ಹೆಬ್ಬಾಳದಲ್ಲಿ ಹಿಟ್ ಆಂಡ್ ರನ್ ಪ್ರಕರಣ

0
23

ಬೆಂಗಳೂರು:

                      ಹಿಂದಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಕೂಟರ್‍ನಲ್ಲಿ ಹೋಗುತ್ತಿದ್ದ ತಾಯಿ-ಮಗು ಮೃತಪಟ್ಟು, ತಂದೆ ಪಾರಾಗಿರುವ ಹೃದಯ ವಿದ್ರಾವಕ ಘಟನೆ ಹೆಬ್ಬಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.
ಮೃತಪಟ್ಟವರನ್ನು ಆರ್‍ಟಿನಗರದ ಸಿಬಿಐ ರಸ್ತೆಯ ಸುರೇಖ (30), ಅವರ ಪುತ್ರ ಆರಾಧ್ಯ (3)ಎಂದು ಗುರುತಿಸಲಾಗಿದೆ. ಪತಿ ರಘು (35) ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿಬಿಐ ರಸ್ತೆಯಲ್ಲಿ ಬೇಕರಿ ನಡೆಸುತ್ತಿದ್ದ ರಘು ಅವರು, ಬ್ಯಾಟರಾಯನಪುರದ ಸ್ನೇಹಿತರ ಮನೆಗೆ ಗಣೇಶನ ಹಬ್ಬಕ್ಕೆ ಹೋಗಿ ರಾತ್ರಿ 11ರ ವೇಳೆ ಅಲ್ಲಿಂದ ಪತ್ನಿ ಸುರೇಖ, ಮಗ ಆರಾಧ್ಯನನ್ನು ಹೊಂಡಾ ಆಕ್ಟೀವಾ ಸ್ಕೂಟರ್‍ನಲ್ಲಿ ಹಿಂದೆ ಕೂರಿಸಿಕೊಂಡು ಲುಂಬಿನಿ ಗಾರ್ಡನ್ ರಸ್ತೆಯಲ್ಲಿ ಮನೆಗೆ ವಾಪಾಸ್ ಆಗುತ್ತಿದ್ದರು.

LEAVE A REPLY

Please enter your comment!
Please enter your name here