ಆರೋಪ ಪಟ್ಟಿ ಸಲ್ಲಿಸಲು ವಿಶೇಷ ತನಿಖಾ ತಂಡದ ಸಿದ್ದತೆ

ಬೆಂಗಳೂರು:

      ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯು ಬಹುತೇಕ ಪೂರ್ಣಗೊಂಡಿದ್ದು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಆರೋಪಟ್ಟಿ ಸಲ್ಲಿಸಲು ವಿಶೇಷ ತನಿಖಾ ತಂಡದ ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ.

      ಪ್ರಕರಣದ ಸಂಬಂಧ ಪ್ರಮುಖ ಆರೋಪಿ ಪರಶುರಾಮ ವಾಗ್ಮೋರೆ ಸೇರಿ ಹಲವು ಆರೋಪಿಗಳನ್ನು ಬಂಧಿಸಿ, ಪಿಸ್ತೂಲ್ ಹತ್ಯೆಗೆ ಬಳಸಿದ ಬೈಕ್‍ನ್ನು ವಶಪಡಿಸಿಕೊಂಡು ಅಧುನಿಕ ತಂತ್ರಜ್ಞಾನ ದೊಂದಿಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಅದರ ವಿವರಗಳನ್ನೊಳಗೊಂಡ ಆರೋಪಟ್ಟಿಯನ್ನು ಸಿದ್ದ ಪಡಿಸಲಾಗುತ್ತಿದ್ದು, ಸದ್ಯದಲ್ಲಯೇ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಎಸ್‍ಐಟಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

      ಶನಿವಾರವಷ್ಟೇ ಆರೋಪಿಗಳಾದ ವಿಚಾರವಾದಿ ಎಂಎಂ ಕಲ್ಬುರ್ಗಿ ಹತ್ಯೆ ಸಂಬಂಧ ಗಣೇಶ ಮಿಸ್ಕಿನ್, ಅಮಿತ್ ಬದ್ದಿಯನ್ನ ಸಿಐಡಿ ವಶಕ್ಕೆ ಪಡೆದುಕೊಂಡು ತನಿಖೆ ಚುರುಕುಗೊಳಿಸಿದೆ. ಕಲಬುರಗಿ ಅವರ ಹತ್ಯೆಯಲ್ಲಿ ಅಮೋಲ್ ಕಾಳೆ ಪ್ರಮುಖ ಆರೋಪಿ ಎಂಬುದು ತನಿಖಾಧಿಕಾರಿಗಳಿಗೆ ತಿಳಿದು ಬಂದಿದೆ.

      ಗೌರಿ ಮತ್ತು ಕಲಬುರಗಿ ಅವರ ಹತ್ಯೆಗೆ ಬಳಸಿದ ಗನ್ ಒಂದೇ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ಕೂಡ ವರದಿ ನೀಡಿದೆ. ಹಾಗಾಗಿ ಕಲಬುರಗಿ ಹತ್ಯೆ ಕೇಸನ್ನ ಕೂಡ ಅಧಿಕಾರಿಗಳು ಅದಷ್ಟು ಬೇಗ ಬೇಧಿಸೋದ್ರಲ್ಲಿ ಅನುಮಾನವಿಲ್ಲ ಎಂದು ಹೇಳಬಹುದು.

      ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆಗೆ ಬ್ಲ್ಯಾಕ್ ಪಲ್ಸರ್ ಬೈಕ್ ಬಳಸಲಾಗಿತ್ತು. ಅದನ್ನ ಈಗಾಗ್ಲೇ ಮಹಾರಾಷ್ಟ್ರ ಎಟಿಎಸ್ ತಂಡ ಪತ್ತೆ ಹಚ್ಚಿದೆ. ಕಲಬುರಗಿ ಹತ್ಯೆ ನಡೆದಾಗ್ಲೂ ಇದೇ ಬೈಕ್ ಬಳಕೆಯಾಗಿರುವ ಬಗ್ಗೆ ಆರೋಪಿಗಳು ಸಿಐಡಿ ತಂಡಕ್ಕೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

      ಒಂದು ಕಡೆ ಬೆಂಗಳೂರು ಕಚೇರಿಯಲ್ಲಿ ಸಿಐಡಿ ತಂಡ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದೆ. ಮತ್ತೊಂದು ತಂಡ ಈಗಾಗಲೇ ಮಹಾರಾಷ್ಟ್ರದಲ್ಲಿ ಬೀಡು ಬಿಟ್ಟಿದೆ. ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನ ಎಸ್‍ಐಟಿ ತಂಡ ತನಿಖೆ ಮಾಡಿ ಕೊನೆ ಹಂತಕ್ಕೆ ತಲುಪಿದೆ.

      ದಾಬೋಲ್ಕರ್, ಕಲಬುರಗಿ, ಗೌರಿ ಲಂಕೇಶ್ ಹತ್ಯೆ ಸೇರಿ ಈ ಮೂರು ಕೇಸ್ನಲ್ಲಿ ಬಂಧಿತ ಆರೋಪಿಗಳು ಭಾಗಿಯಾಗಿರುವ ಹಿನ್ನೆಲೆ ಈ ಎಲ್ಲ ಪ್ರಕರಣಕ್ಕೆ ತನಿಖಾ ತಂಡ ಸದ್ಯದಲ್ಲೇ ಅಂತ್ಯ ಹಾಡಲಿದೆ ಎಂದು ಮೂಲಗಳು ತಿಳಿಸಿವೆ.

      ಇನ್ನು ಆರೋಪಪಟ್ಟಿಯಲ್ಲಿ ಪ್ರಮುಖವಾಗಿ ಹತ್ಯೆಗೆ ಬಳಸಿದ ಗನ್, ಬೈಕ್, ಸಿಸಿಟಿವಿ ಫೂಟೇಜ್, ಮೊಬೈಲ್ ಕರೆಗಳ ಡೀಟೆಲ್ಸ್, ಆರೋಪಿಗಳು ತಂಗಿದ್ದ ಸ್ಥಳದ ಲೋಕೇಷನ್ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap