ಆ.29 : ಕೊಚ್ಚಿ ವಿಮಾನ ನಿಲ್ದಾಣ ರೀ ಓಪನ್

ಕೊಚ್ಚಿ:

      ಕೇರಳದಲ್ಲಿ ಮಳೆ ಕಡಿಮೆಯಾಗಿ ಪ್ರವಾಹ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ. ಹೀಗಾಗಿ, ಹಲವು ದಿನಗಳಿಂದ ಬಂದ್ ಆಗಿದ್ದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತೆ ಅಗಸ್ಟ್ 29ರಂದು ರೀ ಓಪನ್ ಆಗಲಿದೆ. 

      ಹೋಟೆಲ್‌ಗಳು, ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಬರದ ಕಾರಣ ಏರ್‌ಪೋರ್ಟ್ ಓಪನ್ ಆದರೆ ಪ್ರಯಾಣಿಕರಿಗೂ ತೊಂದರೆಯಾಗುತ್ತದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ, ಆಗಸ್ಟ್ 26ರ ಬದಲು 29ರಂದು ಏರ್‌ಪೋರ್ಟ್ ಅನ್ನು ಪುನಾರಂಭಗೊಳಿಸಲು ಸಿಐಎಎಲ್ ನಿರ್ಧರಿಸಿದೆ. ಹೀಗಾಗಿ, ಆ ವೇಳೆಗೆ ಸಿಬ್ಬಂದಿ ಸಹ ವಾಪಸಾಗಲಿದ್ದಾರೆ ಎಂದು ಏರ್‌ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

      48 ಗಂಟೆಗಳ ಕಾಲ ಕೊಚ್ಚಿ ಏರ್‌ಪೋರ್ಟ್‌ನಲ್ಲಿ ಶುದ್ಧೀಕರಣ ಕಾರ್ಯ ನಡೆದಿದ್ದು, ನಂತರ ಸಿಐಎಎಲ್‌ ಸಂಬಂಧಪಟ್ಟವರ ಜತೆ ಸಭೆ ನಡೆಸಿದೆ. ಸಭೆ ವೇಳೆ ಏರ್‌ಪೋರ್ಟ್ ಸ್ಥಗಿತಗೊಂಡಿದ್ದಕ್ಕೆ ಎಷ್ಟು ನಷ್ಟವಾಗಿರಬಹುದೆಂದು ಲೆಕ್ಕ ಹಾಕಿದ ಅಧಿಕಾರಿಗಳು, ನಂತರ ಆಗಸ್ಟ್ 29ರಂದು ಮಧ್ಯಾಹ್ನ 2 ಗಂಟೆಗೆ ಸೇವೆಯನ್ನು ಪುನಾರಂಭಗೊಳಿಸಲು ನಿರ್ಧರಿಸಿದ್ದಾರೆ. ಈ ಮೊದಲು ಆಗಸ್ಟ್‌ 26ರಂದು ಓಪನ್ ಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದರು.  

      ಕೊಚ್ಚಿ ವಿಮಾನ ನಿಲ್ದಾಣ ಬಂದ್ ಆಗಿದ್ದಕ್ಕೆ ಸದ್ಯ 220ರಿಂದ 250 ಕೋಟಿ ರೂ. ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ. ಜತೆಗೆ, ಓಣಂ ಹಾಗೂ ಈದ್ ವೇಳೆಯಲ್ಲಿ ಸಹ ಸೇವೆ ಸ್ಥಗಿತವಾಗಿರುವುದರಿಂದ ಮತ್ತಷ್ಟು ನಷ್ಟವಾಗಿದ್ದು, ತಾಂತ್ರಿಕ ಸಲಕರಣೆಗಳಿಂದಲೂ ಸಿಕ್ಕಾಪಟ್ಟೆ ಲಾಸ್ ಆಗಿದೆ ಎಂದು ಹೇಳಿಕೊಂಡಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap