ಕಂಪ್ಯೂಟರ್‍ನಿಂದ ಅಕ್ಕಿಯನ್ನು ತಯಾರಿಸಲು ಸಾಧ್ಯವಿಲ್ಲ

ತುಮಕೂರು:

            ಕಂಪ್ಯೂಟರ್‍ನಿಂದ ಅಕ್ಕಿಯನ್ನು ತಯಾರಿಸಲು ಸಾಧ್ಯವಿಲ್ಲ ಎಂದು ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹನುಮಂತೇಗೌಡ ಹೇಳಿದರು.

                ತಾಲ್ಲೂಕಿನ ಹುಳ್ಳೇನಹಳ್ಳಿ ಗ್ರಾಮದಲ್ಲಿ ರೇಷ್ಮೆ ಇಲಾಖೆ ತುಮಕೂರು, ಐಡಿಎಫ್ ಸಂಸ್ಥೆ ಬೆಂಗಳೂರು, ಸುಪ್ರಜಾ ಫೌಂಡೇಷನ್, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕೃಷಿ ಸಂವಾದದಲ್ಲಿ ಮಾತನಾಡಿದ ಅವರು, ಇಂಜಿನಿಯರಿಂಗ್ ಪದವಿ ಮುಗಿಸಿ ಸಾಪ್ಟ್‍ವೇರ್ ಕಂಪನಿಗಳಲ್ಲಿ ಕೆಲಸಮಾಡುವ ಯುವಕರು ಕಂಪನಿಯ ಕೆಲಸದ ಒತ್ತಡದಿಂದ ಮುಕ್ತಿ ಪಡೆಯಲು ಕೃಷಿಯನ್ನು ನಂಬಿ ಗ್ರಾಮಗಳಿಗೆ ಬರುತ್ತಿರುವುದು ಸಂತೋಷದಾಯಕವಾಗಿದೆ.

               ರೈತರು ವ್ಯವಸಾಯದಲ್ಲಿ ಖರ್ಚು ಕಡಿಮೆ ಮಾಡಿಕೊಂಡು ಬೆಳೆ ಬೆಳೆದಾಗ ಮಾತ್ರ ರೈತರು ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.ಐಡಿಎಫ್ ಸಂಸ್ಥೆಯ ಕೆಂಪೇಗೌಡ ಮಾತನಾಡಿ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿಗೆ ಪೂರಕವಾದ ಕೀಟನಾಶಕ ಮತ್ತು ಗೊಬ್ಬರಗಳನ್ನು ತಯಾರು ಮಾಡಿಕೊಂಡು ಸುಸ್ಥಿರ ಕೃಷಿ ಮಾಡಲು ಮುಂದಾಗಬೇಕು ಎಂದರು.
ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕ ಕೇಂದ್ರದ ಸಂಯೋಜಕ ಡಾ.ಆರ್.ಸುರೇಶ್ ಮಾತನಾಡಿ ರೈತರು ತಮ್ಮ ಜಮೀನಿನಲ್ಲಿ ಬಳಸುವ ಕೃಷಿ ಯಂತ್ರೋಪಕರಣಗಳಿಗೆ ಡಿಸೇಲ್‍ಗಳನ್ನು ತಾವೇ ತಯಾರಿಸಿಕೊಳ್ಳುವ ನಿಟ್ಟಿನಲ್ಲಿ ಸಿದ್ದರಾಗಬೇಕು. ನಮ್ಮ ಕಾಲೇಜಿನಲ್ಲಿ ಇದಕ್ಕೆ ಬೇಕಾದ ಮಾರ್ಗದರ್ಶನವನ್ನು ನಾವು ನೀಡುತ್ತೇವೆ ಎಂದರು ತಿಳಿಸಿದರು.

            ಕೃಷಿ ಸಂವಾದದಲ್ಲಿ ರೇಷ್ಮೆ ಇಲಾಖೆಯ ರಾಮೇಶ್‍ಬಾಬು, ಹಾಲು ಉತ್ಪಾದಕರ ಸಹಾಕಾರ ಸಂಘದ ಅಧ್ಯಕ್ಷ ಟಿ.ನಾಗರಾಜು, ಐಡಿಎಫ್ ಸಂಸ್ಥೆಯ ಗುರುದತ್, ಐ.ಆರ್.ಪರಮಶಿವಯ್ಯ, ರೈತ ಉತ್ಪಾದಕರ ಕಂಪನಿಯ ವ್ಯವಸ್ಥಾಪಕರಾದ ಸಂತೋಷ್, ಡಿ.ಲೋಕೇಶ್, ಕ್ಷೇತ್ರಾಧಿಕಾರಿಗಳಾದ ದೊಡ್ಡಯ್ಯ, ಮೋಹನ್‍ಕುಮಾರ್, ನರಸಿಂಹಮೂರ್ತಿ, ಗ್ರಾಮದ ಮುಖಂಡರಾದ ಜಯಣ್ಣ, ರಮೇಶ್, ಟಿ.ಜಿ.ಪಾಳ್ಯದ ಹರೀಶ್, ಮತ್ತಿತರರು ಇದ್ದರು.
          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap