ಅಮಲಾ ಪೌಲ್ ಕೈಗೆ ಪೆಟ್ಟು ಆಸ್ಪತ್ರೆ ದಾಖಲಾದ ತಾರೆ

ಕೊಚ್ಚಿ

ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾದ  ಅಮಲಾ ಪೌಲ್ . ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡುತ್ತಲೇ ಬಂದಿರುವ ಅಮಲಾ ಪೌಲ್ ಇದೀಗ ‘ಅಧೋ ಅಂಧ ಪರವೈ ಪೊಲಾ’ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಫ್ ಅಂಡ್ ಟಫ್ ಹುಡುಗಿಯಾಗಿ ಕಾಣಿಸಿಕೊಂಡಿರುವ ಅಮಲಾ ಪೌಲ್ ಸದ್ಯ ಕೈ ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಹೌದು, ‘ಅಧೋ ಅಂಧ ಪರವೈ ಪೊಲಾ’ ಚಿತ್ರಕ್ಕಾಗಿ ಕಳೆದ ಶನಿವಾರ ರಾತ್ರಿ ಸ್ಟಂಟ್ ಸನ್ನಿವೇಶಗಳಲ್ಲಿ ನಟಿ ಅಮಲಾ ಪೌಲ್ ಪಾಲ್ಗೊಂಡಿದ್ದರು. ಸ್ಟಂಟ್ ಮಾಡುವ ಸಂದರ್ಭದಲ್ಲಿ ನಟಿ ಅಮಲಾ ಬಲಗೈ ಮುರಿದಿದೆ.ಸದ್ಯ ಕೊಚ್ಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಶೀಘ್ರ ಗುಣಮುಖರಾಗಲೆಂದು ಚಿತ್ರತಂಡ ಹಾರೈಸಿದೆ.

ಹಿನ್ನೆಲೆ:

ಸಿನಿಮಾ ಎಂದು ಬಂದರೆ ಈ ನಟಿಗೆ ಸಾಹಸ ಸನ್ನಿವೇಶಗಳಲೂ  ಮಾಡುವ ಹುಮ್ಮಸಿನ ನಟಿ ಎಂದೇ ಖ್ಯಾತರಾದವರು ಅಮಲಾ ಪೌಲ್.ಇದೇ ರೀತಿ  ಸ್ಟಂಟ್ ಸನ್ನಿವೇಶದಲ್ಲಿ ನಟಿ ಅಮಲಾ ಕೈಗೆ ಪೆಟ್ಟು ಆದಾಗ, ಕೈ ಉಳುಕಿರಬೇಕು ಎಂದು ಚಿತ್ರತಂಡ ಭಾವಿಸಿತ್ತು. ಹೀಗಾಗಿ, ತಕ್ಷಣಕ್ಕೆ ಐಸ್ ಪ್ಯಾಕ್ ನೀಡಲಾಯ್ತು. ಇನ್ನೂ ಶೂಟಿಂಗ್ ನಿಲ್ಲಿಸುವುದು ಅಮಲಾ ಪೌಲ್ ಗೂ ಇಷ್ಟ ಇರಲಿಲ್ಲ. ಹೀಗಾಗಿ, ಅವತ್ತಿನ ರಾತ್ರಿ ಚಿತ್ರೀಕರಣ ಮುಂದುವರೆಸಿದರು.ನಂತರ ನೋವು ಜಾಸ್ತಿಯಾದ ಕಾರಣ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು.

Recent Articles

spot_img

Related Stories

Share via
Copy link
Powered by Social Snap