ಹ.ಬೊ.ಹಳ್ಳಿ : ಮಳೆಗಾಗಿ ಪ್ರಾರ್ಥನೆ ಕರುಗಲ್ಲಿಗೆ ನೀರು

0
28

ಹಗರಿಬೊಮ್ಮನಹಳ್ಳಿ:

     ತಾಲೂಕಿನೆಲ್ಲೆಡೆ ಮುಂಗಾರು ಮಳೆಯಾದ ಹಿನ್ನೆಲೆಯಲ್ಲಿ ರೈತರು ಶೇ.70ರಷ್ಟು ಬಿತ್ತನೆಕಾರ್ಯ ಮುಗಿಸಿದ್ದು, ಬೆಳೆ ಬೆಳೆಯುತಿದ್ದಂತೆ, ಜುಲೈ ತಿಂಗಳಲ್ಲಿ ಆಗಬೇಕಿದ್ದ ಮಳೆ ಆಗದೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿತು. ಬೆಳೆದು ನಿಂತ ಬೆಳೆ ಬಾಡುತ್ತಿರುವುದನ್ನು ಕಂಡ ರೈತರು ಮುಗಿಲತ್ತ ಮುಖಮಾಡುವಂತ ಪರಿಸ್ಥಿತಿ ಬಂದೊದಗಿತು.

      ಈ ಹಿನ್ನೆಲೆಯಲ್ಲಿ ರೈತರು ಸಂಕಷ್ಟದಿಂದ ಪಾರಾಗಲು ಪಟ್ಟಣದ ಹಳೇ ಊರಿನ ಗೊಲ್ಲರ ಓಣಿಯ ರೈತರು ಹಾಗೂ ದೈವಸ್ಥರೆಲ್ಲ ಸೇರಿ ಮಡಿಯುಡಿಯಿಂದ ದೇವರ ಪ್ರಾರ್ಥನೆ ಮಾಡುವ ಮೂಲಕ, ಊರಿನ ಕರುಗಲ್ಲಿಗೆ ನೂರವೂಂದು ಕೊಂಡ ನೀರು ಹಾಕಿ ಪೂಜಿಸಿದರು.
ಕೊಟ್ರಯ್ಯ ಸ್ವಾಮಿ ನೇತೃತ್ವದಲ್ಲಿ ನಡೆದ ಪೂಜೆಯೊಂದಿಗೆ ದೈವಸ್ಥರಾದ ಗೊಲ್ಲರ ಜಯಪ್ಪ, ಹುಡೇದ್ ಮಂಜುನಾಥ, ಪೂಜಾರ್ ಶ್ಯಾಮಪ್ಪ, ರಡ್ಡೆರ ಕೊಟ್ರೇಶ್ ಹಾಗೂ ರೈತರು ಇದ್ದರು.

LEAVE A REPLY

Please enter your comment!
Please enter your name here