ಅಟಲ್‍ಜಿ ಶ್ರದ್ಧಾಂಜಲಿ ಸಭೆ : ಕುಣಿಗಲ್ ಬಿಜೆಪಿ ಪಕ್ಷದ ಬಣದ ರಾಜಕೀಯ-ಆತಂಕಕ್ಕೀಡಾದ ಕಾರ್ಯಕರ್ತರು

ಕುಣಿಗಲ್

         ದೇಶದ ಧೀಮಂತ ನಾಯಕ ಯುವಕರ ಕಣ್ಮಣಿಯಾಗಿದ್ದ, ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನಿಧನದಿಂದ ಶೋಕ ಮಡುಗಟ್ಟಿರುವ ಬೆನ್ನಲ್ಲೆ, ತಾಲ್ಲೂಕಿನ ಬಿಜೆಪಿಯ ಇಬ್ಬರು ಮುಖಂಡರಾದ ಡಿ.ಕೃಷ್ಣಕುಮಾರ್ ಮತ್ತು ರಾಜೇಶ್‍ಗೌಡ ನೇತೃತ್ವದಲ್ಲಿ ಪ್ರತ್ಯೇಕ ಶ್ರದ್ದಾಂಜಲಿ ಸಭೆ ನಡೆಸುವ ಮೂಲಕ ಮತ್ತೊಮ್ಮೆ ಬಿಜೆಪಿ ಪಕ್ಷದ ಬಣದ ರಾಜಕೀಯ ಜಗಜ್ಜಾಹೀರಾಗಿದೆ. ಇದನ್ನು ನೋಡಿ ಇಂತಹ ರಾಜಕೀಯ ಇಲ್ಲಿಯೂ ಮುಂದುವರೆದರೆ ಕಾರ್ಯಕರ್ತರು ಏನಾಗಬೇಕು ಎಂದು ಕೆಲ ಕಾರ್ಯಕರ್ತರು ಆತಂಕ್ಕೀಡಾದರು.

         ಪಟ್ಟಣದ ಗ್ರಾಮದೇವತೆ ವೃತ್ತ್ತದಲ್ಲಿ ಅಟಲ್‍ಜಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಿ.ಕೃಷ್ಣಕುಮಾರ್, ರಾಜಕೀಯ ಹಿರಿಯ ಮುತ್ಸದ್ದಿ ಮಾಜಿ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿ ಅವರ ಕೊಡುಗೆ ಅಪಾರವಾಗಿದು, ಇಡೀ ಪ್ರಪಂಚವೇ ಬೆಚ್ಚಿ ಬೆರಗಾಗುವಂತಹ ನಿರ್ಣಯಗಳನ್ನು ಎದೆಗಾರಿಕೆಯಿಂದ ಯಾವುದೆ ರಾಜಿ ಸಂಧಾನ ಇಲ್ಲದೇ ಪ್ರಕಟಿಸುತ್ತಿದ್ದ ಧೀಮಂತ ನಾಯಕರು ಇಂದು ಅಗಲಿರುವುದು ದುಃಖಕರ ಸಂಗತಿ. ಪಾಕಿಸ್ತಾನದೊಂದಿಗೆ ಸ್ನೇಹ ಹಸ್ತ ಚಾಚಿ, ಪಾಕ್ ನಡವಳಿಕೆ ಕಂಡ ವಾಜಪೇಯಿ ಅವರು ನಂತರ ಸ್ನೇಹಕ್ಕೂ ಬದ್ದ ಸಮರಕ್ಕೂ ಸಿದ್ದ ಎಂಬ ಹೇಳಿಕೆಯನ್ನು ನೀಡುವ ಮೂಲಕ ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವ ಮೂಲಕ ಇಡೀ ಪ್ರಪಂಚಕ್ಕೆ ಭಾರತದ ಶಕ್ತಿಯನ್ನು ಸಾಬೀತು ಪಡಿಸಿದರು. ಮಹಾನ್ ನಾಯಕರಾದ ಇವರು ಪ್ರೋಕ್ರಾನ್ ಅಣು ವಿದ್ಯುತ್ ಸಿಡಿಸಿ ಅಮೇರಿಕಕ್ಕೆ ಸವಾಲು ಹಾಕಿದ ಧೀವiಂತ ನಾಯಕ. ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ರಾಷ್ಟ್ರದಲ್ಲಿ ಕಾಂಗ್ರೆಸ್‍ಯೇತರ ಉತ್ತಮ ಸರ್ಕಾರವನ್ನು ನೀಡಿದ ಮೊದಲ ಪ್ರಧಾನಿ. ಇವರ ನಿಧನದಿಂದ ದೇಶದ ನಾಗರಿಕರಲ್ಲಿ ದುಃಖ ಮಡುಗಟ್ಟಿದ್ದು, ಅಪಾರ ನಷ್ಟವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ತಾ.ಪಂ. ಸದಸ್ಯ ಕೆ.ಎಸ್. ಬಲರಾಂ ಮಾತನಾಡಿದರು. ತಾ.ಪಂ. ಸ್ಥಾಹಿಸಮಿತಿ ಅಧ್ಯಕ್ಷ ದಿನೇಶ್, ಮುಖಂಡರಾದ ಅರುಣ್‍ಕುಮಾರ್, ಸಂತೆಪೇಟೆ ಸುರೇಶ್, ನಾರಾಯಣಗೌಡ, ರವಿಚಂದ್ರ, ಶಿವಣ್ಣ, ಸುರೇಶ್, ರೇಣುಕಪ್ಪ, ವೆಂಕಟೇಶ್ ಮುಂತಾದವರು ಭಾಗವಹಿಸಿದ್ದರು.

          ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತ್ತದಲ್ಲಿ ಪ್ರತ್ಯೇಕವಾಗಿ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಬಿಜೆಪಿ ಮುಖಂಡ ರಾಜೇಶ್‍ಗೌಡ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದಿಂದ ರಾಷ್ಟ್ರದ ಕೋಟ್ಯಂತರ ಜನರ ಹೃದಯ ಗೆದ್ದ ಮೇಧಾವಿಯನ್ನು ಕಳೆದುಕೊಂಡಂತಾಗಿದೆ. ದೇಶ-ವಿದೇಶಗಳಲ್ಲಿ ತನ್ನದೇ ವ್ಯಕ್ತಿತ್ವ, ಪ್ರತಿಭೆಯನ್ನು, ಸ್ನೇಹವನ್ನು, ಹೊಂದಿದ್ದಂತಹ ಅಪ್ರತಿಮ ನಾಯಕರಾದ ಅಟಲ್ ಬಿಹಾರಿ ವಾಜಪೇಯಿಯವರ ನಿಧನದಿಂದ ದೇಶಕ್ಕೆ ಜೊತೆಗೆ ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟ ಉಂಟಾಗಿದೆ. ವಾಜಪೇಯಿಯವರ ಅನುಯಾಯಿಯಾಗಿ ಅವರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿ ಕಂಬನಿ ಮಿಡಿದರು.

         ಮಾಜಿ ಪುರಸಭಾ ಅಧ್ಯಕ್ಷ ಜೆಡಿಎಸ್ ಮುಖಂಡರಾದ ಹರೀಶ್ ಮಾತನಾಡಿ, ದೇಶದ ಕೊಟ್ಯಂತರ ಜನರನ್ನು ಅಗಲಿದಂತಹ ವಾಜಪೇಯಿಯವರು ದೀನ-ದಲಿತರು, ಅಲ್ಪಸಂಖ್ಯಾತರ ಏಳಿಗೆಗೆ ಶ್ರಮಿಸಿ, ಪಾಕಿಸ್ತಾನದೊಂದಿಗೆ ಸ್ನೇಹದ ಹಸ್ತ ಚಾಚಿ ಉತ್ತಮ ಬಾಂಧವ್ಯವನ್ನು ಬೆಸೆಯುವಂತೆ ಮಾಡಿದಂತಹ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. ಈ ಸಂದರ್ಭದಲ್ಲಿ ನಾಗÀರಾಜು, ಮಂಜುನಾಥ್, ಕೆ.ಎಂ. ತಿಮ್ಮಪ್ಪ, ಕುಣಿಗಲ್ ಶಿವಣ್ಣ ಸೇರಿದಂತೆ ಅನೇಕ ಮುಖಂಡರು ಪಕ್ಷಾತೀತವಾಗಿ ಭಾಗವಹಿಸಿದ್ದರು.

Recent Articles

spot_img

Related Stories

Share via
Copy link
Powered by Social Snap