ಹಿರಿಯೂರಿನಲ್ಲಿ : ಜೋಕುಮಾರಸ್ವಾಮಿಗೆ ಗೃಹಿಣಿಯರಿಂದ ಪೂಜೆ

0
20

ಹಿರಿಯೂರು :
              ಗಣೇಶ ಚತುರ್ಥಿಯ ಮರುದಿನ ಜೋಕುಮಾರಸ್ವಾಮಿಯನ್ನು ಪೂಜಿಸುವ ಪ್ರತೀತಿಯಿದ್ದು, ಪೌರಾಣಿಕವಾಗಿ ಬಹಳ ಮಹತ್ವ ಪಡೆದಿರುವ ಪಾರ್ವತಿ ಪುತ್ರ ಜೋಕುಮಾರಸ್ವಾಮಿ ದೇವರನ್ನು ವಿವಿದ ಹೂಗಳಿಂದ ಸಿಂಗರಿಸಿ ಗಂಗಾಮತಸ್ತರು ಬುಟ್ಟಿಯಲ್ಲಿ ಪ್ರತಿಷ್ಟಾಪಿಸಿ ತೆಲೆಮೇಲೆ ಹೂತ್ತುಕೊಂಡು ಮನೆ ಮನೆಗೆ ತೆರಳಿ ಗೃಹಿಣಿಯರಿಂದ ಪೂಜೆ ಮಾಡಿಸುವ ಸಂಪ್ರದಾಯ ಮೊದಲಿನಿಂದಲೂ ನಡೆದುಬಂದಿದೆ.
ಪ್ರತೀ ವರ್ಷದಂತೆ ಈ ವರ್ಷವೂ ನಗರದಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಗಂಗಾಮತಸ್ತರು ತಂಡ ತಂಡವಾಗಿ ನಗರದ ವಿವಿದ ಬಡಾವಣೆಗಳಲ್ಲಿ ಸಂಚರಿಸುತ್ತಾ ಮನೆಮನೆಗೆ ತೆರಳಿ ಜೋಕುಮಾರಸ್ವಾಮಿಯ ಹಾಡುಗಳನ್ನು ಹಾಡುತ್ತಾ, ಗೃಹಿಣಿಯರಿಂದ ಪೂಜೆ ಸಲ್ಲಿಸಿಕೊಂಡು ಅವರಿಂದ ಅಕ್ಕಿ ಬೇಳೆ ಬೆಲ್ಲ ಕಾಣಿಕೆಗಳನ್ನು ಸ್ವೀಕರಿಸುವ ದೃಶ್ಯ ಕಂಡುಬಂತು. ಈ ತಂಡದಲ್ಲಿ ಜಯಮ್ಮ, ಸಾವಿತ್ರಮ್ಮ, ಸುಮಿತ್ರಮ್ಮ, ಮಂಜಮ್ಮನವರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here