ಏಷಿಯನ್ ಗೇಮ್ಸ್ 2018 : ಶತೃ ರಾಷ್ಟ್ರ ಪಾಕ್ ವಿರುದ್ಧ ಸೆಣಸಿ ಕಂಚು ಗೆದ್ದ ಭಾರತ

ಜಕಾರ್ತಾ:

      ಇಂಡೋನೇಷ್ಯಾದ ಜಕಾರ್ತಾ ಮತ್ತು ಪಾಲೆಂಬಂಗ್ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರಷರ ಹಾಕಿ ಪಂದ್ಯದಲ್ಲಿ ಭಾರತ ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಇದರಿಂದ ಭಾರತಕ್ಕೆ ಮತ್ತೊಂದು ಕಂಚಿನ ಪದಕ ಸಿಕ್ಕಂತಾಗಿದೆ. 

      ಸೆಮಿಫೈನಲ್‌ನಲ್ಲಿ ಸೋತು ಟೀಕೆಗೆ ಒಳಗಾಗಿದ್ದ ಭಾರತ ಪುರುಷರ ಹಾಕಿ ತಂಡ ಶನಿವಾರ ಕಂಚು ಗೆದ್ದಿತು. ಮೂರು ಮತ್ತು ನಾಲ್ಕನೇ ಸ್ಥಾನ ನಿರ್ಣಯಿಸಲು ನಡೆದ ಪಂದ್ಯದಲ್ಲಿ ಪಿ.ಆರ್.ಶ್ರೀಜೇಶ್‌ ಬಳಗ ಪಾಕಿಸ್ತಾನವನ್ನು 2–1ರಿಂದ ಮಣಿಸಿತು.

      ಭಾರತದ ಪರ ಆಕಾಶ್ ದೀಪ್ ಸಿಂಗ್ ಮತ್ತು ಹರ್ಮನ್ ಪ್ರೀತ್ ಸಿಂಗ್ ಗೋಲ್ ಸಿಡಿಸಿದ್ದು ಪಾಕಿಸ್ತಾನದ ವಿರುದ್ಧ ಗೆಲುವನ್ನಾಚರಿಸಲು ನೆರವಾಯಿತು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap