ಕ್ಷೇತ್ರದ ರೈತರಿಗೆ ಹೆಚ್ಚಿನ ನೆರವು ನೀಡಲು ಸರ್ಕಾರ ಸದಾಸಿದ್ದ :ಬಿ.ಎನ್.ಚಂದ್ರಪ್ಪ

ಚಳ್ಳಕೆರೆ

              ಕ್ಷೇತ್ರದ ಪರಿಶಿಷ್ಟ ವರ್ಗದ ರೈತ ಬಂಧುಗಳಿಗೆ ಪರಿಶಿಷ್ಟ ವರ್ಗಗಳ ನಿಗಮದ ವತಿಯಿಂದ ಕೃಷಿ ಕಾರ್ಯಗಳಿಗೆ ಚೇತನ ನೀಡಲು ರಿಯಾಯ್ತಿ ದರಲ್ಲಿ ಪಂಪ್ ಸೆಟ್ ಮೋಟಾರ್ ಮತ್ತು ಇತರೆ ಸಲಕರಣೆಗಳನ್ನು ನೀಡಲಾಗುತ್ತಿದ್ದು, ಪರಿಶಿಷ್ಟ ವರ್ಗದ ರೈತರು ಇದರ ಸದುಪಯೋಗವನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳುವಂತೆ ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ತಿಳಿಸಿದರು.
            ಅವರು, ಬುಧವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಕ್ಷೇತ್ರದ ಪರಿಶಿಷ್ಟ ವರ್ಗದ ರೈತರಿಗೆ ನಿಗಮದ ವತಿಯಿಂದ ನೀಡಲಾದ ಪಂಪ್‍ಸೆಟ್ ಹಾಗೂ ಪೈಪ್‍ಗಳನ್ನು ವಿತರಣೆ ಮಾಡಿ ಮಾತನಾಡಿದರು. ರಾಜ್ಯ ಸರ್ಕಾರ ರೈತರಿಗೆ ಹೆಚ್ಚಿನ ರೀತಿಯ ಸವಲತ್ತುಗಳನ್ನು ನೀಡುವ ಮೂಲಕ ರೈತರ ಅಭ್ಯುದಯಕ್ಕೆ ಸಹಕರಿಸುತ್ತಿದೆ ಎಂದರು.
            ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಕಳೆದ 2016-17ನೇ ಸಾಲಿನಲ್ಲಿ ಪರಿಶಿಷ್ಟ ವರ್ಗದ ನಿಗಮದಿಂದ 107 ಫಲಾನುಭವಿಗಳನ್ನು ಗುರುತಿಸಿದ್ದು, ಅವರಿಗೆ ಇಂದು ಮೊದಲ ಕಂತಾಗಿ 25 ಫಲಾನುಭವಿಗಳಿಗೆ ಈ ಪರಿಕರಗಳನ್ನು ನೀಡಲಾಗುತ್ತಿದೆ. ರಾಜ್ಯ ಪರಿಶಿಷ್ಟ ವರ್ಗದ ನಿಗಮ ಪ್ರತಿಯೊಬ್ಬ ಫಲಾನುಭವಿಗೂ 2 ಲಕ್ಷ ಸಾಲವನ್ನು ನೀಡುತ್ತಿದ್ದು ಇದರಲ್ಲಿ 1.50 ಲಕ್ಷ ಸಬ್ಸಿಡಿ ಇದ್ದು, 50 ಸಾವಿರ ಮಾತ್ರ ಸಾಲವಾಗಿದ್ದು ಅದನ್ನು ಫಲಾನುಭವಿಗಳು ಕಂತುಗಳ ಮೂಲಕ ಪಾವತಿ ಮಾಡಬೇಕಿದೆ ಎಂದರು.
ನಿಗಮದ ತಾಲ್ಲೂಕು ಅಭಿವೃಧ್ಧಿ ಅಧಿಕಾರಿ ಮೂರ್ಕಣ್ಣಪ್ಪ ಮಾತನಾಡಿ, ಶಾಸಕರ ಮಾರ್ಗದರ್ಶನದಲ್ಲಿ ನಿಯಮಗಳ ಅಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಹಂತ ಹಂತವಾಗಿ ಆಯ್ಕೆಯಾದ ಎಲ್ಲಾ ಫಲಾನುಭವಿಗಳಿಗೆ ನಿಗಮದ ವತಿಯಿಂದ ಸೌಲಭ್ಯ ಒದಗಿಸಲಾಗುವುದು ಎಂದರು.
             ಫಲಾನುಭವಿ ದೊಡ್ಡ ಚೆಲ್ಲೂರಿನ ಪಾರ್ವತಮ್ಮ ಮಾತನಾಡಿ, ಶಾಸಕರು ರೈತ ಸಮುದಾಯಕ್ಕೆ ಅನೇಕ ರೀತಿಯ ಸೌಲಭ್ಯಗಳನ್ನು ಸರ್ಕಾರದಿಂದ ನೀಡುತ್ತಿದ್ದಾರೆ. ನಮಗೆ ಇರುವ ಅಲ್ಪ ಜಮೀನಿನಲ್ಲಿ ಬೋರಾಕಿಸಿದ್ದು ನೀರು ಬಿದಿದ್ದು, ಪಂಪ್ ಸೆಟ್ ಅಳವಡಿಸಲು ಹಣದ ಕೊರತೆ ಇತ್ತು ಶಾಸಕರೇ ಗ್ರಾಮಕ್ಕೆ ಬಂದಾಗ ಮಾಹಿತಿ ಪಡೆದು ನಮಗೆ ಸಬ್ಸಿಡಿ ದರದಲ್ಲಿ ಉಪಕರಣಗಳನ್ನು ಒದಗಿಸಿದ್ದು ಸಂತಸ ತಂದಿದೆ ಎಂದರು.
              ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರೆಡ್ಡಿ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅದ್ಯಕ್ಷ ಟಿ.ಗಿರಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ವೀರೇಶ್, ನಗರಸಭಾ ಸದಸ್ಯರಾದ ಕೆ.ವೀರಭದ್ರಪ್ಪ, ಎಂ.ಜೆ.ರಾಘವೇಂದ್ರ, ವೈ.ಪ್ರಕಾಶ್, ಕಾಂಗ್ರೆಸ್ ಪಕ್ಷದ ಮುಖಂಡರಾದ ವಿ.ರಾಮು, ಅತಿಕ್ ಊರ್ ರೆಹಮಾನ್, ಹನುಮಂತಪ್ಪ, ಕೃಷ್ಣ, ಪ್ರಕಾಶ್, ಸಿ.ಟಿ.ಶ್ರೀನಿವಾಸ್, ಜಿ.ಮಾರಣ್ಣ, ಬೋರಣ್ಣ ಮುಂತಾದವರು ಉಪಸ್ಥಿತರಿದ್ದರು

Recent Articles

spot_img

Related Stories

Share via
Copy link
Powered by Social Snap