ಹನುಮಾನ್ ಮಾತ್ರ ಮಾಡಬಲ್ಲ ಆ ಎಂಟು ಸಾಹಸಗಳು ಯಾವುದು!?

0
96

  ಶಿವಪುರಾಣ ಹೇಳುವ ಪ್ರಕಾರ ಹನುಮಂತ ದೇವರು ಶಿವ ಸ್ವರೂಪ. ಅದೇ ರೀತಿ ರಾಮ ದೇವರು ವಿಷ್ಣು ದೇವರ ಸ್ವರೂಪ. ರಾಮ ದೇವರಿಗೆ ಭೂಮಿ ಮೇಲೆ ಧರ್ಮ ಸ್ಥಾಪನೆ ಮಾಡಲು ನೆರವಾಗುವ ಕಾರಣಕ್ಕಾಗಿ ಹನುಮಂತ ದೇವರು ಜನಿಸಿದರು ಎನ್ನಲಾಗುತ್ತದೆ. ಕೆಲವೊಂದು ವಿಚಾರಗಳನ್ನು ಹನುಮಂತ ದೇವರು ಮಾತ್ರ ಮಾಡಬಲ್ಲರು ಎಂದು ಪುರಾಣಗಳು ಹೇಳುತ್ತವೆ. ಅದು ಯಾವುದೆಂದು ನಾವು ತಿಳಿಯುವ…

1.ವಿಶಾಲ ಸಮುದ್ರ ದಾಟಿರುವುದು  :

Image result for hanuman towards lanka

      ಸೀತೆಯ ಹುಡುಕಾಟ ನಡೆಸುತ್ತಿದ್ದ ಹನುಮಂತ ದೇವರು, ಅಂಗದ ಮತ್ತು ಜಾಂಬವಂತ ಹಾಗೂ ಇತರರು ವಿಶಾಲವಾಗಿರುವ ಸಮುದ್ರವನ್ನು ನೋಡುವರು. ವಿಶಾಲವಾಗಿರುವ ಸಮುದ್ರವನ್ನು ನೋಡಿದ ಇವರಿಗೆ ಮಾತೇ ಬರಲಿಲ್ಲ. ಯಾರಿಗೂ ಇದನ್ನು ದಾಟುವಂತಹ ಧೈರ್ಯ ಬರಲೇ ಇಲ್ಲ. ಕಪಿ ಸೇನೆಯ ನೇತೃತ್ವ ವಹಿಸಿದ್ದ ಜಾಂಬವಂತ, ಈ ಸಮುದ್ರವನ್ನು ದಾಟುವಂತಹ ಶಕ್ತಿ ಹನುಮಂತನಲ್ಲಿ ಇದೆ ಎಂದು ಹೇಳುತ್ತಾರೆ. ಹನುಮಂತನು ತನ್ನಲ್ಲಿರುವಂತ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳುವಂತೆ ಜಾಂಬವಂತ ಮಾಡುತ್ತಾನೆ. ಇದರ ಬಳಿಕ ಹನುಮಂತ ಸಮುದ್ರ ದಾಟುವನು.

 2.ಸೀತಾ ದೇವಿಯ ಪತ್ತೆ :

Image result for hanuman seeing seetha

      ಸೀತಾ ದೇವಿಯ ಪತ್ತೆ ಮಾಡಲು ಹನುಮಂತನು ಲಂಕೆಗೆ ಹೋಗುತ್ತಾನೆ. ಲಂಕೆಯನ್ನು ರಾವಣನು ಆಳುತ್ತಿರುತ್ತಾನೆ. ಪ್ರವೇಶದ್ವಾರದಲ್ಲಿ ಲಂಕಿನಿ ಎನ್ನುವ ರಾಕ್ಷಸಿಯು ಹನುಮಂತನಿಗೆ ಎದುರಾಗುವಳು. ಲಂಕಿನಿಯನ್ನು ಹನುಮಂತನಲ್ಲದೆ ಬೇರೆ ಯಾರೂ ಸೋಲಿಸಲು ಸಾಧ್ಯವಿರಲಿಲ್ಲ. ಹನುಮಂತ ತನ್ನ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಅಶೋಕ ವನದ ಮರದ ಕೆಳಗಡೆ ಕುಳಿತ್ತಿದ್ದ ಸೀತಾ ದೇವಿಯನ್ನು ಪತ್ತೆ ಮಾಡಿದ. ಲಕ್ಷ್ಮೀ ದೇವಿಯ ಸ್ವರೂಪವಾಗಿರುವ ಸೀತಾದೇವಿಯು ಹನುಮಂತನು ನೀಡಿದ ರಾಮನ ಉಂಗುರದಿಂದ ಆತನನ್ನು ಪತ್ತೆ ಮಾಡುವಳು. ಈ ಹನುಮಾನ್ ಮಂತ್ರಗಳನ್ನು ಪಠಿಸಿದರೆ- ದೆವ್ವ, ಭೂತ, ಪ್ರೇತಗಳ ಉಪಟಳದ ಭಯವಿಲ್ಲ

 

 3.ಅಕ್ಷಯ ಕುಮಾರನ ಕೊಂದ :  

Image result for hanuman ravan goes to war

      ಲಂಕೆಯಲ್ಲಿ ಸೀತಾದೇವಿಯು ಇದ್ದಾಳೆಂಬ ಸುದ್ದಿಯನ್ನು ರಾಮನಿಗೆ ತಲುಪಿಸಿದ ಬಳಿಕ ಹನುಮಂತನು ಲಂಕೆಯ ಹೆಚ್ಚಿನ ಭಾಗವನ್ನು ಧ್ವಂಸ ಮಾಡಿದ. ರಾವಣನು ತನ್ನ ಮಗ ಅಕ್ಷಯ ಕುಮಾರನನ್ನು ಕಳುಹಿಸಿಕೊಟ್ಟಾಗ ಹನುಮಂತ ಆತನನ್ನು ಯುದ್ಧದಲ್ಲಿ ಕೊಲ್ಲುತ್ತಾನೆ. ಇದರಿಂದ ಸಂಪೂರ್ಣ ಲಂಕೆಯಲ್ಲಿ ಒತ್ತಡ ಕಾಣಿಸಿಕೊಳ್ಳುವುದು. ತನ್ನ ಆಸ್ಥಾನಕ್ಕೆ ಹನುಮಂತನನ್ನು ಕರೆಸಿಕೊಳ್ಳುವ ರಾವಣನು ಆತನನ್ನು ಸೆರೆ ಹಿಡಿಯಲು ವಿಫಲನಾಗುವನು. ಇದರ ಬಳಿಕ ಲಂಕೆಗೆ ಹನುಮಂತನು ಬೆಂಕಿ ಹಚ್ಚುವನು. ರಾಮ ಶಕ್ತಿಯನ್ನು ಶತ್ರುಗಳಿಗೆ ಪರಿಚಯ ಮಾಡಿಸಲು ಆತ ಹೀಗೆ ಮಾಡಿದ. ಇದನ್ನು ಹನುಮಂತ ಮಾತ್ರ ಪರಿಣಾಮಕಾರಿಯಾಗಿ ಮಾಡಬಲ್ಲ.

4.ವಿಭಿಷಣನ ನಂಬಿ ರಾಮನ ಬಳಿಗೆ ಕರೆದೊಯ್ದ  :

Related image

      ರಾಮನ ಹೆಸರನ್ನು ಯಾರೋ ಹೇಳುತ್ತಿರುವುದನ್ನು ಕೇಳಿದ ಹನುಮಂತ ಸನ್ಯಾಸಿಯ ರೂಪ ತಾಳಿ ಆತನ ಮುಂದೆ ಬಂದು ನಿಲ್ಲುವನು. ರಾಮನಾಮ ಜಪ ಮಾಡುತ್ತಿರುವಂತಹ ವ್ಯಕ್ತಿಯು ರಾವಣನ ಸೋದರ ವಿಭಿಷಣ ಎಂದು ಹನುಮಂತನಿಗೆ ತಿಳಿಯುವುದು. ರಾಮನಿಗೆ ಬೆಂಬಲ ನೀಡಲು ಆತನನ್ನು ಭೇಟಿಯಾಗಲು ಬಯಸಿದ್ದೇನೆ ಎಂದು ವಿಭಿಷಣ ಹೇಳುತ್ತಾನೆ. ಹನುಮಂತನು ಆತನ ಮೇಲೆ ನಂಬಿಕೆಯನ್ನಿಟ್ಟು ರಾಮನ ಬಳಿಗೆ ಕರೆದುಕೊಂಡು ಹೋಗುವನು. ಅಂತಿಮವಾಗಿ ರಾವಣನ ವಧಿಸಲು ವಿಭಿಷಣ ರಾಮನಿಗೆ ನೆರವಾಗುವನು.

5.ಪರ್ವತ ಹೊತ್ತು ತಂದ  :

Related image

      ರಾಮ ದೇವರು ಮತ್ತು ರಾವಣನ ನಡುವಿನ ಯುದ್ಧದ ವೇಳೆ ರಾವಣನ ಮಗ ಇಂದ್ರಜಿತ್ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ. ರಾಮನ ಸೇನೆಯ ಹೆಚ್ಚಿನ ಸೇನಾನಿಗಳು, ರಾಮ ಮತ್ತು ಲಕ್ಷಣ ಇದರಿಂದ ಪ್ರಭಾವಕ್ಕೆ ಒಳಗಾದರು. ಇದಕ್ಕೆ ಸಂಜೀವಿನಿ ಗಿಡ ಮಾತ್ರ ಮದ್ದಾಗಿತ್ತು. ಈ ಸಮಯದಲ್ಲಿ ಹನುಮಂತ ಮಾತ್ರ ಹಿಮಾಲಯದಿಂದ ಸಂಜೀವಿನಿ ಗಿಡವನ್ನು ತರಬಲ್ಲವನಾಗಿದ್ದ. ಹನುಮಂತ ದೇವರು ಸಂಪೂರ್ಣ ಪರ್ವತವನ್ನೇ ತನ್ನ ಅಂಗೈ ಮೇಲಿಟ್ಟುಕೊಂಡು ಬಂದರು.

6.ಇತರ ರಾಕ್ಷಸರು ಮತ್ತು ರಾವಣನ ವಧಿಸಿದ  :

Image result for hanuman kills

      ಯುದ್ಧದಲ್ಲಿ ಹನುಮಂತ ದೇವರು ಹಲವಾರು ಮಂದಿ ರಾಕ್ಷಸರನ್ನು ಕೊಂದು ಹಾಕುತ್ತಾರೆ. ಧುಮ್ರಾಕ್ಷ, ಅಂಕಪಾನ, ದೇವಾಂತಕ, ತ್ರಿಶಿರಾ, ನಿಕುಂಭ ಇತ್ಯಾದಿ ರಾಕ್ಷಸರನ್ನು ಕೊಲ್ಲುವರು. ಹನುಮಂತ ಮತ್ತು ರಾವಣನ ಮಧ್ಯೆ ದೀರ್ಘ ಯುದ್ಧ ಸಂಭವಿಸಿತು. ಈ ವೇಳೆ ರಾವಣನನ್ನು ಹನುಮಂತ ಸೋಲಿಸಿದರು. ಇದನ್ನು ನೋಡಿ ಸಂಪೂರ್ಣ ವಾನರ ಸೇನೆ ಸಂಭ್ರಮಿಸಿತು. ಆದರೆ ರಾವಣನು ಸಾಯಲಿಲ್ಲ. ಯಾಕೆಂದರೆ ರಾಮನ ಕೈಯಲ್ಲೇ ರಾವಣನ ವಧೆಯಾಗಬೇಕಿತ್ತು.

 7.ರಕ್ಕಸಿ ಸಿ೦ಹಿಕಾಳ ಸಂಹಾರ  :

Image result for hanuman kills simhika

      ಲಂಕೆಗೆ ಹಾರುವ ಸಂದರ್ಭದಲ್ಲಿ ಹನುಮನ ನೆರಳು ಸಾಗರದೈತ್ಯೆಯಾದ ಸಿ೦ಹಿಕೆಯ ಬಾಹುಗಳಲ್ಲಿ ಸಿಲುಕಿರುತ್ತದೆ. ಆ ಬಳಿಕ ಅತ್ಯ೦ತ ಕುರೂಪವಾದ ಜೀವಿಯೊ೦ದು ಸಾಗರದಿ೦ದ ಮೇಲೇಳುತ್ತಿರುವುದು ಹನುಮ೦ತನ ದೃಷ್ಟಿಗೆ ಗೋಚರಿಸುತ್ತದೆ. ಅದ೦ತೂ ಭಯಾನಕ ಸ್ವರೂಪದ ರಕ್ಕಸಿಯಾಗಿದ್ದು, ಮೈಬಣ್ಣವು ಕಲ್ಲಿದ್ದಲಿನಷ್ಟು ಕಪ್ಪಗಾಗಿದ್ದು, ಬಹುದೊಡ್ಡ ಹೊಟ್ಟೆಯುಳ್ಳವಳಾಗಿರುತ್ತಾಳೆ. ತನ್ನ ಬೇಟೆಯ ನೆರಳನ್ನು ಬಾಚಿಕೊಳ್ಳುವುದರ ಮೂಲಕ ಬೇಟೆಯಾಡುವುದು ಈ ರಕ್ಕಸಿಯ ಹವ್ಯಾಸ. ಯಾರೇ ಆಗಿರಲಿ, ಅವರ ನೆರಳನ್ನು ವಶಕ್ಕೆ ತೆಗೆದುಕೊಳ್ಳುವುದರ ಮೂಲಕ ಅವರನ್ನು ನಿಶ್ಚೇಷ್ಟಿತರನ್ನಾಗಿಸುವ ಈ ರಕ್ಕಸಿಯ ಕುರಿತ೦ತೆ ಸುಗ್ರೀವನಿ೦ದ ಕೇಳಿ ತಿಳಿದುಕೊ೦ಡಿದ್ದ ಸ೦ಗತಿಯು ಹನುಮ೦ತನಿಗೆ ಆಗ ನೆನಪಾಗುತ್ತದೆ. ತನ್ನ ಗುರಿಸಾಧನೆಯು ಮತ್ತಷ್ಟು ವಿಳ೦ಬವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಈ ರಕ್ಕಸಿಯ ಬಾಧೆಯಿ೦ದ ತಾನು ಆದಷ್ಟು ಬೇಗನೇ ಪಾರಾಗುವುದು ಅತ್ಯಗತ್ಯವೆ೦ದು ಹನುಮನು ಮನದಲ್ಲಿಯೇ ಚಿ೦ತಿಸುತ್ತಾನೆ. Image result for hanuman kills simhikaತಡಮಾಡದೇ, ಹನುಮನು ಒಡನೆಯೇ ಅತೀ ಸೂಕ್ಷ್ಮರೂಪವನ್ನು ಧರಿಸಿ, ಆಕೆಯ ಬಾಯಿಯನ್ನು ಪ್ರವೇಶಿಸಿಬಿಡುವನು. ಆಕೆಯ ಶರೀರವನ್ನು ಪ್ರವೇಶಿದ ಬಳಿಕವ೦ತೂ ಹನುಮನು ಆಕೆಯ ಶರೀರದ ಒಳಭಾಗಗಳನ್ನೆಲ್ಲಾ ಮನಸೋಯಿಚ್ಚೆ ಪುಡಿಗೈಯ್ಯಲಾರ೦ಭಿಸುತ್ತಾನೆ. ತನ್ನ ಮೊನಚಾದ ಉಗುರುಗಳಿ೦ದ ಆಕೆಯ ಹೊಟ್ಟೆಯ ಭಾಗದ ಅ೦ಗಾ೦ಗಳನ್ನೆಲ್ಲಾ ಕತ್ತರಿಸಲಾರ೦ಭಿಸುತ್ತಾನೆ. ನೋವಿನ ಬಾಧೆಯನ್ನು ತಾಳಲಾರದೆ ಬೊಬ್ಬಿಡುತ್ತಾ ಸಿ೦ಹಿಕೆಯು ತನ್ನ ಬಾಯಿಯನ್ನು ತೆರೆಯುತ್ತಾಳೆ. ಆಗ ಹನುಮನು ಛ೦ಗನೆ ಆಕೆಯ ಬಾಯಿಯಿ೦ದ ಹೊರಜಿಗಿಯುತ್ತಾನೆ. ಹೊರಬ೦ದ ಬಳಿಕ, ಹನುಮನು ತನ್ನ ಮೂಲರೂಪವನ್ನು ತಾಳಿ ಸಿ೦ಹಿಕೆಯನ್ನು ತನ್ನ ಗದೆಯಿ೦ದ ಥಳಿಸಲಾರ೦ಭಿಸುತ್ತಾನೆ. ಹನುಮನ ಗದಾಪ್ರಹಾರಗಳಿ೦ದ ಜರ್ಜರಿತಳಾದ ಸಿ೦ಹಿಕೆಯು ಆರ್ತನಾದಗೈಯ್ಯುತ್ತಾ ಸತ್ತು ಸಮುದ್ರದೊಳಗೆ ದೊಪ್ಪನೆ ಬೀಳುತ್ತಾಳೆ.

8.ಹನುಮನು ಭೇಟಿ ಮಾಡಿದ ಮೂವರು ಸ್ತ್ರೀಯರು :’

       ಹನುಮನು ಸಮುದ್ರಮಾರ್ಗವಾಗಿ ಲ೦ಕೆಯತ್ತ ಪಯಣಿಸುತ್ತಿರುವಾಗ, ಆತನು ಭೇಟಿ ಮಾಡಿದ ಮೂವರು ಸ್ತ್ರೀಯರ ಪೈಕಿ ಸುರಸಾಳು ಒಬ್ಬಳು. ಎರಡನೆಯವಳು ಸಿ೦ಹಿಕೆ, ಹಾಗೂ ಮೂರನೆಯವಳು ಲ೦ಕೆಯನ್ನು ಕಾಪಾಡುವ ದೇವತೆಯಾಗಿದ್ದ ಲ೦ಕಿಣಿಯಾಗಿರುವಳು. ದೇವತಾ ಸ್ವರೂಪಿಯಾದ ಸುರಸಾಳು ಆಕಾಶ ತತ್ವವನ್ನು ಪ್ರತಿನಿಧಿಸುವಳು. ಸಿ೦ಹಿಕೆ ಹಾಗೂ ಲ೦ಕಿಣಿಯರು ಜಲ ತತ್ವ ಹಾಗೂ ಭೂತತ್ವಗಳನ್ನು ಅನುಕ್ರಮವಾಗಿ ಪ್ರತಿನಿಧಿಸುವರು. ಮತ್ತೊ೦ದು ಸಿದ್ಧಾ೦ತದ ಪ್ರಕಾರ, ಈ ಮೂವರು ಮೂರು ಗುಣಗಳಿಗೆ (ಸತ್ವ, ರಜ, ತಮ) ಸ೦ಬ೦ಧಿಸಿದ ಮಾಯೆ (ಮಿಥ್ಯಾ, ಭ್ರಮೆ) ಯನ್ನು ಪ್ರತಿನಿಧಿಸುವರು. (ಸಂಗ್ರಹ)

LEAVE A REPLY

Please enter your comment!
Please enter your name here