ಹುಲಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು ಅಗತ್ಯ

0
83

ಬೆಂಗಳೂರು:

Image result for tiger

      ವಿಶ್ವ ಹುಲಿ ದಿನದ ಅಂಗವಾಗಿ ಹುಲಿ ಸಂರಕ್ಷಣೆ ಕುರಿತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

     ಪ್ರತಿ ವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿ ದಿನ ಆಚರಿಸಲಾಗುತ್ತಿದೆ. ಹುಲಿಗಳ ಸಂರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ.

      ಈ ಸಂದರ್ಭವಾಗಿ ಬಂಡೀಪುರ ಹುಲಿ ಅಭಯಾರಣ್ಯ ಹಾಗೂ ಮೈಸೂರು ಮೃಗಾಲಯದಲ್ಲಿಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಒಂದು ನೂರಕ್ಕೂ ಹೆಚ್ಚು ಹುಲಿಗಳನ್ನು ಹೊಂದಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಅಂಚೆ ವತಿಯಿಂದ ಹುಲಿಗಳನ್ನು ಕುರಿತ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡಲಾಯಿತು. ಸಂಸದ ಆರ್. ದೃವನಾರಾಯಣ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ನೆರವೇರಿಸಿದರು.

      ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಬಂಡೀಪುರ ಹುಲಿ ಅಭಯಾರಣ್ಯದ ನಿರ್ದೇಶಕ ಅಂಬಾಡಿ ಮಾದವ್ ಮಾತನಾಡಿ ಅಂಚೆ ಇಲಾಖೆ ಹೊರ ತಂದಿರುವ ಇಂತಹ ಸುಮಾರು 6 ಸಾವಿರದ 500 ಲಕೋಟೆಗಳನ್ನು ಅರಣ್ಯ ಇಲಾಖೆ ತನ್ನ ಅಧಿಕೃತ ಸಂಪರ್ಕ ವ್ಯವಸ್ಥೆಗೆ ಬಳಸಿಕೊಳ್ಳುವುದು ಎಂದು ಹೇಳಿದರು.

      ಈ ಸಂದರ್ಭವಾಗಿ ಹುಲಿ ಹಾಗೂ ಅದರ ಸಂರಕ್ಷಣೆ ಕುರಿತ ಮಾತುಕತೆಯಲ್ಲಿ ಅಧಿಕಾರಿಗಳು, ವಿಷಯ ತಜ್ಞರು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.

      ಮೈಸೂರು ಮೃಗಾಲಯದಲ್ಲಿ ಏರ್ಪಾಡಾಗಿದ್ದ, ವಿಶೇಷ ಕಾರ್ಯಕ್ರಮವನ್ನು ನಟ ದರ್ಶನ್ ಉದ್ಘಾಟಿಸಿದರು. ವನ್ಯ ಜೀವಿ ಸಂರಕ್ಷಣೆಯ ಮಹತ್ವದ ಬಗ್ಗೆ ಕಾರ್ಯಕ್ರಮದಲ್ಲಿ ಒತ್ತಿ ಹೇಳಲಾಯಿತು.

LEAVE A REPLY

Please enter your comment!
Please enter your name here