ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹದಗೆಟ್ಟ ರಸ್ತೆ : ನಿರ್ಲಕ್ಷಕ್ಕೆ ಗ್ರಾಮಸ್ಥರ ಅಸಮದಾನ

ಚಳ್ಳಕೆರೆ

            ತಾಲ್ಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಗರದಿಂದ ಸರಸ್ವತಿಪುರ, ಸಿದ್ದಾಪುರ, ನಗರಂಗೆರೆಗೆ ಸಂಪರ್ಕ ನೀಡುವ ರಸ್ತೆಯ ಬಳಿ ಗ್ರಾಮಕ್ಕೆ ಸರಬರಾಜಾಗುವ ಕುಡಿಯುವ ನೀರಿನ ಪೈಪ್ ಹೊಡೆದು ಹಲವಾರು ತಿಂಗಳಗಳ ಕಾಲವಾದರೂ ರಿಪೇರಿ ಕಾಣದೆ ಈ ರಸ್ತೆಯಲ್ಲಿ ಓಡಾಡುವ ಬಹುತೇಕ ವಾಹನ ಸವಾರರಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದ್ದು, ಕೆಲವೊಂದು ವಾಹನಗಳು ಅಪಘಾತಗಳಿಗೆ ಈಡಾಗಿ ಅನಾವಶ್ಯಕ ತೊಂದರೆಗೆ ಒಳಗಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಗ್ರಾಮಸ್ಥರು ತಿಪ್ಪೇಶ್, ಭೂತಲಿಂಗಪ್ಪ, ದುರುಗೇಶ್ ತಮ್ಮ ಅಸಮದಾನವನ್ನು ವ್ಯಕ್ತಪಡಿಸಿದ್ದಾರೆ. 

             ಕಳೆದ ಕೆಲವು ತಿಂಗಳುಗಳಿಂದ ಒಡೆದು ಹೋದ ಪೈಪನ್ನು ರಿಪೇರಿ ಮಾಡದ ಹಿನ್ನೆಲೆಯಲ್ಲಿ ನೀರು ಸೋರಿಕೆಯಾಗಿ ರಸ್ತೆಯ ಮೇಲೆಲ್ಲಾ ಹರಿದು ಇಡೀ ರಸ್ತೆಯೇ ಕೆಸರು ಗದ್ದೆಯಾಗಿದೆ. ಯಾವುದೇ ವಾಹನ ಬಂದಲ್ಲಿ ಸಿಕ್ಕಿಕೊಡು ಪರದಾಡುವ ಪರಿಸ್ಥಿತಿ ಉಂಟಾಗುತ್ತಿದೆ. ಗ್ರಾಮ ಪಂಚಾಯಿತಿ ಆಡಳಿತ ಈ ಬಗ್ಗೆ ನಿರ್ಲಕ್ಷ್ಯೆ ವಹಿಸಿದೆ. ಕೂಡಲೇ ಒಡೆದು ಹೋದ ಪೈಪ್ ದುರಸ್ಥಿ ಮಾಡುವಂತೆ ಗ್ರಾಮಸ್ಥರು ಆಗ್ರಹ ಪಡಿಸಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯಿತಿ ಆಡಳಿತ ಗಮನಕ್ಕೆ ತಂದರೂ ಯಾವುದೇ ಸಮಸ್ಯೆ ಬಗೆಹರಿಸಿದಲ್ಲ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕೆಂದು ಅª

Recent Articles

spot_img

Related Stories

Share via
Copy link
Powered by Social Snap