ಗೀತಾಗೋವಿಂದಂಗೆ ಉತ್ತಮ ರೆಸ್ಪಾನ್ಸ್

ಯಾವುದೇ ಒಂದು ಚಿತ್ರ ಹಿಟ್ ಹಾಗೂ ಸೂಪರ್ ಹಿಟ್ ಆಗಬೇಕಾದ್ರೆ ಅದರ ಕಥೆ ಚೆನ್ನಾಗಿರಬೇಕು. ಅದೇ ರೀತಿ ನಿರ್ದೇಶನ ಚೆನ್ನಾಗಿರಬೇಕು. ಅಂತಾರೆ ಅಭಿಮಾನಿಗಳು. ಆದರೆ ದಿನಕ್ಕೊಂದು ಹೊಸ ಕಥೆ ಎಲ್ಲಿಂದ ಬರುತ್ತದೆ. ಹೇಗೆ ಸೃಷ್ಟಿ ಮಾಡಬೇಕು ಎಂಬ ಗೊಂದಲಗಳು ಎಲ್ಲರಲ್ಲೂ ಇರುತ್ತವೆ. ಆದರೂ ಇದ್ದ ಕಥೆಗೆ ಹೊಸದೊಂದು ರೂಪ ಕೊಟ್ಟು ಅದನ್ನು ಜನರು ಮೆಚ್ಚುವಂತೆ ಮಾಡುವ ಕೆಲಸ ನಿರ್ದೇಶಕನಲ್ಲಿ ಇರಬೇಕು. ಆಗ ಮಾತ್ರ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಬರಲು ಸಾಧ್ಯ. ಅಂತಹದ್ದೇ ಸಿನಿಮಾ ಒಂದು ಆಗಸ್ಟ್ 15ಕ್ಕೆ ಬಿಡುಗಡೆ ಹೊಂದಿದ್ದು, ಉತ್ತಮ ಪ್ರತಿಕ್ರಿಯೆ ದೊರೆಕಿದೆ. ಅದರ ಸ್ಟೋರಿ ಮುಂದೆ ಓದಿ.

ಗೀತಾಗೋವಿಂದಂ ಕಥೆಯನ್ನು ಬರೆದು ನಿರ್ದೇಶನ ಮಾಡಿದ ಪರಶುರಾಮ್, ಉತ್ತಮವಾಗಿ ಸಿನಿಮಾವನ್ನು ಅಭಿಮಾನಿಗಳಿಗೆ ನೀಡಿದ್ದಾರೆ ಎನ್ನಬಹುದಾಗಿದೆ. ಅರ್ಜುನ್ ರೆಡ್ಡಿ ಚಿತ್ರದ ನಂತರ ವಿಜಯ್‍ದೇವರಕೊಂಡ ಅಭಿನಯಿಸಿದ ಸಿನಿಮಾ ಗೀತಾಗೋವಿಂದಂ ಸಿನಿಮಾ ಬಿಡುಗಡೆಗೆ ಮುನ್ನವೇ ಟ್ರೆಂಡ್ ಸೃಷ್ಠಿ ಮಾಡಿತ್ತು. ಬರೀ ಹಾಡುಗಳ ಮೂಲಕವೇ ಟ್ರೆಂಡ್ ಕ್ರಿಯೇಟ್ ಮಾಡಿದ ಈ ಸಿನಿಮಾದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯ ಚೆನ್ನಾಗಿದೆ ಎನ್ನುತ್ತಾರೆ ಅಭಿಮಾನಿಗಳು.

ಇನ್ನೂ ಈ ಚಿತ್ರದ ಬಗ್ಗೆ ಹೇಳುವುದಾದರೆ, ಲೆಕ್ಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿಜಯ್‍ಗೆ ಸಂಪ್ರಾದಾಯಿಕವಾಗಿರುವ ಹೆಣ್ಣು ಮಕ್ಕಳು ಎಂದರೆ ಗೌರವ. ತಾನು ಮದುವೆಯಾಗಲು ಬಯಸುವ ಹುಡುಗಿ ಯಾವ ರೀತಿ ಇರಬೇಕು ಎಂಬ ವಿಷಯದಲ್ಲಿ ಉತ್ತಮ ಗುಣಗಳನ್ನು ಹೊಂದಿರಬೇಕು ಎಂಬುದನ್ನು ಹೆಚ್ಚಾಗಿ ಪ್ರತಿನಿಧಿಸುತ್ತಾನೆ. ಈ ವಿಷಯದಲ್ಲಿ ಎಷ್ಟೇ ಜನ ಪ್ರಪೋಸ್ ಮಾಡಿದರೂ ಒಪ್ಪುವುದಿಲ್ಲ. ಒಂದು ದಿನ ದೇವಸ್ಥಾನದಲ್ಲಿ ನಟಿ ರಶ್ಮಿಕಾ ಮಂದಣ್ಣರನ್ನು ನೋಡುವ ಪ್ರೀತಿಯಲ್ಲಿ ಬೀಳುತ್ತಾನೆ. ಒಂದು ದಿನ ತನ್ನ ತಂಗಿಯ ಮದುವೆ ಹಿನ್ನೆಲೆಯಲ್ಲಿ ಕಾಕಿನಾಡ ಪ್ರದೇಶಕ್ಕೆ ಹೋಗಬೇಕಾದರೆ ಅಚಾನಕವಾಗಿ ರಶ್ಮಿಕಾ ತನ್ನ ಪಕ್ಕದ ಸೀಟಿಗೆ ಬರುತ್ತಾಳೆ. ಆ ವೇಳೆ ನಡೆಯುವ ಒಂದು ಘಟನೆಯಿಂದ ರಶ್ಮಿಕಾ ಕಣ್ಣಿಗೆ ಕೆಟ್ಟವನಾಗುತ್ತಾನೆ ನಟ ವಿಜಯ್, ನಂತರದಲ್ಲಿ ವಿಜಯ್ ಬಗೆಗಿನ ಬಗ್ಗೆ ನಿಜಾಂಶಗಳು ತಿಳಿದು ರಿಯಲೈಜ್ ಆಗುತ್ತಾಳೆ. ಮುಂದೆ ಏನಾಗುತ್ತದೆ ಎಂಬುದು ಎರಡನೇ ಪಾರ್ಟ್‍ನಲ್ಲಿ ನೋಡಬೇಕಿದೆ.

ವಿಜಯ್ ದೇವರಕೊಂಡ ತನ್ನ ಕೊಟ್ಟ ಪಾತ್ರಕ್ಕೆ ನೂರಕ್ಕೇ ನೂರರಷ್ಟು ನ್ಯಾಯ ಒದಗಿಸಿದ್ದಾನೆ ಎಂದರೂ ತಪ್ಪಾಗಲಾರದು. ನಿಧನರಾದ ತನ್ನ ತಾಯಿಯನ್ನು ತನ್ನ ಮಡದಿಯಲ್ಲಿ ನೋಡಿಕೊಳ್ಳುವ ಮಗನಾಗಿ ಉತ್ತಮ ಅಭಿನಯ ತೋರಿದ್ದಾನೆ. ಅದೇ ರೀತಿ ರಶ್ಮಿಕಾ ಮಂದಣ್ಣಾ ಕೂಡ ತಾನೇನು ಕಡಿಮೆ ಎಂಬಂತೆ ಅಭಿನಯ ಮಾಡಿ ತೆಲುಗು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.
ಕೆಲ ಕಾಮಿಡಿ ಸೀನ್ಸ್ ಇದ್ದರೂ, ಸ್ವಲ್ಪ ಬೋರಿಂಗ್ ಅನ್ನಿಸುತ್ತೆ. ಆದರೂ ಹಾಡುಗಳಿಂದ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ. ಸಿನಿಮಾ ನೋಡಲು ಹೋದವರಿಗೆ ಫ್ಯಾಮಿಲಿ ಸೆಂಟಿಮೆಂಟ್ ವರ್ಕೌಟ್ ಆಗುತ್ತದೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲ. ನಾವು ಹೇಳಿದ್ದು, ಸ್ವಲ್ಪ ವಿಷಯವಷ್ಟೇ ನೀವು ಒಮ್ಮೆ ಸಿನಿಮಾ ಥಿಯೇಟರ್‍ಗೆ ಹೋಗಿ ಒಮ್ಮೆ ಸಿನಿಮಾ ನೋಡಿ ನಿಮ್ಮ ಅಭಿಪ್ರಾಯವನ್ನು ಈ ಕಾಮೆಂಟ್ ಬಾಕ್ಸ್ ಒಳಗೆ ಹಾಕಿ

Recent Articles

spot_img

Related Stories

Share via
Copy link
Powered by Social Snap