ಹಿರಿಯ ನ್ಯಾಯವಾದಿ ಹತ್ಯೆ ಖಂಡಿಸಿ ಪ್ರತಿಭಟನೆ

0
13

ಹರಪನಹಳ್ಳಿ:

      ದಾಂಡೇಲಿ ನಗರದಲ್ಲಿ ಹಿರಿಯ ನ್ಯಾಯವಾಧಿ ಅಜೀತನಾಯಕರ ಹತ್ಯೆಖಂಡಿಸಿ ಪಟ್ಟಣದ ನ್ಯಾಯವಾಧಿಗಳು ನ್ಯಾಯಲಯದ ಕಲಾಪದಿಂದ ದೂರಉಳಿದು ಪ್ರತಿಭಟನೆ ಮೆರವಣಿಗೆ ನೆಡೆಸಿ ತಹಸಿಲ್ದಾರರಿಗೆ ಮನವಿ ಸಲ್ಲಿಸಿದರು.

      ನ್ಯಾಯವಾಧಿಗಳ ಸಂಘದ ಅದ್ಯಕ್ಷ ಎ.ಕೆ.ಅಜ್ಜಪ್ಪ ಮಾತನಾಡಿ. ನ್ಯಾಯವಾದಿಯü ಹತ್ಯೆಗೈದ ಆರೋಪಿಗಳನ್ನು ಈ ಕೂಡಲೆ ಬಂಧಿಸಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

      ನ್ಯಾಯವಾದಿ ಗಂಗಾಧರ ಗುರುಮಠ್ ಮಾತನಾಡಿ. ಸಾರ್ವಜನಿಕ ವಲಯದಲ್ಲಿ ಕಾರ್ಯನಿರ್ವಹಿಸುವ ವಕೀಲರುಗಳಿಗೆ ಸೂಕ್ತ ಭದ್ರತೆಯಿಲ್ಲದಂತಾಗಿರುವುದು ವಿಷಾಧನೀಯ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನ್ಯಾಯವಾದಿಗಳಿಗೆ ರಕ್ಷಣೆ ಒದಗಿಸಬೇಕು ಎಂದರು.

      ಪ್ರತಿಭಟನೆಯಲ್ಲಿ ನ್ಯಾಯವಾದಿ ಕೋಡಿಹಳ್ಳಿ ಪ್ರಕಾಶ್, ನ್ಯಾಯವಾದಿ ಸಂಘದ ಕಾರ್ಯದರ್ಶಿ ಕೆ.ಜಗದಪ್ಪ, ಪಿ.ಜಗದೀಶಗೌಡ್ರು, ಎಸ್.ರುದ್ರಮುನಿಸ್ವಾಮಿ, ಹಾಲೇಶ, ಕೆ.ಬಸವರಾಜ, ವಿ.ಜಿ.ಪ್ರಕಾಶಗೌಡ, ಬಿ.ಗೋಣಿಬಸಪ್ಪ, ಕೆ.ನಾಗರಾಜ,ತಿಪ್ಪೆಸ್ವಾಮಿ, ತಿರುಪತಿ, ಬೆಲೂರು ಸಿದ್ದೇಶ, ಮೃತ್ಯುಂಜಯ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು,

LEAVE A REPLY

Please enter your comment!
Please enter your name here