ಸ್ವತಂತ್ರ ಹಕ್ಕಿ ಗೂಡು ಸೇರೋದನ್ನು ನಿರ್ಧರಿಸೋದು ನ್ಯಾಯಾಧೀಶರು

0
47
ಲಂಡನ್: 
        ಇಷ್ಟು ದಿನ ಮದ್ಯದ ದೊರೆಯೆಂದೇ ಖ್ಯಾತರಾಗಿದ್ದು  ಈಗ ಸಾಲದ ದೊರೆ ಎಂದು ಅಪಹಾಸ್ಯಕ್ಕೆ ಗುರಿಯಾಗಿರುವ ವಿಜಯ್ ಮಲ್ಯ ಅವರು ಸಾವಿರಾರು ಕೋಟಿ ಸಾಲ ಮಾಡಿ ಭಾರತೀಯ ಬ್ಯಾಂಕ್’ಗಳಿಗೆ ಪಂಗನಾಮ ಹಾಕಿ ವಿದೇಶದಲ್ಲಿ  ಸ್ವತಂತ್ರ ಹಕ್ಕಿಯಂತೆ ಹಾರಾಡಿಕೊಂಡಿದ್ದಾರೆ. ಲಂಡನ್ ನಲ್ಲಿ ಸ್ವತಂತ್ರ ಹಕ್ಕಿಯಂತೆ ಹಾರಾಡಿಕೊಂಡಿರುವ ವಿಜಯ್ ಮಲ್ಯ ಅವರು ಓವಲ್ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದು, ವಿಜಯ್ ಮಲ್ಯ ಅವರನ್ನು ಕಂಡ ಪತ್ರಕರ್ತರೊಬ್ಬರು ಭಾರತಕ್ಕೆ ಹಿಂದಿರುಗುವ ಕುರಿತು ಪ್ರಶ್ನೆಯೊಂದನ್ನು ಕೇಳಿದ್ದಾರೆ. ಈ ವೇಳೆ ಉತ್ತರಿಸಿರುವ ಮಲ್ಯ, ಭಾರತಕ್ಕೆ ಮರಳುವಿಕೆ ಕುರಿತು ನ್ಯಾಯಾಧೀಶರೇ ನಿರ್ಧರಿಸುತ್ತಾರೆಂದು ಹೇಳಿದ್ದಾರೆ. 
          ಬಳಿಕ ಮತ್ತೆ ಪತ್ರಕರ್ತ ಅದೇ ಪ್ರಶ್ನೆ ಕೇಳಿದ್ದಕ್ಕೆ ಸಿಡಿಮಿಡಿಕೊಂಡ ಮಲ್ಯ ಅವರು, ತಾನು ಯಾವುದೇ ಮಾಧ್ಯಮಗಳಿಗೂ ಸಂದರ್ಶನ ನೀಡುವುದಿಲ್ಲ ಎಂದು ಹೇಳಿ ಕಾರು ಹತ್ತಿ ಸ್ಥಳದಿಂದ ಹೊರಟು ಹೋಗಿದ್ದಾರೆ.

LEAVE A REPLY

Please enter your comment!
Please enter your name here