ಹೊಲಿಗೆ ಬಿಚ್ಚಿಸಲು ಬಂದಿದ್ದ ಮಹಿಳೆ ಸಾವು : ಆಕ್ರೋಶ

0
15

 ದಾವಣಗೆರೆ:

      ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಮಹಿಳೆಯು ಹೊಲಿಗೆ ಬಿಚ್ಚಿಸಲೆಂದು ಆಸ್ಪತ್ರೆಗೆ ಬಂದಿದ್ದ ವೇಳೆಯಲ್ಲಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಆರೋಪಿಸಿ ಆಕ್ರೋಶಗೊಂಡ ಮೃತಳ ಬಂಧುಗಳು, ಗ್ರಾಮಸ್ಥರು ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ನಗರದಲ್ಲಿ ನಡೆದಿದೆ.

      ನಗರದ ಸುಚೇತನಾ ಆಸ್ಪತ್ರೆಯಲ್ಲಿ ತಾಲೂಕಿನ ಚಿತ್ತಾನಹಳ್ಳಿ ಗ್ರಾಮದ ಶಾರದಮ್ಮ(35 ವರ್ಷ) 15 ದಿನಗಳ ಹಿಂದಷ್ಟೇ ಗರ್ಭಕೋಶದ ಶಸ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಆಸ್ಪತ್ರೆಗೆ ಶನಿವಾರ ಹೊಲಿಗೆ ಬಿಚ್ಚಿಸಿಕೊಳ್ಳಲೆಂದು ಬಂದಿದ್ದ ಶಾರದಮ್ಮ ಆಕಸ್ಮಿಕವಾಗಿ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಸಾವನ್ನಪ್ಪಿದ್ದಾರೆಂದು ಆಸ್ಪತ್ರೆ ವೈದ್ಯರ ವಿರುದ್ಧ ಮೃತಳ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದರು.

      ಶಾರದಮ್ಮನಿಗೆ ಗರ್ಭಕೋಶದ ಆಪರೇಷನ್ ಮಾಡಿದಾಗ ಯಾವುದೇ ತೊಂದರೆಯಾಗಿಲ್ಲ. ಆಸ್ಪತ್ರೆಗೆ ಬರುವಾಗಲೂ ಆರೋಗ್ಯದಿಂದಲೇ ಇದ್ದ ಆಕೆ ಬಂದಿದ್ದರು. ಆದರೆ, ಹೊಲಿಗೆ ಬಿಚ್ಚಿಸಲೆಂದು ಬಂದಿದ್ದ ಆಕೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದರಿಂದ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಲೇ ಶಾರದಮ್ಮ ಸಾವನ್ನಪ್ಪಿದ್ದಾರೆಂದು ಆರೋಪಿಸಿ, ಪ್ರತಿಭಟನೆ ನಡೆಸಿದರು.ಚಿತ್ತಾನಹಳ್ಳಿ ಗ್ರಾಮದಿಂದಲೂ ಮೃತ ಶಾರದಮ್ಮ ಸಂಬಂಧಿಗಳು, ಗ್ರಾಮಸ್ಥರು, ಬಂಧು-ಬಳಗ ಧಾವಿಸಿತು. ನೋಡ ನೋಡುತ್ತಿದ್ದಂತೆ ಪರಿಸ್ಥಿತಿ ಕೈಮೀರಿ ಹೋಗುವುದನ್ನು ಕಂಡ ಸ್ಥಳದಲ್ಲಿದ್ದವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

      ಪೊಲೀಸರೂ ಸ್ಥಳಕ್ಕೆ ಧಾವಿಸಿ, ಮೃತಳ ಬಂಧುಗಳು, ಗ್ರಾಮಸ್ಥರಿಗೆ ಸಮಾಧಾನಪಡಿಸಲು ಸಾಕಷ್ಟು ಪ್ರಯತ್ನಿಸಿದರಾದರೂ ಪರಿಸ್ಥಿತಿ ತಿಳಿಯಾಗಲಿಲ್ಲ. ಸಾಕಷ್ಟು ಹರಸಾಹಸದ ನಂತರ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಆಕ್ರೋಶಗೊಂಡಿದ್ದ ಮೃತ ಮಹಿಳೆಯ ಸಂಬಂಧಿಗಳು, ಕುಟುಂಬ ವರ್ಗ, ಗ್ರಾಮಸ್ಥರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು. ಮೃತ ಶಾರದಮ್ಮನ ತಾಯಿ ಸುಶೀಲಮ್ಮ, ಸಹೋದರ ಬಸವರಾಜ ಸೇರಿದಂತೆ ಅನೇಕರು, ಸುಚೇತನ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಲೇ ಶಾರದಮ್ಮ ಸಾವನ್ನಪ್ಪಿದ್ದು, ತಕ್ಷಣ ಆರೋಪಿ ವೈದ್ಯರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಭದ್ರಾ ಡ್ಯಾಂಗೆ ಬಾಗಿನ ಅರ್ಪಿಸಲು ತೆರಳಿದ್ದ ಉತ್ತರ ಶಾಸಕ ಎಸ್.ಎ.ರವೀಂದ್ರನಾಥ್ ಸಹ ಆಸ್ಪತ್ರೆಗೆ ಧಾವಿಸಿದರು. ಸುಮಾರು ಗಂಟೆಯಿಂದಲೂ ಆಸ್ಪತ್ರೆಯ ಮುಖ್ಯಸ್ಥರು, ವೈದ್ಯರು ಹಾಗೂ ಮೃತಳ ಬಂಧುಗಳು, ಗ್ರಾಮದ ಮುಖಂಡರ ಮಧ್ಯೆ ಚರ್ಚೆ ನಡೆಸಿದರು.

LEAVE A REPLY

Please enter your comment!
Please enter your name here