ಹಾನಗಲ್ಲ : ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳ ಪ್ರತಿಭಟನೆ

0
37

ಹಾನಗಲ್ಲ :

 

ಹಾವೇರಿಯ ಕಾಲೇಜ್ ವಿದ್ಯಾರ್ಥಿನಿ ರೇಣುಕಾ ಪಾಟೀಲ ಅತ್ಯಾಚಾರ ಮಾಡಿ ಕೊಲೆ ಘಟನೆಯನ್ನು ಖಂಡಿಸಿ ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿಗಳಿಗೆ ಶನಿವಾರ ಮನವಿ ಅರ್ಪಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ವಿದ್ಯಾರ್ಥಿ ಪ್ರಮುಖರಾದ ಅಕ್ಷತಾ ಕೂಡಲಮಠ, ದರ್ಶನ ನಾಯ್ಕ, ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣ ಮಾಸುವ ಮುನ್ನವೇ ಹಾವೇರಿಯಲ್ಲಿ ಇಂಥದೊಂದು ಹತ್ಯೆ ಘಟನೆ ನಡೆದಿರುವುದು ಖಂಡನೀಯ. ಇಂಥ ಸಂದರ್ಭದಲ್ಲಿ ಪಾಲಕರಿಗಾಗುವ ವೇದನೆಯನ್ನು ಯಾರೂ ತುಂಬಿಕೊಡಲು ಸಾಧ್ಯವಿಲ್ಲ. ಇಂಥ ಪ್ರಕರಣಗಳು ಮರುಕಳಿಸದಂತೆ ಆರೋಪಿಗಳ ಮೇಲೆ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಸರ್ಕಾರ ಇನ್ನಷ್ಟು ಬಿಗಿಯಾದ, ಮರಣ ದಂಡನೆಯಂಥ ಕಾನೂನು ರೂಪಿಸುವ ಅಗತ್ಯವಿದೆ. ಕಾಲೇಜ್‍ಗಳಲ್ಲಿ ಈ ರೀತಿಯಾದರೆ ವಿದ್ಯಾರ್ಥಿನಿಯರು ಶಿಕ್ಷಣ ವಂಚಿತರಾಗುವ ಹಾಗೂ ಧೈರ್ಯವಾಗಿ ಬದುಕು ಸಾಗಿಸುವುದು ಕಷ್ಟಕರವಾಗುತ್ತದೆ. ಕಾಮುಕರ ಅಟ್ಟಹಾಸ ಮಿತಿಮೀರುತ್ತಿದೆ. ಇದಕ್ಕೆ ಕಡಿವಾಣ ಹಾಕಲೇಬೇಕಿದೆ. ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. ಮುಂದೆಯೂ ಸರ್ಕಾರ ಆರೋಪಿಗಳ ಮೇಲೆ ಕ್ರಮ ಜರುಗಿಸುವಲ್ಲಿ ನಿರ್ಲಕ್ಷ ತೋರಿದರೆ ವಿದ್ಯಾರ್ಥಿಗಳು ಉಗ್ರ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ.

LEAVE A REPLY

Please enter your comment!
Please enter your name here