ತಾಲ್ಲೂಕಿನ ಶಿಕ್ಷಕರಿಗೆ ಜುಲೈ ತಿಂಗಳ ವೇತನವಿನ್ನೂ ಪಾವತಿಯಾಗಿಲ್ಲ

ತುರುವೇಕೆರೆ

               ಆಗಸ್ಟ್ ತಿಂಗಳು ಮುಗಿಯುತ್ತಾ ಬಂದರೂ, ಜುಲೈ ತಿಂಗಳ ವೇತನ ಬಟವಾಡೆಯಾಗದೆ ತಾಲ್ಲೂಕಿನ ಪ್ರಾಥಮಿಕ, ಪ್ರೌಢ ಶಾಲೆಗಳ ನೂರಾರು ಶಿಕ್ಷಕರು ಹಾಗೂ ಇನ್ನಿತರ ಇಲಾಖೆಗಳ ಸರ್ಕಾರಿ ನೌಕರರು ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ತಾಲ್ಲೂಕಿನಲ್ಲಿ 270 ಸರ್ಕಾರಿ ಪ್ರಾಥಮಿಕ, 6 ಅನುದಾನಿತ ಪ್ರಾಥಮಿಕ ಶಾಲೆಗಳಿವೆ. ಸರ್ಕಾರಿ ಪ್ರೌಢ ಶಾಲೆ 17, ಅನುದಾನಿತ ಪ್ರೌಢ ಶಾಲೆ 25 ಮತ್ತು ತಾಲ್ಲೂಕಿನ ಕೆಲ ಇಲಾಖೆಗಳ ಸರ್ಕಾರಿ ನೌಕರರಿಗೆ ಇದುವರೆವಿಗೂ ಜುಲೈ ತಿಂಗಳ ವೇತನವಾಗಿಲ್ಲ. ಶಿಕ್ಷಣ ಇಲಾಖೆ ಹಾಗು ಇನ್ನಿತರ ಇಲಾಖೆಗಳ ಸಿಬ್ಬಂದಿಗೆ ಜುಲೈ ತಿಂಗಳ ವೇತನ ಬಿಲ್ ಸಿದ್ದತೆ ಮಾಡಿಕೊಂಡರೂ ಜಿಲ್ಲಾ ಪಂಚಾಯಿತಿಯಿಂದ ಇಲ್ಲಿಯವರೆಗೂ ಅಲಾಟ್‍ಮೆಂಟ್ ಬರದೆ ನಿತ್ಯವೂ ಸರ್ಕಾರಿ ನೌಕರರು ಖಜಾನೆ ಹಾಗೂ ಉಪಖಜಾನೆಗೆ ಎಡತಾಕುವಂತಾಗಿದೆ.

               ಶಿಕ್ಷಣ ಇಲಾಖೆಯ ಆಯುಕ್ತರು ತಿಂಗಳ 1 ನೇ ತಾರೀಖು ಎಲ್ಲ ಶಿಕ್ಷಕರಿಗೂ ವೇತನ ನೀಡಬೇಕೆಂಬ ಆದೇಶ ನೀಡಿದ್ದರೂ ಇಲ್ಲಿಯರೆಗೂ ಯಾವೊಂದು ತಿಂಗಳೂ ಒಂದನೇ ತಾರೀಖು ಸಂಬಳವಾಗಿಲ್ಲ. ಈಗಾಗಲೇ 2 ತಿಂಗಳಾಗುತ್ತಾ ಬಂದರೂ ಸಂಬಳವಾಗದಿದ್ದರೆ ಮನೆ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಹಾಗು ಇನ್ನಿತರ ಕೆಲಸಗಳಿಗೆ ಹಣವಿಲ್ಲದೆ ಏನು ಮಾಡುವುದು? ಸಾಲದಕ್ಕೆ ತುರುವೇಕೆರೆಯಲ್ಲಿ ಶಿಕ್ಷಣ ಮತ್ತು ಇನ್ನಿತರ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುಪಾಲು ನೌಕರರು ಹೊರ ತಾಲ್ಲೂಕು, ಜಿಲ್ಲೆಗಳಿಂದ ಬಂದವರು. ಇವರುಗಳು ನಿತ್ಯದ ಖರ್ಚಿಗಾಗಿ ಅವರಿವರ ಬಳಿ ಸಾಲಸೋಲ ಮಾಡಬೇಕಾಗಿದೆ. ಸಾರ್ವಜನಿಕರ ಸೇವೆ ಮಾಡುವ ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೆ ನಿಗದಿತ ಸಮಯಕ್ಕೆ ಸಂಬಳ ನೀಡದೆ ಹೋದರೆ ಅವರ ಸಂಸಾರದ ಗತಿ ಏನು ಎಂದು ನೌಕರರು ಪ್ರಶ್ನಿಸುತ್ತಿದ್ದಾರೆ.

               ಇದಲ್ಲದೆ 6 ವೇತನ ಆಯೋಗದ ನೂತನ ಎಚ್‍ಆರ್‍ಎಂಎಸ್ ಬಿಲ್‍ಗಳು ತಾಂತ್ರಿಕ ಸಮಸ್ಯೆಯಿಂದ ಶಿಕ್ಷಣ ಇಲಾಖೆಯಲ್ಲಿ ಇದುವರೆಗೂ ನೆನೆÀಗುದಿಗೆ ಬಿದ್ದಿವೆ. ಈಗಾಗಲೇ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ನೂತನ ಎಚ್‍ಆರ್‍ಎಂಎಸ್ ಸಾಫ್ಟ್ ವೇರ್ ಬಿಡಲಾಗಿದೆ ಮತ್ತೆ ಅದಕ್ಕೆ ತಕ್ಕಂತೆ ಬಿಲ್ ಸಹ ಮಾಡಲಾಗಿದೆ. ಆದರೆ ಸರ್ಕಾರಿ ಅನುದಾನಿತ ಪ್ರೌಢ ಶಾಲೆಗಳ 6 ವೇತನ ಆಯೋಗದ ಹೊಸ ಎಚ್‍ಆರ್‍ಎಂಎಸ್ ಬಿಲ್ ಸಾಫ್ಟ್ ವೇರ್ ಇದುವರೆಗೂ ಬಿಡದೆ ಇಲಾಖೆ ಸರ್ಕಾರಿ, ಅನುದಾನಿತ ಶಿಕ್ಷಕರೆಂದು ತಾರತಮ್ಯ ಮಾಡುತ್ತಿದೆ ಎಂದು ಶಿಕ್ಷಕರೊಬ್ಬರು ಅಲವತ್ತುಕೊಂಡರು.

Recent Articles

spot_img

Related Stories

Share via
Copy link
Powered by Social Snap