ಹಾನಗಲ್ಲ : ಕ್ಷುಲ್ಲಕ ಕಾರಣಕ್ಕೆ ಎರೆಡು ಕೊಮಿನ ಯುವಕರ ಮಾರಾಮಾರಿ

0
32

ಹಾನಗಲ್ಲ :

  ಬುಧವಾರ ಅಕ್ಕಿಆಲೂರ ಗ್ರಾಮದಲ್ಲಿ ನಡೆದಿದ್ದ ಕ್ಷುಲ್ಲಕ ಕಾರಣಕ್ಕೆ ಎರೆಡು ಕೊಮಿನ ಯುವಕರ ನಡುವೆ ನಡೆದ ಮಾರಾಮಾರಿಯಲ್ಲಿ 8 ಮಂದಿ ಆರೋಪಿಗಳ ಮೇಲೆ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ 3 ಮಂದಿ ಆರೋಪಿಗಳನ್ನು ಬಂದಿಸಿ ನ್ಯಾಯಾಂಗ ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ:
   ಬುಧವಾರ ನರಸಿಂಹರಾವ್ ದೇಸಾಯಿ ಕಾಲೇಜಿನ ಮೈದಾನದಲ್ಲಿ ಕ್ಲಷ್ಟರ್‍ಮಟ್ಟದ ಕ್ರಿಡಾಕೂಟ ನೋಡಲು ಬಂದಿದ್ದ ಯುವಕರ ಬೈಕುಗಳು ಪರಸ್ಪರ ಗುದ್ದಿದ ಪರಿಣಾಮ ಎರೆಡು ಯುವಕರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತಲ್ಲದೆÀ ಅದು ಕಲ್ಲಾಪುರ ಕ್ರಾಸ್ ಬಳಿ ಮತ್ತೆ ವಿಕೋಪಕ್ಕೆ ತಿರುಗಿ ಎರೆಡು ಕೊಮಿನ ಯುವಕರ ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು ಈ ಮಾರಾಮರಿಯಲ್ಲಿ ಇಬ್ಬರ ಯುವಕರಾದ ಆದರ್ಶ ಗೌಳಿ(21) ಹಾಗೂ ಪ್ರವೀಣ ಸಾಲಿಮಠ(24) ಇವರಿಗೆ ಗಾಯಗೊಂಡು ಆಸ್ಪತ್ರೆಗೆ ಸೇರಿಸಲಾಗಿತ್ತು.


    ಈ ವಿಷಯ ಗ್ರಾಮದಲ್ಲಿ ಹರಡುತ್ತಿದ್ದಂತೆ ಅಂಗಡಿ ಮುಗ್ಗಟ್ಟುಗಳು ಬಂದಮಾಡಲಾಗಿತ್ತು ಪರಿಸ್ಥಿತಿ ಕೈಮಿರುವ ಹಂತದಲ್ಲಿರುವಾಗ ಸುದ್ದಿ ತಿಳಿದ ತಕ್ಷಣ ಕೂಡಲೆ ಹಾವೇರಿ ಎಸ್‍ಪಿ ಪರಶುರಾಮ್ ಹಾಗೂ ಶಿಗ್ಗಾವ ಡಿವೈಎಸ್‍ಪಿ ಎಲ್ ವೈ ಶಿರಕೋಳ ಸ್ಥಳಕ್ಕೆ ದಾವಿಸಿ ಪರಿಸ್ಥತಿ ನಿಯಂತ್ರಣಕ್ಕೆ ತಂದು ಆಸ್ಪತ್ರೆಗೆ ಬೇಟಿ ನೀಡಿ ಗಾಯಗೊಂಡವರನ್ನು ವಿಚಾರಿಸಿ ನಂತರ ಅಕ್ಕಿಆಲೂರ(ಒಪಿ) ಪೊಲೀಸ್ ಠಾಣೆಯಲ್ಲಿ ಹಾನಗಲ್ಲ ಸಿಪಿಐ ಕಟ್ಟಿಮನಿ, ಹಾಗೂ ಪಿಎಸ್‍ಐ ಗುರುರಾಜ ಮೈಲಾರ ಪೋಲಿಸ್ ಅಧಿಕಾರಿಗಳ ಸಭೆಯನ್ನು ನಡೆಸಿ ಘಟನೆಯ ಬಗ್ಗೆ ಅವಲೋಕನ ಮಾಡಲಾಗಿತ್ತು. ತಪ್ಪಿತ್ತಸ್ಥರ ವಿರುದ್ದ ಕಾನೂನ ಕ್ರಮ ಜರುಗಿಸುವಂತೆ ಡಿವೈಎಸ್‍ಪಿ ಶಿರಕೋಳ ತಿಳಿಸಿದ್ದರು ಈ ಸಂಭಂಧ 8 ಮಂದಿ ಆರೋಪಿಗಳ ಮೇಲೆ ಪ್ರಕರಣ ದಾಖಲು ಮಾಡಿ ಮೂವರು ಆರೋಪಿಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂದನಕ್ಕೆ ಕಳುಹಿಸಲಾಗಿತ್ತು.
ಪರಿಸ್ಥಿತಿ ನಿಯಂತ್ರಣದಲ್ಲಿ :
    ಗುರುವಾರ ಎಂದಿನಂತೆ ಅಂಗಡಿ ಮುಗ್ಗಟ್ಟುಗಳು ತೆರೆದಿದ್ದು ಯಾವುದೆ ತೊಂದರೆಯಿಲ್ಲದೆ ಸಾರ್ವಜನಿಕರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾರೆ. ಪೋಲಿಸ್ ಇಲಾಖೆ ಮುನ್ನೇಚ್ಚರಿಕೆ ಕ್ರಮವಾಗಿ ಅಕ್ಕಿಆಲೂರ ಗ್ರಾಮದ ಸುತ್ತಮುತ್ತ ಬೀಗಿಬಂದೋಬಸ್ತನ್ನು ಏರ್ಪಡಿಸಲಾಗಿದೆ

LEAVE A REPLY

Please enter your comment!
Please enter your name here