ಸ್ವಾತಂತ್ರ್ಯ ಹೋರಾಟಗಾರ ಡಿ.ಹೆಚ್. ಕೇಶವ ಅಸ್ತಂಗತ

0
7

 ದಾವಣಗೆರೆ:

      ನಗರದ ಎಂಸಿಸಿ ಎ ಬ್ಲಾಕ್ ನಿವಾಸಿಗಳು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ದಕ್ಷಿಣ ರೈಲ್ವೆ ನಿವೃತ್ತ ಅಧಿಕಾರಿ (ಸಿಟಿಟಿಐ) ಕುವೆಂಪು ವಿವಿ ಸೆನೆಟ್‍ನ ಮಾಜಿ ಸದಸ್ಯರು, ದಾವಣಗೆರೆ ಥಿಯಸಾಫಿಕಲ್ ಸೊಸೈಟಿಯ ಮಾಜಿ ಅಧ್ಯಕ್ಷರು, ನಗರದ ಆದಿ ಕರ್ನಾಟಕ ವಿದ್ಯಾಭಿದ್ಧಿ ಸಂಘದ ಮಾಜಿ ಉಪಾಧ್ಯಕ್ಷರು ದಕ್ಷಿಣ ರೈಲ್ವೆ ಎಸ್ಸಿ ಎಸ್ಟಿ ಎಂಪ್ಲಾಯಿಸ್ ಯೂನಿಯನ್‍ನ ಮಾಜಿ ಸದಸ್ಯರಾಗಿದ್ದ ಡಿ.ಹೆಚ್. ಕೇಶವ (93) ಅವರು ಇಂದು ಮಧ್ಯಾಹ್ನ 3 ಗಂಟೆಗೆ ಅಸ್ತಂಗತರಾಗಿದ್ದಾರೆ.

      ಹಲವು ದಿನಗಳಿಂದ ವೈಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದು, ಮೃತರ ಅಂತ್ಯಕ್ರಿಯೆ ಜನವರಿ 13ರ ಮಧ್ಯಾಹ್ನ 4ಕ್ಕೆ ನಗರದ ಗಾಂಧಿನಗರದ ಬಳಿಯ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು. ಮೃತರ ಅಂತಿಮ ದರ್ಶನಕ್ಕೆ 13ರ ಮಧ್ಯಾಹ್ನ 3ರವರೆಗೆ ನಗರದ ಎಂಸಿಸಿ ಎ ಬ್ಲಾಕ್, 11ನೇ ಕ್ರಾಸ್‍ನಲ್ಲಿರುವ ಅವರ ಪುತ್ರ ಪತ್ರಕರ್ತ ಕೆ. ಚಂದ್ರಣ್ಣ ಅವರ ನಿವಾಸದಲ್ಲಿ ಇರಿಸಲಾಗಿದೆ. ಮೃತರು ಪತ್ರಕರ್ತರಾದ ಕೆ. ಚಂದ್ರಣ್ಣ, ಕೆ. ಏಕಾಂತಪ್ಪ ಸೇರಿದಂತೆ ಐವರು ಪುತ್ರರು, ಓರ್ವ ಪುತ್ರಿ ಅವರ ಅಳಿಯ ಬಿ.ಎಸ್‍ಎಫ್‍ನ ನಿವೃತ್ತ ಡಿಐಜಿ ವೈ.ವೈ. ಹಂದ್ರಾಳ್ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

      ಸುಮಾರು 30 ವರ್ಷಗಳ ಕಾಲ ನಗರದಲ್ಲಿ ಥಿಯಸಾಫಿಕಲ್ ಸೊಸೈಟಿಯಲ್ಲಿ ಸೇವೆ ಸಲ್ಲಿಸಿದ್ದರು. ಮುರುಘಾ ಶರಣರು ಅಲ್ಲದೇ ನಗರದ ಅನೇಕ ಸಂಘ ಸಂಸ್ಥೆಗಳು ಅವರ ಅನನ್ಯ ಸೇವೆಯನ್ನು ಸ್ಮರಿಸಿ ಸನ್ಮಾನಿಸಿ ಸತ್ಕರಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here