ಸ್ವಯಂ ಪ್ರೇರಿತ ರಕ್ತದಾನ.

0
17

ಹೊಸಪೇಟೆ :

   ತಾಲೂಕಿನ ಗಾದಿಗನೂರು-ಭುವನಹಳ್ಳಿ ಗ್ರಾಮಗಳ ಮಧ್ಯೆ ಇರುವ ಶ್ರೀ ಶಿರಡಿ ಸಾಯಿ ಬಾಬಾ ಸೇವಾ ಆಶ್ರಮದಲ್ಲಿ ಗುರು ಪೂರ್ಣಿಮ ಅಂಗವಾಗಿ ಶುಕ್ರವಾರ ಸಂಜೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.

   ಪ್ರಾಥಮಿಕ ಆರೋಗ್ಯ ಕೇಂದ್ರ ಗಾದಿಗನೂರು, ಹಾಗು ಸ್ವಾಮಿ ವಿವೇಕಾನಂದ ರಕ್ತ ಭಂಡಾರ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಡಾ.ಬಸವರಾಜ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಕ್ತದಾನವು ಒಬ್ಬರ ಜೀವ ಉಳಿಸುವ ಶ್ರೇಷ್ಠದಾನವಾಗಿದ್ದು, ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಮನುಷ್ಯ ಲವಲವಿಕೆಯಿಂದ, ಉತ್ಸಾಹದಿಂದ ಜೀವಿಸಲು ಸಾಧ್ಯವಾಗುತ್ತದೆ. ದೇಹದ ಆರೋಗ್ಯವೂ ಕೂಡ ಸದೃಡವಾಗಿರುತ್ತದೆ ಎಂದರು.

  ಬಳಿಕ ರಕ್ತದಾನವು ಆಶ್ರಮದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯಿತು. ಒಟ್ಟು 103 ಜನ ರಕ್ತದಾನ ಮಾಡಿದರು.
ಈ ಸಂಧರ್ಭದಲ್ಲಿ ಡಾ.ದಿವ್ಯಶ್ರೀ, ಸಿಬ್ಬಂದಿಗಳಾದ ಬಿ.ಪಾಂಡುರಂಗ, ಕೆ.ಸುರೇಶ, ಮನೋಹರ, ಸಾವಿತ್ರಿ, ಶ್ರೀರಾಮ ಹಾಗು ಆಶ್ರಮದ ಸಿಬ್ಬಂದಿಗಳು, 2 ಗ್ರಾಮಗಳ ವಿವಿಧ ಸಂಘ ಸಂಸ್ಥೆಗಳ ಯುವಕರು, ಹಿರಿಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here