ಏಷ್ಯನ್ ಗೇಮ್ಸ್ 2018: ಭಾರತದ ಚಿನ್ನದ ಬೇಟೆ ಆರಂಭ; ಬಜರಂಗ್‌ಗೆ ಸ್ವರ್ಣ ಪದಕ

 ನವದೆಹಲಿ:

      ಇಂಡೋನೇಷ್ಯಾದ ಎರಡು ನಗರಗಳಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ 2018 ಪಂದ್ಯಾವಳಿಯಲ್ಲಿ ಭಾರತ ಚಿನ್ನದ ಬೇಟೆಯನ್ನು ಆರಂಭಿಸಿದೆ.

ಪುರುಷರ ಕುಸ್ತಿ 65 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಬಜರಂಗ್ ಪೂನಿಯಾ ಚಿನ್ನದ ಹಾರ ಕೊರಳಿಗೆ ಹಾಕಿದ್ದಾರೆ.

10 ಮೀಟರ್ ಏರ್ ರೈಫಲ್ ಶೂಟಿಂಗ್ ನಲ್ಲಿ ಭಾರತಕ್ಕೆ ಕಂಚು:

      ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಭೇಟೆ ಆರಂಭವಾಗಿದ್ದು, ಶೂಟಿಂಗ್ ನಲ್ಲಿ ಭಾರತಕ್ಕೆ 2 ಕಂಚಿನ ಪಂದಗಳು ಲಭಿಸಿವೆ.

      10 ಮೀಟರ್ ಟೀಂ ಈ ವೆಂಟ್ ಸ್ಪರ್ಧೆಯಲ್ಲಿ ಭಾರತದ ಅಪೂರ್ವಿ ಚಂಡೇಲಾ ಮತ್ತು ರವಿ ಕುಮಾರ್ ಅವರು ಚೀನಾ ವಿರುದ್ಧ 9.7, 10.6, 9.7, 9.7 ಅಂತರದಲ್ಲಿ ಪರಾಭವಗೊಳ್ಳುವ ಮೂಲಕ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಆ ಮೂಲಕ ಭಾರತ ಏಷ್ಯನೇ ಗೇಮ್ಸ್ ನಲ್ಲಿ ಭಾರತದ ಪದಕ ಗಳಿಕೆ ಆರಂಭವಾಗಿದೆ. ಇನ್ನು ಚೀನಾ ತಂಡ ಬೆಳ್ಳಿ ಪದಕ ಗೆದ್ದಿದ್ದು, ತೈಪೆ ಚಿನ್ನದ ಪದಕ ಗೆದ್ದಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap