ಹಸಿರು ಉಸಿರೆಂಬ ಮಹತ್ವದ ಚಿಂತನೆ ಎಲ್ಲರಲ್ಲೂ ಮೇಳೈಸಬೇಕು-ಶಾಸಕ ಬಿ.ಸತ್ಯನಾರಾಯಣ್

0
14

 ಶಿರಾ:

      ಮಳೆ, ಬೆಳೆಗಳಿಲ್ಲದೆ ರೈತರಾದಿಯಾಗಿ ಜನತೆ ಕುಡಿಯುವ ನೀರಿಗೂ ಹಪಹಪಿಸುವಂತಾಗಲು ನಾವು ನಾಶಪಡಿಸುತ್ತಿರುವ ಹಸಿರ ಸಿರಿಯೇ ಕಾರಣವಾಗಿದ್ದು ಹಸಿರು ಉಸಿರೆಂಬ ಮಹತ್ವದ ಚಿಂತನೆ ಎಲ್ಲರಲ್ಲೂ ಮೇಳೈಸಿದಾಗ ಮಾತ್ರಾ ಇಂತಹ ಪ್ರಭಲ ಸಮಸ್ಯೆಗಳಿಗೆ ಪರಿಹಾರ ಲಭ್ಯವಾಗಲು ಸಾದ್ಯ ಎಂದು ಶಾಸಕ ಬಿ.ಸತ್ಯನಾರಾಯಣ್ ತಿಳಿಸಿದರು.

      ನಗರದ ಜಿ.ಕೆ.ಎಂ.ಹೆಚ್.ಪಿ.ಬಿ.ಎಸ್. ಪಾಠಶಾಲಾ ಆವರಣದಲ್ಲಿ ಮಂಗಳವಾರದಂದು ಅರಣ್ಯ ಇಲಾಖೆಯ ವತಿಯಿಂದ ಕೈಗೊಳ್ಳಲಾಗಿದ್ದ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಅವರು ಮಾತನಾಡಿದರು.

      ಪರಿಸರದ ನಾಶ ದಿನ ದಿನಕ್ಕೂ ಹೆಚ್ಚುತ್ತಿದ್ದು ನಾವೇ ಬೆಳೆಸಿದ ಗಿಡ-ಮರಗಳು ನಮ್ಮ ಮುಂದೆಯೇ ಕಣ್ಮರೆಯಾಗುತ್ತಿವೆ. ಹಸಿರಿನಿಂದ ನಮಗೆ ಉತ್ತಮ ಗಾಳಿ ಲಭ್ಯವಾಗುವುದರ ಜೊತೆಗೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುವುದರ ಅರಿವಿದ್ದರೂ ಅವುಗಳ ನಾಶಕ್ಕೆ ಮುಂದಾಗುತ್ತಿರುವುದು ವಿಷಾಧದ ಸಂಗತಿ ಎಂದರು.

      ಪರಿಸರ ಸಂರಕ್ಷಣೆಯಷ್ಟೇ ಅಲ್ಲದೆ ಅರಣ್ಯಯಗಳ ಸಮರಕ್ಷಣೆಗೆ ಸರ್ಕಾರ ನಾನಾ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅಂತಹ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಿದೆ. ಶಾಲಾ ಮಕ್ಕಳಲ್ಲೂ ಶಿಕ್ಷಕರು ಹಸಿರಿನ ರಕ್ಷಣೆ, ಗಿಡಗಳನ್ನು ಬೆಳೆಸುವ ಹುಮ್ಮಸ್ಸನ್ನು ತುಂಬಬೇಕಿದೆ ಎಂದು ಬಿ.ಸತ್ಯನಾರಾಯಣ್ ಹೇಳಿದರು.

      ತಾ.ಪಂ. ಅಧ್ಯಕ್ಷೆ ಶ್ರೀಮತಿ ಹಂಸವೇಣಿ ಶ್ರೀನಿವಾಸ್ ಮಾತನಾಡಿ ನಾವು ನಮ್ಮ ಮಕ್ಕಳನ್ನು ಸದಾ ಸಂರಕ್ಷಿಸಿ ಅವರ ಆರೋಗ್ಯ ಕಾಪಾಡುವಂತೆ ಸಸ್ಯ ಸಂಕುಲವನ್ನೂ ತಮ್ಮ ಮಕ್ಕಳಂತೆ ಕಾಣಬೇಕಿದೆ. ನಾವು ನೆಡುವ ಒಂದು ಸಸಿ ಮುಂದೊಂದು ದಿನ ಫಲ ಕೊಟ್ಟು ನಮ್ಮನ್ನೆ ಕಾಪಾಡುತ್ತದೆ ಅನ್ನುವ ಅರಿವು ಎಲ್ಲರಿಗೂ ಇರಬೇಕು ಎಂದರು.

      ನಗರಸಭಾ ಸದಸ್ಯ ಆರ್.ಉಗ್ರೇಶ್, ಜಿ.ಪಂ. ಅಧ್ಯಕ್ಷೆ ಶ್ರೀಮತಿ ಲತಾ, ತಾ.ಪಂ. ಉಪಾಧ್ಯಕ್ಷ ರಂಗನಾಥಗೌಡ, ನಗರಸಭಾ ಸದಸ್ಯರಾದ ಶಾರದಾ ಶಿವಕುಮಾರ್, ಜಿ.ಪಂ. ಸದಸ್ಯರಾದ ಶ್ರೀಮತಿ ಗಿರಿಜಮ್ಮ ರಾಮಕೃಷ್ಣ, ತಾ.ಪಂ. ಸದಸ್ಯರಾದ ಮಂಜುಳಾಬಾಯಿ, ಪುಟ್ಟರಾಜು, ಅರಣ್ಯ ಇಲಾಖೆಯ ಅಧಿಕಾರಿ ಸುರೇಶ್, ಜೆ.ಡಿ.ಎಸ್. ಮುಖಮಡ ಶಿವಕುಮಾರ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

LEAVE A REPLY

Please enter your comment!
Please enter your name here