ಅಭಿವೃದ್ದಿ ಜೊತೆಗೆ ಮೂಲಸೌಕರ್ಯಕ್ಕೆ ನನ್ನ ಆದ್ಯತೆ 34ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಸಂಕಲ್ಪ

ಚಿತ್ರದುರ್ಗ;

             ನಮಗೆ ಅಭಿವೃದ್ದಿಯ ಬಗ್ಗೆ ಕಾಳಜಿ ಇದೆ. ಶೋಷಿತರು, ದಲಿತರು ಮತ್ತು ಇತರೆ ವರ್ಗಗಳ ಶ್ರೇಯಸ್ಸಿನ ಬಗ್ಗೆಯೂ ಬದ್ದತೆ ಇಟ್ಟುಕೊಂಡಿದ್ದೇವೆ. ಅಧಿಕಾರ ಇರಲಿ, ಬಿಡಲಿ ಸದಾ ಜನರೊಂದಿಗೆ ಬೆರೆತು ಮುನ್ನಡೆದಿದ್ದೇವೆ. ನಮ್ಮ ಜನಪರ ಕಾಳಿಯನ್ನು ಯಾರಿಗೂ ಪ್ರಶ್ನಿಸಲಾಗದು. ನನಗೆ ಅಧಿಕಾರ ಮುಖ್ಯವಲ್ಲ, ಜನರ ಅಭಿವೃದ್ದಿಯೇ ಮುಖ್ಯ. ನನ್ನ ಮೇಲೆ ನಂಬಿಕೆ ವಿಶ್ವಾಸವಿಟ್ಟು ಈ ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ಮತದಾರರ ಋಣ ತೀರಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡುತ್ತೇನೆ…

              ಚಿತ್ರದುರ್ಗ ನಗರಸಭೆಯ ಚುನಾವಣೆಯಲ್ಲಿ 34ನೇ ವಾರ್ಡಿನಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಹಾಗೂ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ಮಾಜಿ ನಗರಸಭೆ ಸದಸ್ಯ ಹೆಚ್.ಶ್ರೀನಿವಾಸ್ ಅವರ ಮನದಾಳದ ಮಾತುಗಳಿವು.

               ಹೌದು, ಹೆಚ್.ಶ್ರೀನಿವಾಸ್ ಮೊದಲಿನಿಂದಲೂ ಜನರ ಜೊತೆಗೆ ಬೆರೆತು ಬೆಳದು ಬಂದವರು. ಜಾತಿ, ಧರ್ಮವನ್ನು ಮೀರಿ ಬೆಳೆದವರು. ಎಲ್ಲರೊಟ್ಟಿಗೆ ಒತ್ತಮ ಒಡನಾಟ ಬೆಳೆಸಿಕೊಂಡಿರುವ ಅವರದು ಸರಳ ವ್ಯಕ್ತಿತ್ವ. ತುಂಬಾ ಸೌಮ್ಯ ಸ್ವಭಾವದವರು. ದಲಿತರು, ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿರುವ ಶ್ರೀನಿವಾಸ್, ಚಿತ್ರದುರ್ಗದಲ್ಲಿ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಸಮಾಜಮುಖಿ ಸೇವಾಕಾರ್ಯಗಳಿಂದಲೇ ಗುರ್ತಿಸಿಕೊಂಡವರು. ಬಡವರು ಯಾರೇ ಮನೆ ಬಾಗಿಲಿಗೆ ಬಂದರೆ ವಾಪಸ್ಸು ಕಳುಹಿಸಿರುವ ಉದಾಹರಣೆಳೇ ಇಲ್ಲ. ಸಾಧ್ಯವಾದಷ್ಟು ಜನರಿಗೆ ಒಳಿತು ಮಾಡಿದ್ದಾರೆ.

              ಇನ್ನು ತಮ್ಮ ಶಿಕ್ಷಣ ಸಂಸ್ಥೆಯ ಮೂಲಕವೂ ಬಡ ವರ್ಗದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಒಮ್ಮೆ ನಗರಸಭೆ ಸದಸ್ಯರಾಗಿಯೂ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅಂದು ತಮ್ಮನ್ನು ಗೆಲ್ಲಿಸಿದ ಜನರಿಗೆ ನ್ಯಾಯ ದೊರೆಕಿಸಿಕೊಟ್ಟಿದ್ದಾರೆ. 34ನೇ ವಾರ್ಡಿ ಮುಖಂಡರು, ಪಕ್ಷದ ಕಾರ್ಯಕರ್ತರ ಒತ್ತಾಯದ ಹಿನ್ನಲೆಯಲ್ಲಿ ಶ್ರೀನಿವಾಸ್ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಸ್ಥಳೀಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಆಪ್ತರೂ ಆಗಿರುವ ಶ್ರೀನಿವಾಸ್ ಅವರು ಈ ಬಾರಿ ಇಲ್ಲಿ ಗೆದ್ದರೆ ಇಡೀ ವಾರ್ಡಿನ ಚಿತ್ರಣವೇ ಬದಲಾಗಲಿದೆ ಎನ್ನುವ ಮಾತುಗಳು ವಾರ್ಡಿನಲ್ಲಿ ಕೇಳಿ ಬರುತ್ತಿವೆ.

               ಕಳೆದ ಒಂದು ವಾರದಿಂದ ವಾರ್ಡಿನ ಪ್ರತಿ ಮನೆಯ ಮತದಾರರನ್ನೂ ಬೇಟಿ ಮಾಡಿ ಅಭಿವೃದ್ದಿಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುವಂತೆಯೂ ಮನವಿ ಮಾಡಿಕೊಳ್ಳುತ್ತಿದ್ದಾರೆ. ಶ್ರೀನಿವಾಸ್ ಅವರು ಮತಯಾಚನೆಗೆ ಹೋಗುವ ಕಡೆ ಎಲ್ಲಾ ಮತದಾರರು ತುಂಬಾ ಪ್ರೀತಿ ತೋರುತ್ತಿದ್ದಾರೆ. ವಾರ್ಡಿನಲ್ಲಿ ಮಹಿಳೆಯರು, ಯುವಕರು ಮತ್ತು ವಿಶೇಷವಾಗಿ ಸರ್ಕಾರಿ ನೌಕರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

                ಈ ಚುನಾವಣೆಯಲ್ಲಿ ಬಿಜೆಪಿಯ ಕಡೆಗೆ ಗಾಳಿ ಬೀಸುತ್ತಿದೆ. ಇಲ್ಲಿಯೂ ಸಹ ಬಿಜೆಪಿಗೆ ಬಾರೀ ಜನ ಬೆಂಬಲ ವ್ಯಕ್ತವಾಗುತ್ತಿದೆ. ಯುವಕರು ಮತ್ತು ಹಿರಿಯರು ಕೂಡಾ ಸ್ವಯಂ ಪ್ರೇರಿತವಾಗಿ ಮತಯಾಚನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಡೀ ವಾರ್ಡ್‍ನಲ್ಲಿ ಬಿಜೆಪಿಯ ಬಾವುಟ ಹಿಡಿದು ಸಂಜೆ ಮುಂಜಾನೆ ಯುವಕರು ಮತದಾರರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿರುವುದು ಕಂಡು ಬರುತ್ತಿದೆ.

                  ಮತ ಪ್ರಚಾರದ ಬ್ಯೂಸಿಯಲ್ಲಿದ್ದರೂ ಹೆಚ್.ಶ್ರೀನಿವಾಸ್ ಅವರು ಪತ್ರಿಕೆಯೊಂದಿಗೆ ಮಾತನಾಡಿ, ತಾವು ಗೆದ್ದರೆ ವಾರ್ಡಿನಲ್ಲಿ ತುರ್ತಾಗಿ ಆಗಬೇಕಿರುವ ಕೆಲಸಗಳು ಮತ್ತು ವಾರ್ಡಿನ ಸಮಗ್ರ ಅಭಿವೃದ್ದಿಯ ಕುರಿತು ವಿವರಣೆ ನೀಡಿದ್ದಾರೆ. ಮತದಾರರು ತಮ್ಮನ್ನು ಬೆಂಬಲಿಸಿದರೆ ಇಡೀ ವಾರ್ಡಿನ ಚಿತ್ರಣವೇ ಬದಲಾಗಲಿದೆ ಎನ್ನುವ ಭರವಸೆಯ ಮಾತುಗಳನ್ನಾಡಿದ್ದಾರೆ.

 ಚುನಾವಣೆಯ ಸಿದ್ದತೆ ಹೇಗೆ ನಡೆದಿದೆ ?

             ಚುನಾವಣೆ ಎದುರಿಸಲು ವಿಶೇಷ ಸಿದ್ದತೆ ಏನೂ ಇಲ್ಲ. ಇದು ನನಗೆ ಹೊಸದೇನೂ ಅಲ್ಲ. ಈ ಹಿಂದೆಯೂ ಒಮ್ಮೆ ನಗರಸಭೆಗೆ ಅಯ್ಕೆಯಾಗಿದ್ದೇನೆ. ಚುನಾವಣೆ ನಡೆಸುವ ಮತ್ತು ಸಮರ್ಥವಾಗಿ ಎದುರಿಸುವ ಎಲ್ಲಾ ಸಾಮಥ್ರ್ಯ ಮತ್ತು ಅನುಭವವೂ ಇದೆ.

              ಚುನಾವಣೆ ಘೋಷಣೆಯಾದ ಬಳಿಕ ವಾರ್ಡಿನ ಮುಖಂಡರು ಮತ್ತು ಕಾರ್ಯಕರ್ತರು ಸ್ಪರ್ದಿಸಲೇ ಬೇಕು ಎನ್ನುವ ಹಠಕ್ಕೆ ಬಿದ್ದರು. ಜೊತೆಗೆ ಶಾಸಕರಾದ ತಿಪ್ಪಾರೆಡ್ಡಿ ಅವರೂ ಸಹ ಅಭಿವೃದ್ದಿಯ ದೃಷ್ಠಿಯಿಂದ ಚುನಾವಣೆಗೆ ನಿಲ್ಲುವಂತೆ ಸೂಚಿಸಿದರು. ಈ ಕಾರಣಕ್ಕಾಗಿ ಚುನಾವಣೆಗೆ ನಿಲ್ಲಬೇಕಾಯಿತು. ಈಗಾಗಲೇ ವಾರ್ಡಿನಲ್ಲಿಯೇ ಇದ್ದು ಕೆಲಸ ಮಾಡುತ್ತಿದ್ದೇನೆ. ಪಕ್ಷದ ಸಂಘಟನೆ, ಗೆಲುವಿನ ತಂತ್ರಗಾರಿಕೆಯ ಕುರಿತು ಕಾರ್ಯಕರ್ತರ ಜೊತೆ ಸಮಾಲೋಚನೆ ನಿಂರಂತರವಾಗಿ ಸಾಗಿದೆ.

 ವಾರ್ಡ್‍ನ ಸಮಸ್ಯೆಗಳ ಬಗ್ಗೆ ನಿಮಗೇನು ಗೊತ್ತು ?

              34ನೇ ವಾರ್ಡ್ ನನಗೆ ಹೊಸದಲ್ಲ. ಇಲ್ಲಿನ ಸಾಕಷ್ಟು ಜನರ ಜೊತೆಗೆ ಹಿಂದಿನಿಂದಲೂ ಒಡನಾಟವಿದೆ. ಸಣ್ಣ ಹುಡುಗರಿದ್ದಾಗಿನಿಂದ ಇಲ್ಲಿನ ಸ್ಥಿತಿಗತಿಗಳು ಗೊತ್ತು. ದಿನಗಳು ಕಳೆದಂತೆ ನಗರ ಪ್ರದೇಶವೂ ಬೆಳೆಯುತ್ತಿದೆ. ಇಲ್ಲಿ ಸಾಕಷ್ಟು ಹೊಸ ಬಡಾವಣೆಗಳು ನಿರ್ಮಾಣವಾಗಿವೆ. ಆದರೂ ಸರಿಯಾದ ರೀತಿ ಜನರಿಗೆ ಮೂಲಭೂತ ಸೌಲಬ್ಯಗಳು ಸಿಗುತ್ತಿಲ್ಲ
ಕುಡಿಯುವ ನೀರು, ಚರಂಡಿ ವ್ಯವಸ್ಥೆಗಳಿಲ್ಲ. ಉತ್ತಮ ರಸ್ತೆಗಳೂ ಇಲ್ಲ. ಮಳೆ ಬಂದರೆ ಜನರು ವಾಸಿಸುವ ಕಡೆ ನೀರು ನುಗ್ಗಿ ಬಂದು ಸಾಕಷ್ಟು ಬಾರಿ ಅವಾಂತರ ಸೃಷ್ಟಿಸಿದೆ. ಇಲ್ಲಿ ಕೂಲಿಕಾರ್ಮಿಕರು, ಬಡವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ನಾಗರೀಕ ಸೌಲಬ್ಯಗಳಿಂದ ವಂಚಿತರಾಗುತ್ತಿದ್ದಾರೆ.

              ಇಂತಹ ಸಂಗತಿಗಳನ್ನು ನಾನು ನೋಡಿಕೊಂಡು ಬಂದಿದ್ದೇನೆ. ಇದುವರೆಗೂ ಇಲ್ಲಿ ಆಯ್ಕೆಯಾದವರು ಮೂಲಭೂತ ಸೌಲಬ್ಯಗಳನ್ನು ಅಭಿವೃದ್ದಿ ಪಡಿಸುವ ಕಡೆಗೆ ಯೋಚನೇ ಮಾಡಿಲ್ಲ. ಈ ಕಾರಣಕ್ಕಾಗಿಯೇ ಇಲ್ಲಿ ಸಮಸ್ಯೆಗಳು ಜೀವಂತವಾಗಿವೆ.

 ವಾರ್ಡಿನ ಅಭಿವೃದ್ದಿಗೆ ನಿಮ್ಮ ದೃಷ್ಠಿಕೋನ ಏನು ?

               ಮೊದಲೇ ಹೇಳಿದಂತೆ ಇಲ್ಲಿ ಸಮಸ್ಯೆಗಳ ಆಗರವೇ ಸೃಷ್ಠಿಯಾಗಿದೆ. ಇಂದಿಗೂ ಇಲ್ಲಿನ ಬಹುತೇಕ ಜನರು ಸಂಕಷ್ಟದಲ್ಲಿದ್ದಾರೆ. ಬಹುತೇಕ ಜನರಿಗೆ ಸ್ವಂತ ಮನೆ ಇಲ್ಲ, ನಿವೇಶನವೂ ಇಲ್ಲ. ಇದ್ದರೂ ಅವರ ಹೆಸರಿಗೆ ದಾಖಲೆಗಳೇ ಇಲ್ಲ. ಇಂತಹ ವಿಚಾರಗಳ ಬಗ್ಗೆ ಮೊದಲ ಆದ್ಯತೆ ಕೊಟ್ಟು ಕೆಲಸ ಮಾಡಬೇಕೆಂಬುದು ನನ್ನ ಆಶಯ

               ಜಟ್‍ಪಟ್‍ನಗರ, ಜೋಗಿಮಟ್ಟಿ ರಸ್ತೆಯ ಕೆಲವು ಪ್ರದೇಶಗಳು, ಟೀಚರ್ಸ್ ಕಾಲೋನಿಗಳಲ್ಲಿ ಇನ್ನು ಸರಿಯಾದ ರಸ್ತೆಗಳಿಲ್ಲ. ಮಳೆ ಬಂದರೆ ದ್ವಿಚಕ್ರ ವಾಹನ ಸಂಚಾರವೂ ಕಷ್ಟಕರವಾಗಿದೆ. ಮಳೆ ನೀರಿನಿಂದ ಆಗುವ ಅಪಾಯಗಳನ್ನು ತಡೆಯಲು ಮೊದಲು ಗುಡ್ಡದ ಮೇಲಿಂದ ಹರಿದು ಬರುವ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ. ಪ್ರತಿ ಬೀದಿ, ರಸ್ತೆಯಲ್ಲೂ ಉತ್ತಮ ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಇಲ್ಲಿ ರಸ್ತೆಗಳೇ ಇಲ್ಲ. ಶಾಸಕರ ಮಾರ್ಗದರ್ಶನದಲ್ಲಿ ನಗರಸಭೆಯೂ ಸೇರಿದಂತೆ ವಿವಿಧ ಮೂಲಗಳಿಂದ ಅನುದಾನ ತಂದು ಪ್ರತಿ ಬೀದಿಯಲ್ಲೂ ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆ ನಿರ್ಮಿಸಲು ಒತ್ತು ಕೊಡುತ್ತೇನೆ.

                ಇಲ್ಲಿನ ಜನರ ಸಮಸ್ಯೆಗಳ ಪಟ್ಟಿಯನ್ನು ತಯಾರಿಸಿ ಅವುಗಳನ್ನು ಹಂತ ಹಂತವಾಗಿ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಶಾಸಕರು ಸೂಚಿಸಿರುವಂತೆ ಇಲ್ಲಿಯೇ ಜನ ಸಂಪರ್ಕ ಕಚೇರಿಯನ್ನು ತೆರೆದು ವಾರ್ಡ್ ಮಟ್ಟದಲ್ಲಿಯೇ ಬಗೆಹರಿಯಬಹುದಾದ ಸಮಸ್ಯೆಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಅಲ್ಲಿಗೆ ಕರೆಸಿ ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ

                  ಬಡವರಿಗೆ ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲರಿಗೆ ನೀಡುವ ವೇತನ ಸರಿಯಾಗಿ ಸಿಗುತ್ತಿದೆಯೇ ಇಲ್ಲವೇ ಎಂಬುದನ್ನು ಸ್ವತಃ ಅವರ ಮನೆ ಬಾಗಿಲಿಗೆ ತೆರಳಿ ವಿಚಾರಿಸುತ್ತೇನೆ. ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಬ್ಯಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ಜನ ತಮ್ಮ ಮೇಲೆ ನಂಬಿಕೆ ಮತ್ತು ವಿಶ್ವಾವಿಟ್ಟು ಗೆಲ್ಲಿಸಿದರೆ ಇಡೀ ವಾರ್ಡ್‍ನ್ನು ಒಂದು ಮಾದರಿ ವಾರ್ಡ್‍ನ್ನಾಗಿ ರೂಪಿಸಲು ಸಂಕಲ್ಪ ಮಾಡುತ್ತೇನೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap