ನವದೆಹಲಿ:
ರಾಷ್ಟ್ರದ ರಾಜಧಾನಿಯ ಪ್ರತಿಷ್ಟಿತ ವುಶ್ವ ವಿಧ್ಯಾನಿಲಯಗಳಲ್ಲಿ ಒಂದಾದ ದೆಹಲಿ ವಿಶ್ವವಿದ್ಯಾನಿಲಯ ಮರು ಮೌಲ್ಯಮಾಪನ ಶುಲ್ಕದಿಂದ 3 ಕೋಟಿ ರೂಪಾಯಿ ಆದಾಯ ಗಳಿಸಿದೆ.
2015-16, 2017-18 ನೇ ಸಾಲಿನಲ್ಲಿ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯ ಫೋಟೊಕಾಪಿ, ಮರು ಮೌಲ್ಯಮಾಪನ, ಮರು ಪರಿಶೀಲನೆಗೆ ನೀಡಲಾಗಿರುವ ಶುಲ್ಕದಿಂದ ಬರೊಬ್ಬರಿ 3 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಆರ್ ಟಿಐ ತಿಳಿಸಿದೆ. 2015-16 2017-18 ರಲ್ಲಿ ವಿವಿ 2,89,12,310 ರೂಪಾಯಿ ಶುಲ್ಕ ಪಡೆದಿದೆ ಎಂದು ಸ್ವತಃ ದೆಹಲಿ ವಿವಿಯ ಪ್ರಕಟಣೆ ತಿಲಿಸಿದೆ.
ಕಲೇಜು ವಿದ್ಯಾರ್ಥಿಗಳು ತಮಗೆ ಅನುಮಾನ ಇರುವ ತಮ್ಮ ನಿರ್ದಿಷ್ಟ ವಿಷಯದ ಉತ್ತರ ಪತ್ರಿಕೆಯ ಪ್ರತಿ ಪಡೆಯುವುದಕ್ಕೆ 750 ರೂಪಾಯಿ ಹಾಗೂ ಮರುಮೌಲ್ಯಮಾಪನಕ್ಕಾಗಿ 1,000 ರೂಪಾಯೊಗಳ ಶುಲ್ಕ ಪಾವತಿಸಬೇಕು, ಒಟ್ಟಾರೆ ಬಂದಿರುವ ಅಂಕಗಳನ್ನು ಮತ್ತೊಮ್ಮೆ ಪರಿಶೀಲಿಸುವುದಕ್ಕಾಗಿ 750 ರೂಪಾಯಿ ನೀಡಬೇಕಾಗುತ್ತದೆ ಇದೆಲ್ಲಾ ಸೇರಿದರೆ ಒಂದು ಬಾರಿ ಮರು ಮೌಲ್ಯಮಾಪನಕ್ಕೆ 2500 ರೂ ಕರ್ಚು ಮಾಡಬೇಕಿರುತ್ತದೆ.
ದೆಹಲಿ ವಿವಿ ವಿದ್ಯಾರ್ಥಿಯೊಬ್ಬರು ಉತ್ತರ ಪತ್ರಿಕೆಯನ್ನು ವಿದ್ಯಾರ್ಥಿಗಳು ಪರಿಶೀಲನೆ ಮಾಡಲು ಶುಲ್ಕ ವಿಧಿಸುವುದನ್ನು ವಿರೋಧಿಸಿ, ಆರ್ ಟಿಐ ನ ಸೆಕ್ಷನ್ 2(j) ಪ್ರಕಾರ ಉಚಿತವಾಗಿ ಉತ್ತರ ಪತ್ರಿಕೆ ಪರಿಶೀಲನೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದರು. ಈ ಸಂಬಂಧ ಕೇಳಲಾಗಿದ್ದ ಆರ್ ಟಿಐ ಗೆ ಮಾಹಿತಿ ನೀಡಲಾಗಿದ್ದು, ಮರು ಮೌಲ್ಯಮಾಪನ ಶುಲ್ಕದಿಂದ 3 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಹೇಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ