ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನೂತನ ಕಟ್ಟಡ ಶಂಕುಸ್ಥಾಪನೆ

ಬೆಂಗಳೂರು

       ಸಂಸ್ಕೃತ ಮಹತ್ವ ಅರಿತು ವಿದೇಶಿಯರು ಅಭ್ಯಾಸ ಮಾಡುತ್ತಿದ್ದರೆ ನಮ್ಮವರಿಗೆ ಸಂಸ್ಕೃತ ಕಲಿಕೆಗೆ ಮುಂದಾಗುತ್ತಿಲ್ಲ ಆದರೂ ನಮ್ಮಲ್ಲಿನ ಮಠ, ಮಾನ್ಯಗಳು, ಗುರುಗಳು, ಸಂಸ್ಕೃತವನ್ನು, ಅಳವಾಗಿ ಅಭ್ಯಾಸ ಮಾಡಿ ಜನರಿಗೆ ಮುಟ್ಟಿಸುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ

        ನಗರದ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನೂತನ ಕಟ್ಟಡ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು.ಸಂಸ್ಕೃತ ಭಾಷೆಯೂ ಒಂದು ಸಂಸ್ಕೃತಿ ಆಗಿದ್ದು, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಯ ಪದಗಳು ಸಂಸ್ಕೃತದಿಂದಲೇ ಹುಟ್ಟಿವೆ ಎಂದರು.

         ಅತ್ಯಂತ ಪುರಾತನ ಭಾಷೆಯಾಗಿರುವ ಸಂಸ್ಕೃತದಿಂದ ಇಂಗ್ಲಿಷ್, ಜರ್ಮನ್ ಹಾಗೂ ಯುರೋಪಿಯನ್ ಭಾಷೆ ಸೇರಿದಂತೆ ಅನೇಕ ಭಾಷೆಗಳ ಸಾವಿರಾರು ಪದಗಳು ಉಗಮವಾಗಿದೆ. ಉದಾಹರಣೆ, ಮಾತೃ ಎನ್ನುವ ಸಂಸ್ಕೃತ ಪದದ ಆಧಾರದಲ್ಲಿ ‘ಮದರ್’ ಎಂದು ಹೇಳಲಾಗುತ್ತದೆ ಎಂದು ತಿಳಿಸಿದರು.

        ಮಾರ್ಷಿಯಾಸ್ ದೇಶವು ಪೂರ್ಣ ಸಂಸ್ಕೃತ ಭಾಷೆಯ ಮಾತೃ ಭಾಷೆಯ ದೇಶವಾಗಿದ್ದು, ಈಗಲೂ ಅಲ್ಲಿನ ದೈನಂದಿನ ವ್ಯವಹಾರಗಳು ಸಂಸ್ಕೃತ ಭಾಷೆಯಲ್ಲೇ ನಡೆಯುತ್ತಿದೆ ಎಂದ ಅವರು, ಪುರಾಯನ ಕಾಲದಲ್ಲಿ ಸಂಸ್ಕೃತಕ್ಕೆ ಲಿಪಿ ಇರಲಿಲ್ಲ.ಇದು ಬಾಯಿಯಿಂದ ಬಾಯಿಗೆ, ಗುರುವಿನಿಂದ ಗುರುವಿಗೆ ಪ್ರಸಾರಗೊಂಡಿದೆ ಎಂದರು.

ಭಾಷಾ ಕೇಂದ್ರ ಅಭಿವೃದ್ಧಿ

       ಸಂಸ್ಕೃತ ಬಗ್ಗೆ ಅನುಭವಿಗಳು ಹೇಳುವಂತೆ ಕೇವಲ ಈ ಭಾಷೆಯನ್ನು ಬಳಸುವುದರಿಂದ ಅನೇಕ ಮಾನಸಿಕ ಮತ್ತು ದೈಹಿಕ ಖಾಯಿಲೆಗಳು ಹತ್ತಿರದ ಸುಳಿಯುವುದಿಲ್ಲ.ಕಾರಣ ಅಂತದೊಂದ್ದು, ಧನಾತ್ಮಕ ತರಂಗಗಳು ಮಂತ್ರವಾಗಿ ಇದು ಸೃಷ್ಠಿ ಸುತ್ತದೆ ಎಂದರು.

       ಶೂನ್ಯ ಮತ್ತು ಮಾನಕ ವ್ಯವಸ್ಥೆಯ ಕಲ್ಪನೆಯನ್ನು ವಿಶ್ವಕ್ಕೆ ಕೊಟ್ಟಿದ್ದೇ ಭಾರತ. ಆಧುನಿಕ ವಿಜ್ಞಾನಿಗಳು ಈ ಕಲ್ಪನೆಗಳನ್ನು ಬಳಸಿಕೊಂಡು ಉನ್ನತ ವೈಜ್ಞಾನಿಕ ಆವಿಷ್ಕಾರಗಳನ್ನು ಕಂಡುಹಿಡಿದರು. ಈ ಮೂಲಕ ವಿಜ್ಞಾನ-ತಂತ್ರಜ್ಞಾನದ ದಿಗಂತವನ್ನು ವಿಸ್ತರಿಸಿದರು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದ ನಾಥ ಸ್ವಾಮೀಜಿ ಬಣ್ಣಿಸಿದರು.

         ಸಂಸ್ಕೃತ ವಿವಿಯ ಕುಲಪತಿ ಪ್ರೊ.ಪದ್ಮಾಶೇಖರ್ ಮಾತನಾಡಿ, ವಿವಿ ವ್ಯಾಪ್ತಿಗೆ 31 ಕಾಲೇಜುಗಳು, 556 ಪಾಠಶಾಲೆಗಳು, 19 ವೇದ ಪಾಠಶಾಲೆಗಳು ಸೇರಿದ್ದು, ಬೆಂಗಳೂರು ವಿವಿ ಆವರಣದಲ್ಲಿ ಭಾಷಾ ಕೇಂದ್ರ ಅಭಿವೃದ್ಧಿಗೆ 10 ಎಕರೆ ಜಾಗ ನೀಡಿವಂತೆ ಒತ್ತಾಯಿಸಿದರು.

         ಪ್ರತಿ ಶೈಕ್ಷಣಿಕ ವರ್ಷದ ಸಾಲಿನಲ್ಲೂ40 ಸಾವಿರ ವಿದ್ಯಾರ್ಥಿಗಳು ಸಂಸ್ಕೃತ ಕಲಿಯುತ್ತಾರೆ. ಇವುಗಳಲ್ಲಿ ಮೂರು ಸರ್ಕಾರಿ ಕಾಲೇಜುಗಳಿದ್ದು, ಹತ್ತು ಅನುದಾನ ಸಹಿತ ಕಾಲೇಜುಗಳು ಹಾಗೂ ಹದಿನೆಂಟು ಅನುದಾನ ರಹಿತ ಕಾಲೇಜುಗಳಿವೆ ಎಂದು ವಿವರಿಸಿದರು.

ಮೌಲ್ಯ ಗೊತ್ತಿಲ್ಲ ಕಿಡಿ

        ಇತ್ತೀಚಿಗೆ ಕೆಲ ಸಂಘಟನೆಗಳು ಭಗವದ್ಗೀತೆ ಸುಟ್ಟು ಅಪಮಾನ ಮಾಡಿರುವುದನ್ನು ಖಂಡಿಸಿದ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥರು, ಭಗವದ್ಗೀತೆನೊಳಗಿರುವ ಸಂದೇಶ, ಮೌಲ್ಯವನ್ನು ಅರ್ಥ ಮಾಡಿಕೊಳ್ಳದವರು ಗ್ರಂಥವನ್ನು ಸುಟ್ಟು ಅಪಮಾನಗೊಳಿದ್ದಾರೆ ಎಂದು ದೂರಿದರು.

        ಇತ್ತೀಚಿಗೆ ದೆಹಲಿಯಲ್ಲಿ ಸಂವಿಧಾನ ಸುಟ್ಟಿದ್ದಕ್ಕೆ ಎರಡು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಕೆಲ ದಲಿತ ಸಂಘಟನೆಗಳ ಮುಖಂಡರು, ಭಗವದ್ಗೀತೆ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದನ್ನು ವಿರೋಧಿಸಿದ ಶ್ರೀಗಳು ಭಗವದ್ಗೀತೆ ಯಲ್ಲಿ ಯಾವುದೇ ರೀತಿಯಲ್ಲಿ ಮಾನವ ಹಾನಿಕಾರಕ ಸಂದೇಶಗಳು ಇಲ್ಲ. ಯಾವುದು ದುರದ್ದೇಶದಿಂದಾಗಿ, ಈ ಘಟನೆ ನಡೆದು ಹೋಗಿದೆ.ಅಲ್ಲದೆ, ಈ ಭಾಷೆಯ ವ್ಯಾಪ್ತಿ ಹೆಚ್ಚಾಗಬೇಕು.ದೇಶದ ಏಕತೆ ಸಂಸ್ಕೃತ ಭಾಷೆಯಿಂದಲೇ ಸಾಧ್ಯ ಎಂದು ಹೇಳಿದರು.

ಪುರಾತನ ಭಾಷೆ

         ಸಂಸ್ಕೃತ ಒಂದು ವರ್ಗಕ್ಕೆ, ಒಂದು ಗುಂಪಿಗೆ ಸೇರಿದ ಭಾಷೆ ಎನ್ನತ್ತಾರೆ.ಆದರೆ, ಈ ಭಾಷೆಯನ್ನು ಪುರಾತನ ಕಾಲದಿಂದಲೂ ಎಲ್ಲಾ ಜಾತಿ, ಪಂಗಡದವರು ಬಳಕೆ ಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದ ಪುರಾವೆಗಳು ಇವೆ ಎಂದ ಅವರು, ಭಾಷೆಗಳಲ್ಲಿ ಸಂಸ್ಕೃತ ಊಟ ಇದ್ದಂತೆ, ಆದರೆ, ಎಲ್ಲರೂ ಊಟ ಬಿಟ್ಟು ನೀರು ಕುಡಿಯುತ್ತಾರೆ ಎಂದು ಅಭಿಪ್ರಾಯ ಪಟ್ಟರು.

        ಸಂಸ್ಕೃತ ದೇವ ಭಾಷೆ ಎನ್ನುತ್ತಾರೆ.ಆದರೆ, ಈ ಭಾಷೆ ಲೋಕಾ ಭಾಷೆ ಆಗಬೇಕು.ಹೀಗಾದರೆ, ಮಾತ್ರ ಸಂಸ್ಕೃತ ಶಾಶ್ವತ ಉಳಿಸಲು ಸಾಧ್ಯ.ಇನ್ನೂ, ಸಂಸ್ಕೃತ ಭಾಷೆಯಲ್ಲಿ ಅತ್ಯುತ್ತಮ ಸಾಹಿತ್ಯ, ಮಹಾಕಾವ್ಯ, ತರ್ಕ, ವಿಜ್ಞಾನ, ಅಧ್ಯಾತ್ಮ, ಆಯುರ್ವೇದ ಇನ್ನು ಅನೇಕ ವಿಷಯಕ್ಕೆ ಸಂಬಂಧಿಸಿದ ಹಲವಾರು ಗ್ರಂಥಗಳ ರಚನೆಯಾಗಿದೆ. ಭಾರತ ದೇಶದ ಮೂಲ ಸಂಸ್ಕೃತಿ ಸಂಸ್ಕೃತ ಭಾಷೆಯಲ್ಲಿ ಅಡಕವಾಗಿದೆ ಎಂದು ನುಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap