ಕಾನೂನು ಕೈಗೆತ್ತಿಕೊಳ್ಳುವುದು ಅಪರಾಧ: ಗೋ ರಕ್ಷಕರಿಗೆ ಭಾಗವತ್ ಎಚ್ಚರಿಕೆ

ನವದೆಹಲಿ:

    ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್ ) ಮುಖ್ಯಸ್ಥ ಮೋಹನ್ ಭಾಗವತ್ ಅವರು ಕಾನೂನು ಕೈಗೆತ್ತಿಕೊಳ್ಳುವುದು ಅಪರಾಧ ಎಂದು ಹೇಳುವ ಮೂಲಕ ಪರೋಕ್ಷವಾಗಿ ಗೋ ರಕ್ಷಕರಿಗೆ ಬುಧವಾರ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

    ದೆಹಲಿಯಲ್ಲಿ ನಡೆಯುತ್ತಿರುವ ‘ಭವಿಷ್ಯದ ಭಾರತ: ಆರೆಸ್ಸೆಸ್‌ ದೃಷ್ಟಿಕೋನ’ ವಿಚಾರದ ಕುರಿತು ಮೂರು ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದ ಭಾಗವತ್‌, ಅಂತರ್-ಜಾತಿ ವಿವಾಹಕ್ಕೆ ಆರ್ ಎಸ್ಎಸ್ ವಿರೋಧ ಇಲ್ಲ. ಅದು ಸಂಪೂರ್ಣ ಒಬ್ಬ ಪುರುಷ ಮತ್ತು ಮಹಿಳೆಗೆ ಸಂಬಂಧಿಸಿದ ವಿಚಾರ ಎಂದು ಹೇಳಿದ್ದಾರೆ.

    ಅಂತರ್ ಜಾತಿ ವಿವಾಹ, ಶಿಕ್ಷಣ, ಗೋ ರಕ್ಷಕರ ಹಲ್ಲೆ ಪ್ರಕರಣಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಭಾಗವತ್, ಸಂಘ ಪರಿವಾರದವರೇ ಹೆಚ್ಚು ಅಂತರ್ – ಜಾತಿ ವಿವಾಹವಾಗಿದ್ದಾರೆ ಎಂದರು.

    ಭಾರತಕ್ಕೆ ಹೊಸ ಶಿಕ್ಷಣ ನೀತಿಯ ಅಗತ್ಯ ಇದೆ. ಶಿಕ್ಷಣ ಸಂಸ್ಥೆಗಳು ಕೇವಲು ಪದವಿಗಳನ್ನು ಮಾತ್ರ ನೀಡುತ್ತಿವೆ. ಸಂಶೋಧನೆಗಳು ನಡೆಯುತ್ತಿಲ್ಲ ಎಂದು. ಅಲ್ಲದೆ ನಾವು ಇಂಗ್ಲಿಷ್ ಸೇರಿದಂತೆ ಯಾವುದೇ ಭಾಷೆಗೆ ವಿರೋಧ ವ್ಯಕ್ತಪಡಿಸಿಲ್ಲ. ನಮಗೆ ಪ್ರಾವಿಣ್ಯತೆ ಪಡೆದ ಭಾಷಣಕಾರರ ಅಗತ್ಯ ಇದೆ ಎಂದರು.ಮಹಿಳೆಯರಿಗೆ ಸುರಕ್ಷಿತವಾದ ವಾತಾವರಣ ನಿರ್ಮಿಸಬೇಕಾಗಿದೆ ಎಂದು ಮೋಹನ್ ಭಾಗವತ್ ಅವರು ಹೇಳಿದ್ದಾರೆ.

                           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap