ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮರನ್ನು ಸ್ಮರಿಸಬೇಕು-ಶಾಸಕ ಎಸ್.ವಿ.ರಾಮಚಂದ್ರ

ಜಗಳೂರು :

      ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಹಲವು ಹೋರಾಟಗಾರರ ಜೀವ ಬಲಿದಾನವಾಗಿದ್ದು, ಬ್ರಿಟೀಷರ ದಾಸ್ಯದ ಸಂಕೋಲೆಯಿಂದ ಮುಕ್ತಿಗೊಳಿಸಿ ನಮಗೆ ಸ್ವತಂತ್ರವಾಗಿ ಬದಕಲು ಶ್ರಮಿಸಿದ ಮಹಾತ್ಮರನ್ನು ನೆನೆಯುವ ಮೂಲಕ ದೇಶದ ಐಕ್ಯತೆಯನ್ನು ಎತ್ತಿ ಹಿಡಿಯಬೇಕೆಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

      ಪಟ್ಟಣದ ಗುರುಭವನದ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ 72ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

      ದೇಶಕ್ಕೆ ಸ್ವತಂತ್ರ್ಯ ಬಂದು 71 ವರ್ಷ ಕಳೆದರೂ ಇನ್ನು ಹಲವು ಜಲಂತ ಸಮಸ್ಯೆಗಳು ಕಣ್ಣೆದುರಿಗೆ ಇದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಕ್ಕೂಟದ ವ್ಯವಸ್ಥೆಯ ಎಲ್ಲಾ ರಾಜ್ಯಗಳು ಸಹ ಎಲ್ಲಾ ಸಮುದಾಯದ ಏಳಿಗೆಗಾಗಿ ಶ್ರಮಿಸುವ ಮೂಲಕ ಮಹಾತ್ಮಗಾಂಧೀಜಿಯವರ ಗ್ರಾಮೀ ಣಾಭಿವೃದ್ದಿ ಕನಸುಗಳನ್ನು ನನಸು ಮಾಡಬೇಕಿದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಭಾರಿ ಇಲ್ಲಿನ ಮತದಾರರು ನನ್ನ ಮೇಲೆ ಅಭಿವೃದ್ದಿಯ ನಿರೀಕ್ಷೆ ಇಟ್ಟು ವಿಧಾನಸಭೆಗೆ ಆರಿಸಿಕಳುಹಿಸಿದ್ದಾರೆ. ಮತದಾರರು ಮತ್ತು ಸಾರ್ವಜನಿಕರ ನಿರೀಕ್ಷೆಯಂತೆ ಸರ್ಕಾರದ ಅನುದಾನಗಳನ್ನು ತಂದು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇವೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಶಾಲಾ ಮಕ್ಕಳ ಯೋ ಗಾಕ್ಷೇಮದ ಜವಾಬ್ದಾರಿ ಜನಪ್ರತಿನಿಧಿಯಾಗಿ ನನ್ನ ಮೇಲಿದ್ದು, ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಶ್ರಮವಹಿಸಿ ಕೆಲಸ ಮಾಡಲಾಗುವುದು ಎಂದರು. ಇದೇ ವೇಳೆ ಧ್ವಜವಂದನಾ ಕಾರ್ಯಕ್ರಮದಲ್ಲಿ ಅತ್ಯುತ್ತಮವಾಗಿ ವಂದನಾ ಕಾರ್ಯಕ್ರಮ ನಡೆಸಿಕೊಟ್ಟ ಶಾಲೆಗಳಿಗೆ ತಲಾ 5 ಸಾವಿರ ನಗದು ಬಹುಮಾನ ನೀಡಿದರು.

      ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಯ ಅಧ್ಯಕ್ಷರಾದ ತಹಶೀಲ್ದಾರ್ ಶ್ರೀಧರ್‍ಮೂರ್ತಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ದೇಶದ ಭಾವೈಕ್ಯತೆಯನ್ನು ಸಾರುವಂತಹ ಹಬ್ಬವಾಗಿದ್ದು, ಸ್ವಾತಂತ್ರ್ಯ ದಿನಾಚರಣೆ ದೇಶದ ಅತ್ಯುನ್ನತ ಹಬ್ಬವಾಗಿದೆ. ಎಂದರು.

      ಈ ಭಾರಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಟ್ಟಣದ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಧ್ವಜವಂದನಾ ಕಾರ್ಯಕ್ರಮ ಹಾಗೂ ವೇದಿಕೆ ಸಾಂಸ್ಕೃತಿಕ  ಕಾರ್ಯಕ್ರಮಕ್ಕೆ ಅತೀ ಉತ್ಸಾಹದಿಂದ ಪಾಲ್ಗೊಂಡಿದ್ದರು. ಆದರೆ ವರುಣನ ಆಗಮನದಿಂದಾಗಿ ಕೆಲ ಕಾಲ ಕಾರ್ಯಕ್ರಮಕ್ಕೆ ವ್ಯತ್ಯಯವಾಯಿತು. ನಿಗಧಿತ ಸಮಯಕ್ಕೆ ಧ್ವಜರೋಹಣ ನೆರವೇರದೆ ವಿದ್ಯಾರ್ಥಿ ಗಳು ಮಳೆಯಲ್ಲೇ ಕಾಯಬೇಕಾಯಿತು.

      ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪದೇ ಪದೇ ಮಳೆ ಅಡ್ಡಿಯಾಗುತ್ತಿದ್ದರಿಂದ ವೇದಿಕೆಯನ್ನೇ ಕಾರ್ಯ ಕ್ರಮಕ್ಕೆ ಬಳಸಿಕೊಳ್ಳಲಾಯಿತು. ಅನ್ಯ ಕಾರ್ಯಗಳ ನಿಮಿತ್ತ ಶಾಸಕರು ವೇದಿಕೆಯಿಂದ ನಿರ್ಗಮಿಸು ತ್ತಿದ್ದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವೇದಿಕೆಯಿಂದ ಮಾಯವಾದರು.

      ಪ್ರತಿ ಭಾರಿಯೂ ಸಹ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಆದರೆ ಈ ಭಾರಿ ಈ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಕ್ಕೆ ಪೋಷಕರು ಅಸಮಧಾನ ವ್ಯಕ್ತಪಡಿಸಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಸ್.ಕೆ.ಮಂಜುನಾಥ್, ಶಾಂತಕುಮಾರಿ, ಉಮಾವೆಂಕಟೇಶ್, ಎಪಿಎಂಸಿ ಅಧ್ಯಕ್ಷ ಎನ್.ಎಸ್.ರಾಜು, ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಮುದೇಗೌಡ್ರು ಬಸವರಾಜ್, ಇಓ ಜಾನಿಕಿರಾಂ, ಸಿಪಿಐ ಲತಾ ಕ್ಷೇತ್ರಶಿಕ್ಷಣಾಧಿಕಾರಿ ಈಶ್ವರ್‍ಚಂದ್ರ,ಸ್ವಾತಂತ್ರ್ಯ ಹೋರಾಟಗಾರರಾದ ಕಲ್ಲನಗೌಡ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap