮನಸ್ಸಿನ ಸ್ವಚ್ಛತೆಯನ್ನು ರೂಢಿಸಿಕೊಂಡಾಗ ಮಾತ್ರ ಪರಿಸರದ ಸ್ವಚ್ಛತೆಯನ್ನು ಸುಲಭವಾಗಿ ನಿಭಾಯಿಸಬಹುದು, ಆಧ್ಯಾತ್ಮಿಕ ಚಿಂತನೆಗಳನ್ನು ಜನರಲ್ಲಿ ಮೂಡಿಸುವ ಮುಖಾಂತರ, ಸ್ವಚ್ಛತೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುವುದು ಎಂದರು.

                  ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲಯ್ಯ, ಕೃಪಾಕರ್, ಕೃಷ್ಣಪ್ಪ, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ದಿವ್ಯಕ್ಕ, ಬ್ರಹ್ಮ ರಕ್ಕ, ಕನಕಕ್ಕ, ವಾಣಿಜ್ಯ ತೆರಿಗೆ ಇಲಾಖೆಯ ಕೃಷ್ಣಪ್ಪ, ಜಾನುವಾರು ಅಭಿವೃದ್ಧಿ ಅಧಿಕಾರಿ ಆರ್. ಎಸ್. ಪೂಜಾರ, ರಾಜಶೇಖರಯ್ಯ, ಭದ್ರಯ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here