ನಾಗರೀಕ ರಂಗದಿಂದ ಅಭ್ಯರ್ಥಿಗಳು ಕಣಕ್ಕೆ ಬೆಂಬಲಿಸಲು ಮನವಿ

ತುಮಕೂರು

            ಕಳೆದ 5 ವರ್ಷಗಳ ತುಮಕೂರು ಮಹಾನಗರ ಪಾಲಿಕೆಯ ಆಡಳಿತ ಸಾಕಷ್ಟು ಹೆಸರು ಮಾಡಿದ್ದು ನೂರಾರು ಕೋಟಿಗಳ ಭ್ರಷ್ಟಚಾರ, ಕಳಪೆ ಕಾಮಾಗಾರಿ ಹಾಗೂ ಕಸದ ಸಮಸ್ಯೆ, ಸ್ಮಾರ್ಟ್‍ಸಿಟಿ ಬಿಟ್ಟರೆ ನಗರಾಡಳಿತದಿಂದ ಜನರಿಗೆ ಸುಗಮವಾದ ಸೇವೆಗಳನ್ನು ಒದಗಿಸುವ ನಿಟ್ಟಿನಿಂದಲ್ಲ. ಇಂದು ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ವಾಣಿಜ್ಯಿಕರಣಗೊಳಿಸಿ ಜನರ ಬೇಡಿಕೆಗಳ ಅಯಾಮದಲ್ಲಿ ಸೇವೆಗಳನ್ನು ಒದಗಿಸಲು ಸುಂದರ ನಗರಗಳನ್ನಾಗಿಸುವ ಅಭಿವೃದ್ಧಿಯ ಹೆಸರಿನಲ್ಲಿ ಸ್ಮಾರ್ಟ್ ಸಿಟಿ ಕಂಪನಿಗಳನ್ನು ಆಸ್ಥಿತ್ವಕ್ಕೆ ತಂದು, ಜನರ ಕಲ್ಯಾಣಕ್ಕೆ ಬದಲಾಗಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಸೇವಾ ಶುಲ್ಕ ನಿಗಧಿಗೊಳಿಸಿ ಲಾಭದಾಯಕವಾದ ಉದ್ಯಮನ್ನಾಗಿ ಪರಿವರ್ತಿಸಲಾಗುತ್ತಿದೆ.

            ಆದರೆ ಸಂವಿಧಾನದ ಆಶಯವಾದ ಪ್ರಜಾಪ್ರಭುತ್ವ, ಜನರ ಕಲ್ಯಾಣ ಪಾಲ್ಗೊಳ್ಳುವಿಕೆ ಮತ್ತು ಅಧಿಕಾರ ವಿಕೇಂದ್ರಿಕರಣ, ಪ್ರಜಾ ಪ್ರ್ರತಿನಿಧ್ಯ ಸಾಂಕೇತಿಕರಣಗೊಳಿಸಿ ಕಂಪನಿ ಆಡಳಿತಗಳಿಗೆ ಸ್ಥಳೀಯ ಸಂಸ್ಥೆಗಳನ್ನು ಒಳಪಡಿಸಲಾಗುತ್ತಿದ್ದು, ಇದ್ದರಿಂದ ನಗರದಲ್ಲಿರುವ ಜನ ಸಾಮಾನ್ಯರ ಪ್ರತಿ ಸಮಸ್ಯೆಗಳಿಗೆ ಸ್ಮಾರ್ಟ್ ಹೆಸರು ನೀಡಿ ತೆರಿಗೆ ಪಾವತಿಸುವ ಮಾರುಕಟ್ಟೆ ವ್ಯವಸ್ಥೆಯನ್ನು ಸೃಷ್ಟಿಸುತ್ತಿರುವುದರಿಂದ ಸಂವಿಧಾನದ 74ನೇ ತಿದ್ದುಪಡಿಯಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಮತ್ತು ಅಧಿಕಾರ ವಿಕೇಂದ್ರಿಕರಣ ಈಡೇರದೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಾಯಕ್ಕೆ ಸಿಲುಕಿಸಲಾಗುತ್ತಿದೆ. ಆದ್ದರಿಂದ ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಜನರ ಬಳಿ ಮತ್ತು ಜನರ ಭಾಗವಹಿಸುವಿಕೆಗಾಗಿ ತುಮಕೂರು ನಾಗರೀಕ ರಂಗ ಅಸ್ಥಿತ್ವಕ್ಕೆ ಬಂದಿದ್ದು, ಈ ಚುನಾವಣೆಯಲ್ಲಿ 7 ವಾರ್ಡ್‍ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲಾಗಿದೆ ಹಾಗೂ 12 ವಾರ್ಡ್‍ಗಳಲ್ಲಿ ಸಾಮಾಜಿಕ ನ್ಯಾಯದ ಪರವಿರುವಂತಹ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ. ಹಾಗಾಗಿ ತುಮಕೂರು ನಾಗರೀಕರು ದಿನಾಂಕ 31/8/2018 ರಂದು ನಡೆಯುವ ಚುನಾವಣೆಯಲ್ಲಿ ಈ ಕೆಳಕಂಡ ಅಭ್ಯರ್ಥಿಗಳನ್ನು ಬೆಂಬಲಿಸಿ ಜಾತಿ, ಧರ್ಮ, ಹಣ, ಕೋಮಿನ ಹೆಸರಿನಲ್ಲಿ ಮತ ಖರೀದಿಸುವವರನ್ನು ತಿರಸ್ಕರಿಸಲು ಮನವಿ.

 ತುಮಕೂರು ನಾಗರೀಕ ರಂಗದ ಅಭ್ಯರ್ಥಿಗಳು
1. ವಾರ್ಡ್ ಸಂಖ್ಯೆ 1, ವಿಜಯಲಕ್ಷ್ಮಮ್ಮ, ಕ್ರ ಸಂ 6, ಆಟೋ ಗುರುತು.
2. ವಾರ್ಡ್ ಸಂಖ್ಯೆ 2, ನಾಗೇಂದ್ರ ಕುಮಾರ್, ಸಿ.ಪಿ.ಐ
3. ವಾರ್ಡ್ ಸಂಖ್ಯೆ 4, ರೇಖಾ ಉಮೇಶ, ಕ್ರ ಸಂ 3, (ಸಿಪಿಐಎಂ) ಕುಡುಗೊಲು, ಸುತ್ತಿಗೆ ಮತ್ತು ನಕ್ಷತ್ರದ ಗುರುತು.
4. ವಾರ್ಡ್ ಸಂಖ್ಯೆ 11, ಶಂಕರಪ್ಪ, ಕ್ರ ಸಂ 3, (ಸಿಪಿಐಎಂ) ಕುಡುಗೊಲು, ಸುತ್ತಿಗೆ ಮತ್ತು ನಕ್ಷತ್ರದ ಗುರುತು.
5. ವಾರ್ಡ್ ಸಂಖ್ಯೆ 12, ಸೈಯದ್ ಮುಜೀಬ್ ಅಹ್ಮದ್, ಕ್ರ ಸಂ 5, (ಸಿಪಿಐಎಂ)ಕುಡುಗೊಲು, ಸುತ್ತಿಗೆ ಮತ್ತು ನಕ್ಷತ್ರದ ಗುರುತು.
6. ವಾರ್ಡ್ ಸಂಖ್ಯೆ 16, ಚಿಕ್ಕಮಂಜಣ್ಣ, ಕ್ರ ಸಂ 4, ಬ್ಯಾಟ್ ಗುರುತು.
7. ವಾರ್ಡ್ ಸಂಖ್ಯೆ 17, ಮೊಹಮದ್ ಗೈಬಾನ್, ಕ್ರ ಸಂ 2, ತೆನೆ-ಕುಡಿಗೋಲು.(ಸಿಪಿಐ)
8. ವಾರ್ಡ್ ನಂ,10 ನೂರ್‍ಉನ್ನೀಸಾಬಾನು ಕ್ರ,ಸಂ 7, ಟ್ರ್ಯಾಕ್ಟರ್ ಗುರುತು(ಸ್ವತಂತ್ರ ಅಭ್ಯಾರ್ಥಿ

ತುಮಕೂರು ನಾಗರೀಕ ರಂಗದ ಪ್ರಣಾಳಿಕೆ
1. ತುಮಕೂರು ನಗರದ ಪ್ರತಿ ವಾರ್ಡ್‍ಗೊಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಮಾದರಿ ಸರಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಶುದ್ಧ ನೀರಿನ ಘಟಕ ಒದಗಿಸುವುದು ಹಾಗೂ ನಾಗರೀಕ ಮೂಲಭೂತ ಸೌಲಭ್ಯಗಳಾದ ನೀರು, ರಸ್ತೆ, ಚರಂಡಿ, ವಿದ್ಯುತ್, ಯುಜಿಡಿ ಮತ್ತು ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸುವುದು.
2. ತುಮಕೂರು ನಾಗರೀಕರ ಪಾಲ್ಗೊಳ್ಳುವಿಕೆಗಾಗಿ 35 ವಾರ್ಡ್‍ಗಳಲ್ಲಿಯೂ “ವಾರ್ಡ್ ಕಮಿಟಿ” ರಚಿಸಿ ವಾರ್ಡ್‍ವಾರು ಕಂದುಕೊರತೆಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಅದ್ಯಯನ ಮಾಡಿ ನಗರಾಡಳಿತ ವ್ಯವಸ್ಥೆಯನ್ನು ಪಾರದರ್ಶಕತೆಯಲ್ಲಿ ಜನರ ಬಳಿಗೆ ತರುವುದು.
3. ನಗರಾಡಳಿತವನ್ನು ಲಾಭದಾಯಕಗೊಳಿಸುವಂತಹ ಎಲ್ಲಾ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನ ವಿರೊಧಿ ನೀತಿ ಮತ್ತು ಯೋಜನೆಗಳ ವಿರುದ್ಧ ಧ್ವನಿಯತ್ತಲಾಗುವುದು.
4. ಸ್ಮಾರ್ಟ್‍ಸಿಟಿ ಮತ್ತು ನಗರೋತ್ಥಾನ ಯೋಜನೆಗಳಿಂದ ಇಡೀ ರಾಜ್ಯದಲ್ಲೇ ಅತ್ಯಾಧಿಕ ತೆರಿಗೆ ವಿಧಿಸುತ್ತಿರುವ ತುಮಕೂರು ನಗರ ಪಾಲಿಕೆಯ ತೆರಿಗೆ ವ್ಯವಸ್ಥೆಯನ್ನು ಸುಧಾರಿಸಿ ಜನಸ್ನೇಹಿ ತೆರಿಗೆ ಜಾರಿಗಾಗಿ ಒತ್ತಾಯಿಸುವುದು.
5. ತುಮಕೂರು ನಗರದಲ್ಲಿರುವ ನಿವೇಶನ ರಹಿತರ ಕುಟುಂಗಳಿಗೆ ಪ್ರಧಾನ ಮಂತ್ರಿ ಅವಾಸ್ ಯೋಜನೆ ಮತ್ತು ಮುಖ್ಯಮಂತ್ರಿಗಳ ನಗರ ವಸತಿ ಯೋಜನೆಯಲ್ಲಿ ವಸತಿ ರಹಿತ 21 ಸಾವಿರ ಕುಟುಂಬಗಳಿಗೆ ವಸತಿ ಕಲ್ಪಿಸಲು ಶ್ರಮಿಸಲಾಗುವುದು.
6. ಕಳೆದ 25 ವರ್ಷಗಳಿಂದ ಬಡವರಿಗೆ ನಿವೇಶನ (ಸೈಟ್) ನೀಡಿರುವುದಿಲ್ಲ, ಈ ಅವಧಿಯಲ್ಲಿ ಕನಿಷ್ಟ 5 ಸಾವಿರ ಕುಟುಂಬಗಳಿಗೆ ಸೈಟ್ ವಿತ್ತರಿಸಲು ಕ್ರಮ ಕೈಗೊಳ್ಳಲಾಗುವುದು.
7. ಪ್ರತಿ ವಾರ್ಡ್‍ನಲ್ಲಿ ಬರುವ ಹಕ್ಕುಪತ್ರ ಮತ್ತು ಖಾತೆರಹಿತರನ್ನು ಗುರುತಿಸಿ ಸರಳಖಾತೆ ಆಂದೋಲನ ಕೈಗೊಂಡು ಭೂ ಒಡೆತನ ನೀಡಲು ಶ್ರಮಿಸಲಾಗುವುದು.
8. ನಗರ ಸ್ಥಳೀಯ ಸಂಸ್ಥೆಗಳಿಂದ ಜಾರಿಯಲ್ಲಿರುವ ನಗರ ವಂಚಿತ ಸಮುದಾಯಗಳ ಯೋಜನೆಗಳಾದ ಶೇ24.10%, ಶೇ7.25%, ಶೇ3% ಮತ್ತು ಶೇ1% ಹಾಗೂ ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆಯಲ್ಲಿರುವ ಸೌಲಭ್ಯಗಳನ್ನು ನೈಜ ಫಲಾನುಭವಿಗಳಿಗೆ ತಲುಪಿಸಲು ಶ್ರಮಿಸಲಾಗುವುದು.
9. ನಗರ ಬಡಜನರಾದ ಕೊಳಗೇರಿ ನಿವಾಸಿಗಳ, ಬೀದಿಬದಿ ವ್ಯಾಪಾರಿಗಳು, ಗುತ್ತಿಗೆ ಪೌರಕಾರ್ಮಿಕರು, ಕಟ್ಟಡ ಕಾರ್ಮಿಕರು, ಮನೆಕೆಸಲ ಕಾರ್ಮಿಕರು, ಅಲೆಮಾರಿಗಳು, ವಿಕಲಚೇತನರು ಮತ್ತು ನಿರಾಶ್ರಿತರ ಕಲ್ಯಾಣಕ್ಕಾಗಿ ವಿಶೇಷ ಗಮನ ನೀಡಲಾಗುವುದು.
10. ನಗರ ಬಡಜನರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯಗಳು, ಮಹಿಳೆಯರು ಮತ್ತು ಮಕ್ಕಳು, ವಿಶೇಷ ವರ್ಗಗಳು ಹಾಗೂ ದುಡಿಯುವ ಕಾರ್ಮಿಕರ ಸ್ಥಳೀಯ ಆಡಳಿತದಲ್ಲಿ ಭಾಗವಹಿಸಲು ವಾರ್ಡ್ ಕಮಿಟಿಗಳಲ್ಲಿ ಪ್ರಾತಿನಿಧ್ಯತೆ ನೀಡಲಾಗುವುದು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap